ನಮ್ಮ ಸಂಸ್ಥೆಗಳನ್ನು ಟಾರ್ಗೆಟ್‌ ಮಾಡ್ಬೇಡಿ: ಭಾರತಕ್ಕೆ ಎಚ್ಚರಿಕೆ ನೀಡಿದ ಚೀನಾ

By BK AshwinFirst Published Dec 25, 2023, 7:14 PM IST
Highlights

ಚೀನಾದ ಕಂಪನಿಗಳ ವಿರುದ್ಧ ತಾರತಮ್ಯ ಮಾಡದಂತೆ ಭಾರತವನ್ನು ಮನವಿ ಮಾಡುತ್ತೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಹೇಳಿದ್ದಾರೆ. ಹಾಗೂ, ಇ.ಡಿ ಇತ್ತೀಚೆಗೆ ಬಂಧಿಸಿರುವ ಸ್ಮಾರ್ಟ್‌ಫೋನ್ ತಯಾರಕ ವಿವೋದ ಇಬ್ಬರು ಚೀನಾದ ಉದ್ಯೋಗಿಗಳಿಗೆ ಬೀಜಿಂಗ್ ಕಾನ್ಸುಲರ್ ರಕ್ಷಣೆ ನೀಡಲಿದೆ ಮತ್ತು ಸಹಾಯ ಮಾಡೋದಾಗಿ ಹೇಳಿದೆ. 

ಹೊಸದಿಲ್ಲಿ (ಡಿಸೆಂಬರ್ 25, 2023): ಮನಿ ಲಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಇತ್ತೀಚೆಗೆ ಬಂಧಿಸಿರುವ ಸ್ಮಾರ್ಟ್‌ಫೋನ್ ತಯಾರಕ ವಿವೋದ ಇಬ್ಬರು ಚೀನಾದ ಉದ್ಯೋಗಿಗಳಿಗೆ ಬೀಜಿಂಗ್ ಕಾನ್ಸುಲರ್ ರಕ್ಷಣೆ ನೀಡಲಿದೆ ಮತ್ತು ಸಹಾಯ ಮಾಡೋದಾಗಿ ಹೇಳಿದೆ. 

ಚೀನಾದ ಕಂಪನಿಗಳ ವಿರುದ್ಧ ತಾರತಮ್ಯ ಮಾಡದಂತೆ ಭಾರತವನ್ನು ಮನವಿ ಮಾಡುತ್ತೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಹೇಳಿದ್ದಾರೆ. ನಾವು ವಿಷಯವನ್ನು ನಿಕಟವಾಗಿ ಅನುಸರಿಸುತ್ತಿದ್ದೇವೆ. ಚೀನಾ ಸರ್ಕಾರವು ಚೀನೀ ಕಂಪನಿಗಳನ್ನು ತಮ್ಮ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಕಾಪಾಡಲು ದೃಢವಾಗಿ ಬೆಂಬಲಿಸುತ್ತದೆ ಎಂದೂ ಹೇಳಿದರು.

ಇದನ್ನು ಓದಿ: ಐಪಿಒ ಕಡೆ ಹೆಜ್ಜೆ ಇಟ್ಟ ಓಲಾ ಎಲೆಕ್ಟ್ರಿಕ್: 5,500 ಕೋಟಿ ರೂ. ಹಣ ಸಂಗ್ರಹಿಸಲಿರೋ ಭಾರತದ ಇವಿ ಕಂಪನಿ

ಡಿಸೆಂಬರ್ 23 ರಂದು, ವಿವೋ-ಇಂಡಿಯಾದ ಹಂಗಾಮಿ ಸಿಇಒ ಹಾಂಗ್ ಕ್ಸುಕ್ವಾನ್ ಅಲಿಯಾಸ್ ಟೆರ್ರಿ ಸೇರಿದಂತೆ ಮೂವರು ಕಾರ್ಯನಿರ್ವಾಹಕರನ್ನು ಇ.ಡಿ. ಬಂಧಿಸಿತ್ತು.  ಈ ಪೈಕಿ ಹಾಂಗ್ ಕ್ಸುಕ್ವಾನ್ ಚೀನಾದ ಪ್ರಜೆಯಾಗಿದ್ದು, ಮುಖ್ಯ ಹಣಕಾಸು ಅಧಿಕಾರಿ ಹರಿಂದರ್ ದಹಿಯಾ ಮತ್ತು ಸಲಹೆಗಾರ ಹೇಮಂತ್ ಮುಂಜಾಲ್ ಭಾರತೀಯರು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಈ ಮೂವರನ್ನು ಬಂಧಿಸಲಾಗಿದೆ. ಹಾಗೂ, ಆರೋಪಿಗಳು ಸದ್ಯ ಇಡಿ ಕಸ್ಟಡಿಯಲ್ಲಿದ್ದಾರೆ.

ಈ ಪ್ರಕರಣದಲ್ಲಿ ಮೊದಲು ಮೊಬೈಲ್ ಕಂಪನಿ ಲಾವಾ ಇಂಟರ್‌ನ್ಯಾಶನಲ್‌ನ ಎಂಡಿ ಹರಿ ಓಂ ರಾಯ್, ಚೀನಾದ ರಾಷ್ಟ್ರೀಯ ಗುವಾಂಗ್ವೆನ್ ಅಲಿಯಾಸ್ ಆಂಡ್ರ್ಯೂ ಕುವಾಂಗ್ ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳಾದ ನಿತಿನ್ ಗಾರ್ಗ್ ಮತ್ತು ರಾಜನ್ ಮಲಿಕ್ ಎಂಬ ನಾಲ್ಕು ಜನರನ್ನು ಏಜೆನ್ಸಿ ಈ ಹಿಂದೆ ಬಂಧಿಸಿತ್ತು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ಕಡಿತಕ್ಕೆ ಮುಂದಾದ Paytm: ಕನಿಷ್ಠ 10% ವೇತನದಾರರ ಮೇಲೆ ಪ್ರಭಾವ!

ಅವರ ಆಪಾದಿತ ಚಟುವಟಿಕೆಗಳು ಭಾರತದ ಆರ್ಥಿಕ ಸಾರ್ವಭೌಮತೆಗೆ ಹಾನಿಕಾರಕವಾದ ತಪ್ಪು ಲಾಭಗಳನ್ನು ಮಾಡಲು ವಿವೋ-ಇಂಡಿಯಾಕ್ಕೆ ಅನುವು ಮಾಡಿಕೊಟ್ಟವು ಎಂದು 
ಈ ಹಿಂದೆ ನಾಲ್ವರು ಬಂಧನಕ್ಕೊಳಗಾದವರಿಗಾಗಿ ನ್ಯಾಯಾಲಯಕ್ಕೆ ನೀಡಿದ ಪತ್ರಗಳಲ್ಲಿ ಇಡಿ ಹೇಳಿಕೊಂಡಿದೆ. ಅಲ್ಲದೆ, ಕಳೆದ ವರ್ಷ ಜುಲೈನಲ್ಲಿ ವಿವೋ-ಇಂಡಿಯಾ ಮತ್ತು ಅದರ ಸಂಬಂಧಿತ ವ್ಯಕ್ತಿಗಳ ಮೇಲೆ ಇ.ಡಿ. ರೇಡ್‌ ಮಾಡಿತ್ತು. ಮತ್ತು ಚೀನಾದ ಪ್ರಜೆಗಳು ಹಾಗೂ ಅನೇಕ ಭಾರತೀಯ ಕಂಪನಿಗಳನ್ನು ಒಳಗೊಂಡ ಪ್ರಮುಖ ಹಣ ವರ್ಗಾವಣೆ ದಂಧೆಯನ್ನು ಭೇದಿಸಿರುವುದಾಗಿ ಹೇಳಿಕೊಂಡಿತ್ತು.

ಭಾರತದಲ್ಲಿ ತೆರಿಗೆ ಪಾವತಿಯನ್ನು ತಪ್ಪಿಸಲು 62,476 ಕೋಟಿ ರೂಪಾಯಿಗಳನ್ನು ವಿವೋ-ಇಂಡಿಯಾ ಚೀನಾಕ್ಕೆ ಕಾನೂನುಬಾಹಿರವಾಗಿ ವರ್ಗಾಯಿಸಿದೆ ಎಂದೂ ಜಾರಿ ನಿರ್ದೇಶನಾಲಯ ಆರೋಪಿಸಿತ್ತು.

ನಾವು ಶೀಘ್ರದಲ್ಲೇ ದಿವಾಳಿಯಾಗುತ್ತೇವೆ: ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಹೀಗೆ ಹೇಳಿದ್ಯಾಕೆ?

ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಮನಿ ಲಾಂಡರಿಂಗ್ ಮತ್ತು ತೆರಿಗೆ ವಂಚನೆಯಂತಹ ಗಂಭೀರ ಆರ್ಥಿಕ ಅಪರಾಧಗಳಲ್ಲಿ ತೊಡಗಿರುವ ಚೀನಾದ ಘಟಕಗಳ ಮೇಲೆ ತಪಾಸಣೆಯನ್ನು ಬಿಗಿಗೊಳಿಸುವ ಕೇಂದ್ರದ ಪ್ರಯತ್ನಗಳ ಭಾಗವಾಗಿ ಈ ಕ್ರಮವನ್ನು ಪರಿಗಣಿಸಲಾಗಿದೆ.

ಮತ್ತೆ 30,000 ಉದ್ಯೋಗಿಗಳ ವಜಾ ಮಾಡಲು ಮುಂದಾದ ಗೂಗಲ್? AI ಅಬ್ಬರ ಶುರುವಾಯ್ತಾ?

click me!