GST On Hospital Room: ಸೋಮವಾರದಿಂದ ಆಸ್ಪತ್ರೆ ವೆಚ್ಚ ಇನ್ನಷ್ಟು ದುಬಾರಿ, ಯಾಕೆ ಗೊತ್ತಾ?

By Suvarna News  |  First Published Jul 16, 2022, 5:31 PM IST

*ಜಿಎಸ್ ಟಿ  ಮಂಡಳಿಯ 47ನೇ ಸಭೆಯಲ್ಲಿ ಈ ನಿರ್ಧಾರ
*ಈ ನಿರ್ಧಾರದ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿವೆ
*ಈ ತನಕ ಜಿಎಸ್ ಟಿ ಪರಿಧಿಯಿಂದ ಹೊರಗಿದ್ದ ಆರೋಗ್ಯ ಸೇವಾ ವಲಯ


ನವದೆಹಲಿ (ಜು.16): ಸೋಮವಾರದಿಂದ (ಜು.18) ರೋಗಿಗಳಿಗೆ ಆಸ್ಪತ್ರೆ ವೆಚ್ಚ ಇನ್ನಷ್ಟು ದುಬಾರಿಯಾಗಲಿದೆ. ದಿನಕ್ಕೆ 5,000ರೂ. ಮೇಲ್ಪಟ್ಟ ಆಸ್ಪತ್ರೆಯ ಎಸಿಯೇತರ ರೂಮ್ ಗಳ ಬಾಡಿಗೆ ಮೇಲೆ ಶೇ. 5ರಷ್ಟು ಜಿಎಸ್ ಟಿ ವಿಧಿಸಲು ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)  ಮಂಡಳಿಯ 47ನೇ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದು ಸೋಮವಾರದಿಂದಲೇ ಜಾರಿಗೆ ಬರಲಿದೆ. ತೆರಿಗೆ ದರವನ್ನು ಇನ್ನಷ್ಟು ತರ್ಕಬದ್ಧಗೊಳಿಸುವ ಉದ್ದೇಶದಿಂದ ಜಿಎಸ್ ಟಿ ಮಂಡಳಿ ಈ ನಿರ್ಧಾರ ಕೈಗೊಂಡಿತ್ತು. ಈ ಘೋಷಣೆಯಾಗಿ ಕೆಲವು ದಿನಗಳು ಕಳೆದಿದ್ರೂ ಈ ಬಗ್ಗೆ ಸಾಕಷ್ಟು ಟೀಕೆಗಳು ಕೂಡ ವ್ಯಕ್ತವಾಗುತ್ತಿವೆ. ಆದರೆ, ಸರ್ಕಾರಿ ಅಧಿಕಾರಿಗಳು ಈ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆಸ್ಪತ್ರೆ ಸಂಘಟನೆಗಳು ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಆಸ್ಪತ್ರೆ ರೂಮ್ ಗಳ ಶುಲ್ಕದ ಮೇಲೆ  ಜಿಎಸ್ ಟಿ ಹೇರಿಕೆಯಿಂದ ರೋಗಿಗಳಿಗೆ ಆಸ್ಪತ್ರೆ ವೆಚ್ಚ ಹೆಚ್ಚಲಿದೆ. ಇನ್ನು ಆರೋಗ್ಯ ಸೇವಾ ಕ್ಷೇತ್ರಕ್ಕೂ ಇದು ಅನೇಕ ಸವಾಲುಗಳನ್ನು ಸೃಷ್ಟಿಸಲಿದೆ. ಆರೋಗ್ಯ ಸೇವಾ ವಲಯ ಈ ತನಕ ಜಿಎಸ್ ಟಿಯಿಂದ ಹೊರಗಿತ್ತು. ಆಸ್ಪತ್ರೆ, ವೈದ್ಯಕೀಯ  ಅಥವಾ ಪ್ಯಾರಮೆಡಿಕಲ್ ವೃತ್ತಿನಿರತರು ಜಿಎಸ್ ಟಿ ಪರಿಧಿಯಿಂದ ಹೊರಗಿದ್ದರು. ಅಂದರೆ ಈ ತನಕ ನೀವು ಆಸ್ಪತ್ರೆ ಅಥವಾ ವೈದ್ಯರ ಬಳಿ ಹೋಗಿದ್ರೆ ಆರೋಗ್ಯ ಸೇವೆಗಳ ಮೇಲೆ ಯಾವುದೇ ಜಿಎಸ್ ಟಿ ವಿಧಿಸುತ್ತಿರಲಿಲ್ಲ. 

ಅಸ್ಪತ್ರೆ ಹಾಸಿಗೆಗಳ (Hospial beds) ಮೇಲೆ ಶೇ.5ರಷ್ಟು ಜಿಎಸ್ ಟಿ (GST) ವಿಧಿಸುವ ನಿರ್ಧಾರವನ್ನು ಮರುಪರಿಶೀಲಿಸಬೇಕು. ಏಕೆಂದ್ರೆ ಇದರಿಂದ ರೋಗಿಗಳ ಆರೋಗ್ಯ ಸೇವಾ ವೆಚ್ಚಗಳು ಇನ್ನಷ್ಟು ಹೆಚ್ಚಲಿವೆ ಎಂಬುದು ಆರೋಗ್ಯ ಸೇವಾ ವಲಯದ ಅಭಿಪ್ರಾಯವಾಗಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.62ಕ್ಕೂ ಹೆಚ್ಚು ಜನರು ಆರೋಗ್ಯ ಸೇವೆಗಳಿಗೆ ಖಾಸಗಿ ಆಸ್ಪತ್ರೆಗಳನ್ನು (Private hospitals)  ನೆಚ್ಚಿಕೊಂಡಿದ್ದಾರೆ. ಇದಕ್ಕೆ ಅಲ್ಲಿ ಸಿಗುವ ಅನುಕೂಲಗಳು ಹಾಗೂ ಇತರ ಗುಣಾತ್ಮಕ ಅಂಶಗಳು ಕಾರಣವಾಗಿವೆ. ಹೀಗಿರುವಾಗ ಯಾವುದೇ ಹೆಚ್ಚುವರಿ ತೆರಿಗೆ ಹೇರಿಕೆಯಿಂದ ಸಾರ್ವಜನಿಕರಿಗೆ ಗುಣಾತ್ಮಕ ಆರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯವಾಗದೇ ಇರಬಹುದು ಎಂಬುದು ಆರೋಗ್ಯ ವಲಯದ ವಾದವಾಗಿದೆ.

Tap to resize

Latest Videos

ಜಿಎಸ್‌ಟಿ ವಿರೋಧಿಸಿ ಎಪಿಎಂಸಿ ಕಾಳುಕಡಿ ಮಾರುಕಟ್ಟೆ ಬಂದ್‌

ಒಂದು ದಿನಕ್ಕೆ ಆಸ್ಪತ್ರೆಯ ರೂಮ್ ಬಾಡಿಗೆ 5000ರೂ. ಆಗಿದ್ದರೆ ಆಗ ಜಿಎಸ್ ಟಿ ಮೊತ್ತ 250ರೂ. ಆಗುತ್ತದೆ. ಅಂದ್ರೆ 2 ದಿನಗಳ ಆಸ್ಪತ್ರೆ ವಾಸಕ್ಕೆ 10,000 ರೂ. ಖರ್ಚಾದ್ರೆ ಅದಕ್ಕೆ 500ರೂ. ಜಿಎಸ್ ಟಿ ವಿಧಿಸಲಾಗುತ್ತದೆ. ಆಸ್ಪತ್ರೆಯಲ್ಲಿ ಎರಡು ದಿನಗಳ ವಾಸಕ್ಕೆ ವ್ಯಕ್ತಿಯೊಬ್ಬ 10,500 ರೂ. ಪಾವತಿಸಬೇಕು.

ಆಸ್ಪತ್ರೆ ವಾಸ ಖಂಡಿತಾ ಐಷಾರಾಮಿ ವೆಚ್ಚವಲ್ಲ. ಅಷ್ಟು ಬಾಡಿಗೆಯ ರೂಮ್ ಅನ್ನು ರೋಗಿ ಏಕೆ ಆಯ್ಕೆ ಮಾಡಿಕೊಳ್ಳಬೇಕು ಎಂಬ ಪ್ರಶ್ನೆ ಮೂಡೋದು ಸಹಜ. ಅದು ನಿಜ ಕೂಡ. ಆದರೆ, ಕೆಲವು ತುರ್ತು ಸಂದರ್ಭಗಳಲ್ಲಿ ಅನಿವಾರ್ಯವಾಗಿ ಇಂಥ ದುಬಾರಿ ರೂಮ್ ನಲ್ಲಿ ಚಿಕಿತ್ಸೆ ಪಡೆಯಬೇಕಾಗಿ ಬರಬಹುದು. ಉದಾಹರಣೆಗೆ ತುರ್ತು ಚಿಕಿತ್ಸೆಯ ಅಗತ್ಯವಿದ್ದಾಗ ಆ ಆಸ್ಪತ್ರೆಯಲ್ಲಿ ಕಡಿಮೆ ಬಾಡಿಗೆಯ ರೂಮ್ ಗಳು ಸಿಗದಿದ್ದಾಗ ಇಂಥ ದುಬಾರಿ ರೂಮ್ ನ ಆಯ್ಕೆ ಅನಿವಾರ್ಯ. ಇಂಥ ಸಂದರ್ಭದಲ್ಲಿ ಇತರ ದುಬಾರಿ ವೈದ್ಯಕೀಯ ವೆಚ್ಚಗಳ ಜೊತೆಗೆ ಜಿಎಸ್ ಟಿ ಹೊರೆ ಕೂಡ ರೋಗಿ ಮೇಲೆ ಬೀಳಲಿದೆ. ಇನ್ನು ಜಿಎಸ್ ಟಿ ಕಾರಣಕ್ಕೆ ಆಸ್ಪತ್ರೆಯ ರೂಮ್ ಬಾಡಿಗೆ ಬಿಲ್ಲಿಂಗ್ ವಿಧಾನದಲ್ಲಿ ಕೂಡ ಆಸ್ಪತ್ರೆಗಳು ಬದಲಾವಣೆ ತರಬೇಕಾದ ಅಗತ್ಯವಿದೆ ಎನ್ನುತ್ತಾರೆ ಆರೋಗ್ಯ ವಲಯದ ಪ್ರತಿನಿಧಿಗಳು. 

ಚೀನಾ ಆರ್ಥಿಕತೆಗೆ ಮುಳ್ಳಾದ ಕೋವಿಡ್ ನೀತಿಗಳು; ಜಿಡಿಪಿಯಲ್ಲಿ ದಾಖಲೆ ಕುಸಿತ

 

click me!