ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ಮಾಜಿ ಗವರ್ನರ್ ಊರ್ಜಿತ್ ಪಟೇಲ್‌ರನ್ನು ಪ್ರಧಾನಿ ನರೇಂದ್ರ ಮೋದಿ ‘ಹಾವು’ ಎಂದು ಕರೆದಿದ್ದರು ಎಂಬ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ.
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ಮಾಜಿ ಗವರ್ನರ್ ಊರ್ಜಿತ್ ಪಟೇಲ್‌ರನ್ನು ಪ್ರಧಾನಿ ನರೇಂದ್ರ ಮೋದಿ ‘ಹಾವು’ ಎಂದು ಕರೆದಿದ್ದರು ಎಂಬ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ.
ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್‌ಚಂದ್ರ ಗರ್ಗ್ ಬರೆದ ‘ವಿ ಆಲ್ಸೋ ಮೇಕ್ ಪಾಲಿಸಿ’ (We Also Make Policy)ಕೃತಿಯಲ್ಲಿ ಈ ಬಗ್ಗೆ ವಿವರಗಳಿವೆ. ಆರ್‌ಬಿಐ ಬಳಿಯಿದ್ದ ದೊಡ್ಡ ಮೊತ್ತದ ಮೀಸಲು ಹಣವನ್ನು ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ (development projects) ಬಳಸಲು ಸರ್ಕಾರಕ್ಕೆ ನೀಡದೆ ಕುಳಿತಿದ್ದ ಊರ್ಜಿತ್ ಪಟೇಲ್‌ರನ್ನು(Urjit Patel) ಮೋದಿ ‘ಹಣದ ರಾಶಿ ಮೇಲೆ ಕುಳಿತ ಹಾವು’ ಎಂದು ತರಾಟೆ ತೆಗೆದುಕೊಂಡಿದ್ದರು ಎಂದು ಗರ್ಗ್ ಬರೆದಿದ್ದಾರೆ.
ಮೋದಿ ಮೊದಲ ಅವಧಿಗೆ ಪ್ರಧಾನಿಯಾಗಿದ್ದಾಗ ಗುಜರಾತ್‌ನ ಊರ್ಜಿತ್ ಪಟೇಲ್‌ರನ್ನು ಆರ್‌ಬಿಐ ಗವರ್ನರ್ (RBI Governor)ಸ್ಥಾನಕ್ಕೆ ಖುದ್ದಾಗಿ ನೇಮಕ ಮಾಡಿದ್ದರು. ಆದರೆ ಕ್ರಮೇಣ ಊರ್ಜಿತ್ ಪಟೇಲ್ ಸರ್ಕಾರದ ನೀತಿಗಳನ್ನು ವಿರೋಧಿಸತೊಡಗಿದ್ದರು. ಅವರಿಗೆ ತಾವು ಈ ದೇಶ ಕಂಡ ಅತ್ಯಂತ ಸ್ವತಂತ್ರ ಗವರ್ನರ್ ಎನ್ನಿಸಿಕೊಳ್ಳಬೇಕು ಎಂಬ ಆಸೆಯಿತ್ತು. ಅವರು ದೇಶದ ಆರ್ಥಿಕ ನೀತಿಯನ್ನು ಸುಧಾರಿಸಲು ಅಪ್ರಾಯೋಗಿಕವಾದ ಸಲಹೆಗಳನ್ನು ನೀಡುತ್ತಿದ್ದರು. ಆಗಿನ ವಿತ್ತ ಸಚಿವ ಅರುಣ್ ಜೇಟ್ಲಿ (Arun Jaitley) ಕೂಡ ಊರ್ಜಿತ್ ಬಗ್ಗೆ ಬೇಸರಗೊಂಡಿದ್ದರು. ಕೊನೆಕೊನೆಗೆ ಅವರ ಜೊತೆ ಮಾತಾಡುವುದನ್ನೇ ಜೇಟ್ಲಿ ಬಿಟ್ಟುಬಿಟ್ಟಿದ್ದರು’ ಎಂದು ಗರ್ಗ್ ಬರೆದಿದ್ದಾರೆ.
ನಿಜ್ಜರ್ ಹತ್ಯೆ ಬಗ್ಗೆ ಭಾರತದ ವಿರುದ್ಧ ಕೆನಡಾಕ್ಕೆ ಮಾಹಿತಿ ನೀಡಿದ್ದು ಅಮೆರಿಕ!
‘ಆರ್‌ಬಿಐನಲ್ಲಿರುವ ದೊಡ್ಡ ಮೊತ್ತದ ಮೀಸಲು ಹಣದಲ್ಲಿ ಕೆಲ ಭಾಗವನ್ನು ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಮೋದಿ ಮುಂದಾಗಿದ್ದರು. ಆದರೆ ಅದಕ್ಕೆ ಊರ್ಜಿತ್ ಪಟೇಲ್ ಅವಕಾಶ ನೀಡಲಿಲ್ಲ. ಅದರ ಬದಲಿಗೆ ಕ್ಯಾಪಿಟಲ್ ಗೇನ್ಸ್ ತೆರಿಗೆ (capital gains tax) ರದ್ದುಪಡಿಸಬೇಕು ಎಂಬ ಅಸಾಧ್ಯ ಸಲಹೆ ನೀಡಿದ್ದರು. ಊರ್ಜಿತ್‌ರನ್ನು ನಿಭಾಯಿಸುವುದು ಪ್ರಧಾನಿಗೆ ತಲೆನೋವಾಗಿ ಪರಿಣಮಿಸಿತ್ತು. ಹೀಗಾಗಿ ಒಮ್ಮೆ ಸಿಟ್ಟಿನಲ್ಲಿ ಅವರು ‘ಊರ್ಜಿತ್‌ರನ್ನು ಹಣದ ಮೇಲೆ ಕುಳಿತ ಹಾವು’ ಎಂದು ಮೂದಲಿಸಿದ್ದರು’ ಎಂದು ತಿಳಿಸಿದ್ದಾರೆ.
ಗರ್ಗ್ ಅವರ ಪುಸ್ತಕದ ಆಯ್ದ ಅಂಶಗಳನ್ನು ಮಾಧ್ಯಮ ವೆಬ್‌ಸೈಟೊಂದು ಪ್ರಕಟಿಸಿದೆ.
ಸತತ 9ನೇ ತಿಂಗಳೂ ಆರ್‌ಬಿಐ ಬಡ್ಡಿದರ ಯಥಾಸ್ಥಿತಿ ಸಾಧ್ಯತೆ
ನವದೆಹಲಿ: ದೇಶದಲ್ಲಿ ಚಿಲ್ಲರೆ ಹಣದುಬ್ಬರ ಏರಿಕೆ ಹಾಗೂ ಅಮೆರಿಕದ ಫೆಡರಲ್ ರಿಸರ್ವ್ ಏರಿಕೆಯಲ್ಲೇ ಇರುವ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ ಈ ಬಾರಿಯೂ ತನ್ನ ಬಡ್ಡಿದರವನ್ನು ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಬಾರಿ ಫೆಬ್ರವರಿ 2023ರಲ್ಲಿ ಆರ್‌ಬಿಐ ತನ್ನ ಬಡ್ಡಿದರವನ್ನು 6.5ಕ್ಕೆ ನಿಗದಿ ಮಾಡಿತ್ತು. ಇದರ ಬಳಿಕ ಯಾವುದೇ ಬದಲಾವಣೆಗಳು ಆಗದೇ, ಅದೇ ಬಡ್ಡಿದರವನ್ನು ಮುಂದುವರೆಸಿಕೊಂಡು ಬಂದಿತ್ತು. ಇದನ್ನೇ ಈ ಬಾರಿಯೂ ಮುಂದುವರಿಕೆ ಮಾಡಲಾಗುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಇದರ ನಿರ್ಧಾರವನ್ನು ಅ.4-6ರವರೆಗೆ ನಡೆಯುವ ಆರ್‌ಬಿಐ ಗವರ್ನರ್ ಅಧ್ಯಕ್ಷತೆಯ ವಿತ್ತೀಯ ನೀತಿ ಸಮಿತಿಯಲ್ಲಿ ಪ್ರಕಟಿಸಲಾಗುತ್ತದೆ.