EVs, Hydrogen Fuel: ಎಲೆಕ್ಟ್ರಿಕ್, ಹೈಡ್ರೋಜನ್ ಚಾಲಿತ ವಾಹನಗಳು ಭಾರತದ ಭವಿಷ್ಯದ ಆಯ್ಕೆ: ಕೆಪಿಐಟಿ ಮುಖ್ಯಸ್ಥ

By Suvarna News  |  First Published Jan 6, 2022, 8:07 PM IST

*ಭಾರತದ ಮೊದಲ ಹೈಡ್ರೋಜನ್ ಇಂಧನ ಸೆಲ್ ಪ್ರೋಟೋಟೈಪ್ ಕಾರು ಉತ್ಪಾದಕ ಸಂಸ್ಥೆ ಕೆಪಿಐಟಿ 
*ಜೈವಿಕ ಅಥವಾ ಸೂರ್ಯನ ಸಂಗ್ರಹಿತ ಶಕ್ತಿಯಿಂದ ಹೈಡ್ರೋಜನ್ ಉತ್ಪಾದಿಸೋ ತಂತ್ರಜ್ಞಾನದ ಕುರಿತು ಕೆಪಿಐಟಿ ಸಂಶೋಧನೆ 
*ಭಾರತ ಸೇರಿದಂತೆ 78 ದೇಶಗಳು ಹೈಡ್ರೋಜನ್ ಇಂಧನ ಚಾಲಿತ ವಾಹನಗಳಿಗೆ ಒತ್ತು ನೀಡುತ್ತಿವೆ


Business Desk:ಬ್ಯಾಟರೀಸ್ (batteries) ಹಾಗೂ ಹೈಡ್ರೋಜನ್ ಇಂಧನ ಸೆಲ್ (hydrogen fuel cells) ಚಾಲಿತ ವಾಹನಗಳು ಭಾರತದ (India) ಭವಿಷ್ಯದ ಆಯ್ಕೆಯಾಗಿವೆ ಎಂದು ಕೆಪಿಐಟಿ ( KPIT) ಟೆಕ್ನಾಲಜೀಸ್ ಲಿಮಿಟೆಡ್ ಮುಖ್ಯಸ್ಥ ರವಿ ಪಂಡಿತ್(Ravi Pandit)ಹೇಳಿದ್ದಾರೆ. ಕೆಪಿಐಟಿ ಅಟೋಮೋಟಿವ್ (automotive) ಸಾಫ್ಟ್ ವೇರ್ (software) ಸೇವಾದಾತ ಸಂಸ್ಥೆಯಾಗಿದೆ. 

ಮುಂದಿನ ಒಂದೂವರೆ ದಶಕದಲ್ಲಿ ಭಾರತವು (India) ಶುದ್ಧ ಇಂಧನ (Clean Energy) ಚಾಲಿತ ವಾಹನಗಳ ಯುಗಕ್ಕೆ ಕಾಲಿಡಲಿದೆ ಎಂದು ಬ್ಲ್ಯೂಮ್ ಬರ್ಗ್ ಕ್ವಿಂಟ್ ಗೆ (BloombergQuint)ನೀಡಿದ್ದ ಸಂದರ್ಶನದಲ್ಲಿ ರವಿ ಪಂಡಿತ್ ತಿಳಿಸಿದ್ದಾರೆ.  ಭವಿಷ್ಯದಲ್ಲಿ ದೇಶದೊಳಗೇ ಇಂಧನ (Fuel) ಉತ್ಪಾದನೆ ಆಗಲಿದೆ. ಎಲೆಕ್ಟ್ರಿಕ್ ವಾಹನಗಳು (Electric Vehicles) ನಗರದೊಳಗಿನ ಸಂಚಾರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗಲಿವೆ. ಇನ್ನು ನಗರಗಳ ನಡುವಿನ ಸಂಚಾರಕ್ಕೆ ಹೈಡ್ರೋಜನ್ (Hydrogen) ಇಂಧನ ಚಾಲಿತ ಹಾಗೂ ಎಲೆಕ್ಟ್ರಿಕ್ ಎರಡೂ ವಾಹನಗಳು ಬಳಕೆಯಾಗಲಿವೆ ಎಂಬ ನಿರೀಕ್ಷೆಯನ್ನು ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ. ಭಾರತ ಸರ್ಕಾರದ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ ಹಾಗೂ ರಾಷ್ಟ್ರೀಯ ರಾಸಾಯನಿಕ ಲ್ಯಾಬೋರೇಟರಿ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿರೋ ಕೆಪಿಐಟಿ ( KPIT) ಟೆಕ್ನಾಲಜೀಸ್ ಸ್ಥಾಪಿಸಿರೋ ಸೆಂಟಿಯೆಂಟ್ ಲ್ಯಾಬ್ಸ್ ಡಿಸೆಂಬರ್ 16ರಂದು ಹೈಡ್ರೋಜನ್ ಇಂಧನ ಸೆಲ್ಸ್ ಚಾಲಿತ ಬಸ್ ಪ್ರತ್ಯಕ್ಷಿಕೆ ಏರ್ಪಡಿಸಿತ್ತು. 

Tap to resize

Latest Videos

EV Charging : ಸ್ವಂತ ಉದ್ಯೋಗ ಶುರು ಮಾಡುವ ಪ್ಲಾನ್‌ನಲ್ಲಿದ್ದರೆ ಇಲ್ಲಿದೆ ದಿ ಬೆಸ್ಟ್ ಬ್ಯುಸಿನೆಸ್!

'ನಾವು ಪ್ರದರ್ಶಿಸಿದ ಬಸ್ ವಿನ್ಯಾಸ ಅತ್ಯಂತ ಕಾರ್ಯಕ್ಷಮತೆಯಿಂದ ಕೂಡಿತ್ತು. ಭಾರತದಲ್ಲಿ ಹೈಡ್ರೋಜನ್ ಆರ್ಥಿಕತೆಯನ್ನು ಸಾಧ್ಯವಾಗಿಸಬಲ್ಲದು' ಎಂದು ಪಂಡಿತ್ ಹೇಳಿದ್ದಾರ. 

ಭಾರತದ ಮೊದಲ ಹೈಡ್ರೋಜನ್ ಇಂಧನ ಸೆಲ್ ಪ್ರೋಟೋಟೈಪ್ ಕಾರು ಉತ್ಪಾದಕ ಸಂಸ್ಥೆಯಾದ ಕೆಪಿಐಟಿ ( KPIT) ಟೆಕ್ನಾಲಜೀಸ್ ಜೈವಿಕ (Biomass) ಅಥವಾ ಸೂರ್ಯನ ಸಂಗ್ರಹಿತ ಶಕ್ತಿಯಿಂದ (Solar Energy) ಹೈಡ್ರೋಜನ್ ಉತ್ಪಾದಿಸೋ ತಂತ್ರಜ್ಞಾನಕ್ಕೆ ಸಂಬಂಧಿಸಿ ಕೂಡ ಸಂಶೋಧನೆ ನಡೆಸುತ್ತಿದೆ. ಕಂಪನಿಯು ಹೈಡ್ರೋಜನ್ ಉತ್ಪಾದನೆಗೆ ಏರೋಬಿಕ್ ಮೈಕ್ರೋಬೈಯಲ್ ವಿಧಾನವನ್ನು(aerobic microbial method) ಬಳಸುತ್ತಿದ್ದು, ಅದು ಸಾಂಪ್ರದಾಯಿಕ ಹೈಡ್ರೋಜನ್ ಉತ್ಪಾದನಾ ವಿಧಾನಗಳಿಂದ ಶೇ.25ರಷ್ಟು ಹೆಚ್ಚು ಕಾರ್ಯದಕ್ಷತೆ ಹೊಂದಿದೆ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೈಡ್ರೋಜನ್ ಕ್ರಾಂತಿಯಲ್ಲಿ ಕೆಪಿಐಟಿ ಪ್ರಮುಖ ಪಾತ್ರ ವಹಿಸಲಿದೆ ಎಂಬ ವಿಶ್ವಾಸವನ್ನು ಇದೇ ಸಂದರ್ಭದಲ್ಲಿ ಪಂಡಿತ್ ವ್ಯಕ್ತಪಡಿಸಿದ್ದಾರೆ. 

Ola Hyper chargers: BPCL ಪಂಪ್ ಗಳಲ್ಲಿ ಹೈಪರ್ ಚಾರ್ಜಸ್ ಸ್ಥಾಪನೆಗೆ ಮುಂದಾದ ಓಲಾ; ಜೂನ್ ತನಕ ಗ್ರಾಹಕರಿಗೆ ಉಚಿತ ಸೇವೆ

'ಭಾರತ ಸೇರಿದಂತೆ 78 ದೇಶಗಳು ಹೈಡ್ರೋಜನ್ ಯೋಜನೆಯನ್ನು ಕಾರ್ಯಗತಗೊಳಿಸುತ್ತಿವೆ. ಈ ಮೂಲಕ ಶುದ್ಧಇಂಧನ (Clean Energy) ಅಭೂತಪೂರ್ವ ಯಶಸ್ಸು ಗಳಿಸುತ್ತಿದೆ' ಎಂದು ಪಂಡಿತ್ ಹೇಳಿದ್ದಾರೆ. 'ಎಲೆಕ್ಟ್ರಿಕ್ ವಾಹನಗಳು ಹಾಗೂ ಹೈಡ್ರೋಜನ್ ಇಂಧನ ಸೆಲ್  ಚಾಲಿತ ವಾಹನಗಳು ಮಾರುಕಟ್ಟೆಗೆ ಬಿಡುಗಡೆಗೊಳ್ಳುತ್ತಿರೋ ಜೊತೆಗೆ ಶುದ್ಧ ಇಂಧನ ಉತ್ಪಾದನೆಗೆ  ಟ್ರಿಲಿಯನ್ ಡಾಲರ್ ಗಿಂತಲೂ ಅಧಿಕ ಮೊತ್ತದ ಬಂಡವಾಳ ಹರಿದು ಬರುತ್ತಿದೆ. ಇದು ವಾಹನ ಉತ್ಪಾದನಾ ಕ್ಷೇತ್ರದಲ್ಲಿ ಬದಲಾವಣೆಯ ಪರ್ವಕ್ಕೆ ಸಾಕ್ಷಿಯಾಗಿದೆ' ಎಂಬ ಅಭಿಪ್ರಾಯವನ್ನು ಪಂಡಿತ್ ವ್ಯಕ್ತಪಡಿಸಿದ್ದಾರೆ. 

ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ, ವಾಯು ಮಾಲಿನ್ಯ ಕಾರಣದಿಂದ ಭಾರತದಲ್ಲಿ ಎಲೆಕ್ಟ್ರಿಕ್ ಹಾಗೂ ಹೈಡ್ರೋಜನ್ ಚಾಲಿತ ವಾಹನಗಳ ಬಳಕೆಗೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಈಗಾಗಲೇ ದೇಶದಲ್ಲಿ ಹಲವು ಕಂಪನಿಗಳು ಎಲೆಕ್ಟ್ರಿಕ್ ಕಾರು ಹಾಗೂ ಸ್ಕೂಟರ್ ಬಿಡುಗಡೆ ಮಾಡುತ್ತಿವೆ. ಒಂದು ಬಾರಿ ಚಾರ್ಜ್ ಮಾಡಿದರೆ 350 ಕಿ.ಮೀ.ಯಿಂದ 550 ಕಿ.ಮೀ. ಪ್ರಯಾಣ ಮಾಡಬಲ್ಲ ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲಿವೆ. ಇನ್ನು 50 ಕಿಲೋಮೀಟರ್‌ನಿಂದ 250 ಕಿಲೋಮೀಟರ್ ವರೆಗೆ ಪ್ರಯಾಣ ಮಾಡಬಲ್ಲ ಎಲೆಕ್ಟ್ರಿಕ್ ಸ್ಕೂಟರ್ ಗಳು ಭಾರತದಲ್ಲಿ ಲಭ್ಯವಿವೆ. 

click me!