ಬ್ಯಾಂಕಿನಲ್ಲಿ ಹಣವಿಡ್ತೇವೆ, ಬೇಕಾದಾಗ ವಿತ್ ಡ್ರಾ ಮಾಡ್ತೇವೆ. ಅನೇಕರಿಗೆ ಇಷ್ಟು ಮಾತ್ರ ತಿಳಿದಿದೆ. ನಮಗೆ ಬ್ಯಾಂಕ್ ಏನೆಲ್ಲ ಶುಲ್ಕ ವಿಧಿಸುತ್ತೆ, ನಮ್ಮಿಂದ ಬ್ಯಾಂಕ್ ಹೇಗೆ ಹಣ ಗಳಿಸುತ್ತೆ ಎಂಬುದನ್ನು ನಾವು ತಿಳಿಯಬೇಕಿದೆ.
ಈಗಿನ ದಿನಗಳಲ್ಲಿ ಬಹುತೇಕ ಎಲ್ಲರೂ ಕನಿಷ್ಠ ಒಂದು ಬ್ಯಾಂಕ್ ಖಾತೆ ಹೊಂದಿದ್ದಾರೆ. ಸರ್ಕಾರಿ ಸೇವೆಗಳ ಲಾಭ ಪಡೆಯುವ ಜೊತೆಗೆ ಹಣವನ್ನು ಸುರಕ್ಷಿತವಾಗಿಡಲು ಬ್ಯಾಂಕ್ ಖಾತೆ ಅನಿವಾರ್ಯವಾಗಿದೆ. ನಾವು ಇಟ್ಟ ಹಣಕ್ಕೆ ಬ್ಯಾಂಕ್ ಬಡ್ಡಿಯನ್ನು ನೀಡುತ್ತದೆ. ಅಂದ್ರೆ ನಾವು ಒಂದು ಮೊತ್ತದ ಹಣವನ್ನು ಬ್ಯಾಂಕ್ ನಲ್ಲಿ ಠೇವಣಿ ಇಟ್ಟರೆ ಬ್ಯಾಂಕ್ ಅದಕ್ಕಿಂತ ಹೆಚ್ಚಿನ ಹಣವನ್ನು ನಮಗೆ ವಾಪಸ್ ಮಾಡುತ್ತದೆ. ಬ್ಯಾಂಕ್ ಗೆ ಈ ಹೆಚ್ಚಿನ ಹಣ ಎಲ್ಲಿಂದ ಬರುತ್ತದೆ ಎಂದು ನೀವು ಆಲೋಚನೆ ಮಾಡಿದ್ದೀರಾ?
ಬ್ಯಾಂಕ್ (Bank) ಸಾಲ ಕೊಡಲ್ವಾ? ಕೊಟ್ಟ ಸಾಲ (Loan) ಕ್ಕೆ ಬಡ್ಡಿ ಪಡೆಯುತ್ತಲ್ಲ ಅದನ್ನು ನಮಗೆ ನೀಡುತ್ತೆ ಅಂತ ನೀವು ಹೇಳಬಹುದು. ಆದ್ರೆ ಬರೀ ಬಡ್ಡಿ ಹಣದಲ್ಲಿ ಬ್ಯಾಂಕ್ ಹೂಡಿಕೆದಾರರಿಗೆ ಬಡ್ಡಿ (Interest), ಸಿಬ್ಬಂದಿಗೆ ಸಂಬಳ ಸೇರಿದಂತೆ ಉಳಿದ ಖರ್ಚನ್ನು ನಿಭಾಯಿಸಲು ಸಾಧ್ಯವೇ ಇಲ್ಲ. ಬ್ಯಾಂಕ್ ನಮಗೆ ನೀಡಿದ ಸಾಲದ ಮೇಲೆ ಬಡ್ಡಿ ಪಡೆಯುವ ಜೊತೆಗೆ ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕ (Customer)ರಿಂದ ಕೆಲ ಹಣವನ್ನು ವಸೂಲಿ ಮಾಡುತ್ತದೆ. ನಾವಿಂದು ಬ್ಯಾಂಕ್ ಆದಾಯದ ಮೂಲಗಳು ಯಾವುವು ಎಂಬುದನ್ನು ನಿಮಗೆ ಹೇಳ್ತೆವೆ.
ಹೂಡಿಕೆ ಮಾಡುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡ್ಬೇಡಿ!
ಎಸ್‌ಎಂಎಸ್ ಶುಲ್ಕ (SMS Fee) : ಬ್ಯಾಂಕ್ ನಿಂದ ನಿಮಗೆ ಆಗಾಗ ಎಸ್ ಎಂಎಸ್ ಬರ್ತಿರುತ್ತದೆ. ಈ ಎಸ್ ಎಂಎಸ್ ನಿಂದಲೂ ಬ್ಯಾಂಕ್ ಹಣ ಸಂಪಾದನೆ ಮಾಡುತ್ತದೆ. ಗ್ರಾಹಕರಿಗೆ ಉಚಿತ ಎಸ್ ಎಂಎಸ್ ಸೇವೆ ಒದಗಿಸಬೇಕೆಂದು ಆರ್ ಬಿಐ ಸೂಚನೆ ನೀಡಿದೆ. ಆದ್ರೆ ಕೆಲ ಬ್ಯಾಂಕ್ ಗಳು ಎಸ್ ಎಂಎಸ್ ಗೆ ಶುಲ್ಕ ವಸೂಲಿ ಮಾಡುತ್ತವೆ. ಬ್ಯಾಂಕ್ ತನ್ನ ಗ್ರಾಹಕರಿಗೆ ಎಸ್ ಎಂಎಸ್ ಗಾಗಿ ತ್ರೈಮಾಸಿಕ ಶುಲ್ಕ ವಿಧಿಸುತ್ತದೆ. ಕೆಲ ಬ್ಯಾಂಕ್ ಗಳು ಒಂದು ಎಸ್ ಎಂಎಸ್ ಗೆ 5 ಪೈಸೆಯಂತೆ ಗ್ರಾಹಕರ ಬ್ಯಾಂಕ್ ಖಾತೆಗಳಿಂದ ತಿಂಗಳಿಗೆ 25 ರೂಪಾಯಿ ವಸೂಲಿ ಮಾಡುತ್ತದೆ.
ನಿಧಿ ವರ್ಗಾವಣೆಗೆ (Money Transaction) ಶುಲ್ಕ ವಸೂಲಿ ಮಾಡುತ್ತೆ ಬ್ಯಾಂಕ್ : ಇದು ಡಿಜಿಟಲ್ ಯುಗ. ಜನರ ವಹಿವಾಟು ಆನ್ಲೈನ್ ಮೂಲಕ ಆಗ್ತಿದೆ. ಅರೆ ಕ್ಷಣದಲ್ಲಿ ಕುಳಿತಲ್ಲಿಯೇ ಕೆಲಸ ಆಗುವ ಕಾರಣ ಬಹುತೇಕ ಎಲ್ಲರೂ ಆನ್ಲೈನ್ ವರ್ಗಾವಣೆಗೆ ಮುಂದಾಗ್ತಾರೆ. ಬ್ಯಾಂಕ್ ಇದಕ್ಕೆ ಶುಲ್ಕ ವಿಧಿಸುತ್ತದೆ. ಎನ್ ಇಎಫ್ ಟಿ, ಆರ್ ಟಿಜಿಎಸ್, ಐಎಂಪಿಎಸ್ ನಂತಹ ಸೇವೆಗಳಿಗೆ ಪ್ರತ್ಯೇಕ ವಹಿವಾಟು ಮಿತಿಗಳನ್ನು ನಿಗದಿಪಡಿಸಲಾಗಿದೆ. ಐಎಂಪಿಎಸ್ ನಲ್ಲಿ ಒಮ್ಮೆ ಹಣವನ್ನು ವರ್ಗಾಯಿಸಲು 5 ರಿಂದ 50 ರೂಪಾಯಿಗಳನ್ನು ಚಾರ್ಜ್ ಮಾಡಲಾಗುತ್ತದೆ. ನೀವು ಒಂದು ತಿಂಗಳಲ್ಲಿ 5 ವಹಿವಾಟುಗಳನ್ನು ಮಾಡಿದರೆ 250 ರೂಪಾಯಿ ಜೊತೆ ಜಿಎಸ್ ಟಿ ವಿಧಿಸುತ್ತದೆ.
ಡೆಬಿಟ್ (Debit Card) ಮತ್ತು ಎಟಿಎಂ ಕಾರ್ಡ್ (ATM Card) ಶುಲ್ಕ : ಪ್ರತಿಯೊಂದು ಬ್ಯಾಂಕ್ ನ ಎಟಿಎಂ ಚಾರ್ಜ್ ಭಿನ್ನವಾಗಿದೆ. ಬ್ಯಾಂಕ್ ಗಳು ತಿಂಗಳಿಗೆ ಕೆಲವು ಉಚಿತ ವಿತ್ ಡ್ರಾ ಸೇವೆ ನೀಡುತ್ತದೆ. ಅದು ಮುಗಿದ್ಮೇಲೆ ಚಾರ್ಜ್ ಮಾಡುತ್ತದೆ. ಇದಲ್ಲದೆ ಕಾರ್ಡ್‌ಗೆ ನಿರ್ವಹಣಾ ಶುಲ್ಕವನ್ನು ಅದು ವಸೂಲಿ ಮಾಡುತ್ತದೆ. ವರ್ಷಕ್ಕೊಮ್ಮೆ ನಿಮ್ಮ ಖಾತೆಯಿಂದ 100-500 ರೂಪಾಯಿಯನ್ನು ಬ್ಯಾಂಕ್ ಗೆ ಪಾವತಿಸಬೇಕಾಗುತ್ತದೆ.
ಇ ಕಾಮರ್ಸ್ ಬ್ಯಾಂಕಿಂಗ್ ಶುಲ್ಕ (Banking Fee): ಇ ಕಾಮರ್ಸ್ ಶುಲ್ಕಗಳನ್ನು ಬ್ಯಾಂಕ್ ವಸೂಲಿ ಮಾಡುತ್ತದೆ. ಈ ಶುಲ್ಕ ಪ್ರತಿ ವಹಿವಾಟಿಗೆ 20 ರಿಂದ 100 ರೂಪಾಯಿವರೆಗಿದೆ. ಇದು ಇ ಕಾಮರ್ಸ್ ವೆಬ್‌ಸೈಟ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ, ಐಆರ್ ಸಿಟಿಟಿ ಮೂಲಕ ಟಿಕೆಟ್ ಬುಕ್ ಮಾಡುವಾಗ, ಯುಪಿಐ ಪಾವತಿಯಂತಹ ಹಲವಾರು ಸೇವೆಗಳಿಗೆ ಬ್ಯಾಂಕ್‌ಗಳು ಶುಲ್ಕ ವಿಧಿಸುತ್ತವೆ.
Personal Finance : 60ರಲ್ಲಿ ಆರಾಮಾಗಿರ್ಬೇಕೆಂದ್ರೆ 30ರಲ್ಲಿ ಕಷ್ಟಪಡಿ
ಕ್ರೆಡಿಟ್ – ಡೆಬಿಟ್ ಕಾರ್ಡ್ ಸ್ವೈಪ್ ಗೆ ಹಣ : ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡುವುದಕ್ಕೆ ಮಾತ್ರವಲ್ಲದೆ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಸ್ವೈಪ್ ಗೆ ಕೂಡ ಬ್ಯಾಂಕ್ ಹಣ ಪಡೆಯುತ್ತದೆ. ಕ್ರೆಡಿಟ್ ಕಾರ್ಡ್ ಅನ್ನು ಸ್ವೈಪ್ ಮಾಡಿದರೆ ಶೇಕಡಾ 2ರಷ್ಟು ಹೆಚ್ಚುವರಿ ಶುಲ್ಕ ಪಾವತಿಸಬೇಕು. ಹಾಗೆ ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿಸಿದ್ರೂ ಬ್ಯಾಂಕ್ ಗೆ ಶುಲ್ಕ ನೀಡಬೇಕು. ಬ್ಯಾಂಕ್‌ನಲ್ಲಿ ಹಣ ಠೇವಣಿ ಮಾಡಲು ಹೋದರೆ ಅಥವಾ ನಿಮ್ಮ ಬ್ಯಾಂಕ್‌ನಿಂದ ಹಣವನ್ನು ಹಿಂಪಡೆಯಲು ಹೋದರೆ ಅದಕ್ಕೂ ಶುಲ್ಕ ನೀಡಬೇಕು.