ದೇಶದೆಲ್ಲೆಡೆ ದಿನದ 24 ಗಂಟೆಯೂ ವಿದ್ಯುತ್‌, 2025ರ ಮಾರ್ಚ್‌ ಡೆಡ್‌ಲೈನ್‌ ಘೋಷಿಸಲಿದೆ ಕೇಂದ್ರ!

By Santosh Naik  |  First Published Jan 15, 2024, 1:09 PM IST

ದೇಶದ ಎಲ್ಲೆಡೆ ದಿನದ 24 ಗಂಟೆಯೂ ವಿದ್ಯುತ್‌ ಇರಬೇಕು ಎನ್ನುವ ನಿಟ್ಟಿನಲ್ಲಿ 2025ರ ಮಾರ್ಚ್‌ಅನ್ನು ಡೆಡ್‌ಲೈನ್ ಆಗಿ ಕೇಂದ್ರ ಸರ್ಕಾರ ಘೋಷಿಸಬಹುದು ಎಂದು ವರದಿಯಾಗಿದೆ.


ನವದೆಹಲಿ (ಜ.15): ಕೇಂದ್ರ ಸರ್ಕಾರವು ದಿನದ 24 ಗಂಟೆಯೂ ದೇಶದ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್‌ ಇರಬೇಕು ಎನ್ನು ನಿಟ್ಟಿನಲ್ಲಿ 2025ರ ಮಾರ್ಚ್‌ಅನ್ನು ಡೆಡ್‌ಲೈನ್‌ ಆಗಿ ಘೋಷಣೆ ಮಾಡುವ ಸಾಧ್ಯತೆ ಇದೆ. ಕಳೆದ ಹತ್ತು ವರ್ಷಗಳಲ್ಲಿ ಎರಡು ಪ್ರಮುಖ ಯೋಜನೆಗಳ ಮೂಲಕ ಎಲ್ಲಾ ಮನೆಗಳಿಗೆ ವಿದ್ಯುದ್ದೀಕರಣ ಮಾಡಲಾಗಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಈಗ 2024-25 ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ನಿರಂತರ ವಿಶ್ವಾಸಾರ್ಹ ವಿದ್ಯುತ್ ಸರಬರಾಜು ಮಾಡುವತ್ತ ಗಮನಹರಿಸುತ್ತಿದೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದಲ್ಲಿ, ಈ ಕ್ರಮವು ನಿರಂತರ ಸುಧಾರಣೆಗಳ ಭಾಗವಾಗಿರುತ್ತದೆ ಎಂದು ತಿಳಿಸಲಾಗಿದೆ. ಕೇಂದ್ರ ಇಂಧನ ಸಚಿವಾಲಯದ ಹಿರಿಯ ಅಧಿಕಾರಿಗಳ ಪ್ರಕಾರ, ದೇಶದ ಎಲ್ಲೆಡೆ ವಿದ್ಯುದೀಕರಣ ಸಂಪರ್ಕವನ್ನು ಸಾಧಿಸಿದ ನಂತರ ಮುಂದಿನ ಹಂತವು ದಿನದ 24 ಗಂಟೆಯೂ ವಿದ್ಯುತ್ ಪೂರೈಕೆ ಮಾಡುವುದು ಗುರಿಯಾಗಿದೆ ಎಂದಿದ್ದಾರೆ.

ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ವಿದ್ಯುತ್‌ ಪೂರೈಕೆಯ ಸರಾಸರಿ ಗಂಟೆಗಳಲ್ಲಿ ಇತ್ತೀಚೆಗೆ ಏರಿಕೆಯಾಗಿದೆ. ಕೊನೆಯ ವರ್ಷಗಳಲ್ಲಿ ಇದನ್ನು 24 ಗಂಟೆಗಳವರೆಗೆ ಸುಧಾರಿಸಲು ರಾಜ್ಯಗಳು ಮತ್ತು ವಿದ್ಯುತ್ ವಿತರಣಾ ಕಂಪನಿಗಳಿಗೆ (ಡಿಸ್ಕಮ್‌ಗಳು) ನಿರ್ದೇಶನ ನೀಡಲಾಗುತ್ತದೆ ಎಂದು  ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿದ್ಯುಚ್ಛಕ್ತಿ ಗ್ರಾಹಕರ ಹಕ್ಕುಗಳು ಮತ್ತು ರಾಷ್ಟ್ರೀಯ ಸುಂಕ ನೀತಿ ಸೇರಿದಂತೆ ಡಿಸ್ಕಮ್‌ಗಳನ್ನು ನಿಯಂತ್ರಿಸುವ ನಿಯಮಗಳಲ್ಲಿ ಸಂಬಂಧಿತ ನಿಬಂಧನೆಗಳನ್ನು ಅಳವಡಿಸಲು ಸಚಿವಾಲಯವು ಯೋಜಿಸಿದೆ.

Tap to resize

Latest Videos

ರಾಜ್ಯಸಭೆಯಲ್ಲಿ ವಿದ್ಯುತ್ ಸಚಿವಾಲಯ ಒದಗಿಸಿದ ವಿವರಗಳ ಪ್ರಕಾರ, ಪ್ರಸ್ತುತ ಸರಾಸರಿ ವಿದ್ಯುತ್ ಸರಬರಾಜು ನಗರ ಪ್ರದೇಶಗಳಲ್ಲಿ ದಿನಕ್ಕೆ 23.5 ಗಂಟೆಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 20.5 ಗಂಟೆಗಳಾಗಿವೆ. 2023-24 ರ ಬೇಸಿಗೆಯಲ್ಲಿ, ಭಾರತವು 240 ಗಿಗಾವ್ಯಾಟ್‌ಗಳ ದಾಖಲೆಯ ವಿದ್ಯುತ್ ಬೇಡಿಕೆಯನ್ನು ಎದುರಿಸಿತ್ತು. ಮುಂದಿನ ಆರ್ಥಿಕ ವರ್ಷದಲ್ಲಿ 250 ಗಿಗಾವ್ಯಾಟ್‌ಗಳನ್ನು ತಲುಪುವ ನಿರೀಕ್ಷೆಯಿದೆ.

ಸೌಭಾಗ್ಯ ಮತ್ತು ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಂತಹ ಉಪಕ್ರಮಗಳ ಮೂಲಕ ಕೇಂದ್ರ ಸರ್ಕಾರವು ಕಳೆದ ಐದು ವರ್ಷಗಳಲ್ಲಿ ಎಲ್ಲಾ ಗ್ರಾಮಗಳು ಮತ್ತು ಮನೆಗಳನ್ನು ಗ್ರಿಡ್‌ಗೆ ಸಂಪರ್ಕಿಸಿದೆ. ಈ ಪ್ರಗತಿಯ ಹೊರತಾಗಿಯೂ ಬಿಹಾರ, ಮಧ್ಯಪ್ರದೇಶ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಂತಹ ಪ್ರಮುಖ ರಾಜ್ಯಗಳು ಗ್ರಾಮೀಣ ವಿದ್ಯುತ್ ಪೂರೈಕೆಯ ಸಮಯದಲ್ಲಿ ಇಳಿಕೆಯನ್ನು ವರದಿ ಮಾಡಿದೆ ಎಂದು ಏಪ್ರಿಲ್ 2023 ರಲ್ಲಿ ವಿದ್ಯುತ್ ಸಚಿವಾಲಯಕ್ಕೆ ಕೇಂದ್ರ ವಿದ್ಯುತ್ ಪ್ರಾಧಿಕಾರದ ನೀಡಿರುವ ವರದಿ ತಿಳಿಸಿದೆ.

ನಗರ ಪ್ರದೇಶದ ವಿದ್ಯುತ್ ಬೇಡಿಕೆಗಳನ್ನು ಪೂರೈಸುವುದು ಸುಲಭವಾಗಿದೆ ಮತ್ತು ಸಾಮಾನ್ಯವಾಗಿ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಡಿಸ್ಕಮ್‌ಗಳಿಂದ ಆದ್ಯತೆ ನೀಡಲಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ, ವಿಶೇಷವಾಗಿ ಸಬ್ಸಿಡಿ ವಿದ್ಯುತ್ ಪಡೆಯುವ ಕೃಷಿ ವಲಯಗಳಲ್ಲಿ ನಿಜವಾದ ಸವಾಲು ಎದುರಾಗುತ್ತದೆ. ಗ್ರಾಮೀಣ ಫೀಡರ್‌ಗಳನ್ನು ದೇಶೀಯ ಮತ್ತು ನೀರಾವರಿ ಉದ್ದೇಶಗಳಿಗಾಗಿ ಪ್ರತ್ಯೇಕಿಸುವುದು ಮತ್ತು ವಿದ್ಯುತ್ ಸಬ್ಸಿಡಿಗಳನ್ನು ಎಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಲಾಗುತ್ತದೆ ಎನ್ನುವ ಆಧಾರದಲ್ಲಿ 24/7 ವಿದ್ಯುತ್ ಸರಬರಾಜು ಸಾಧಿಸುವುದು ನಿರ್ಧಾರವಾಗಲಿದೆ.

ಏ.1ರಿಂದ ಮತ್ತೆ ವಿದ್ಯುತ್‌ ದರ ಏರಿಕೆ ಶಾಕ್‌ ; ಪ್ರತಿ ಯುನಿಟ್‌ಗೆ ಎಷ್ಟು ಹೆಚ್ಚಳ?

ಫೀಡರ್ ವಿಂಗಡಣೆಯು ಸಬ್ಸಿಡಿ ಸಹಿತ ವಿದ್ಯುತ್ ಅನ್ನು ದುರುಪಯೋಗವಿಲ್ಲದೆ ರೈತರಿಗೆ ತಲುಪಲು ಸಹಾಯ ಮಾಡುತ್ತದೆ. UDAY ಡ್ಯಾಶ್‌ಬೋರ್ಡ್ ಪ್ರಕಾರ, ಗುರುತಿಸಲಾದ 62,000 ಗ್ರಾಮೀಣ ಫೀಡರ್‌ಗಳಲ್ಲಿ ಸುಮಾರು 86 ಪ್ರತಿಶತವನ್ನು ಇದುವರೆಗೆ ಪ್ರತ್ಯೇಕಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಡಿಸ್ಕಾಮ್‌ಗಳ ಆರ್ಥಿಕ ಸ್ಥಿತಿ, ನಿರಂತರ ವಿದ್ಯುತ್ ಸರಬರಾಜಿನಲ್ಲಿ ಹೂಡಿಕೆ ಮತ್ತು ನಿರ್ವಹಣೆಯ ಜವಾಬ್ದಾರಿ ಡಿಸ್ಕಾಮ್‌ಗಳ ಎದುರಿರುವ ಮತ್ತೊಂದು ಸವಾಲಾಗಿದೆ.

ಸ್ವಾತಂತ್ರ್ಯ ಬಂದ 75 ವರ್ಷಗಳ ಬಳಿಕ ವಿದ್ಯುತ್‌ ಸಂಪರ್ಕ ಪಡೆದ ಕಾಶ್ಮೀರದ 2 ಹಳ್ಳಿ!

click me!