ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿವೆ 57 ಘೋಸ್ಟ್ ಮಾಲ್ ಗಳು!

By Suvarna News  |  First Published Sep 15, 2022, 4:15 PM IST

*ನೈಟ್ ಫ್ರಾಂಕ್ ವರದಿ ಪ್ರಕಾರ ಭಾರತದ ಶೇ.21 ಶಾಪಿಂಗ್ ಮಾಲ್ ಗಳು ಘೋಸ್ಟ್ ಮಾಲ್ ಗಳು
* ಘೋಸ್ಟ್ ಮಾಲ್ ಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಎರಡನೇ ಸ್ಥಾನ
*ಬೆಂಗಳೂರಿನ 1.38 ಮಿಲಿಯನ್ ಚದರ ಅಡಿ ಪ್ರದೇಶವನ್ನು ಆಕ್ರಮಿಸಿಕೊಂಡಿವೆ ಘೋಸ್ಟ್ ಮಾಲ್ ಗಳು


ನವದೆಹಲಿ(ಸೆ.15): ಬೆಂಗಳೂರು ಸೇರಿದಂತೆ ಭಾರತದ ವಿವಿಧ ನಗರಗಳಲ್ಲಿ ಭೂತದ ಮಾಲ್ ಗಳ  (ಘೋಸ್ಟ್ ಮಾಲ್ ) ಸಂಖ್ಯೆ ಶೇ.21ರಷ್ಟಿದೆ ಎಂದು  ಅಂತಾರಾಷ್ಟ್ರೀಯ ಆಸ್ತಿ ಸಲಹಾಕಾರ ಸಂಸ್ಥೆ ನೈಟ್ ಫ್ರಾಂಕ್ ನ ಇತ್ತೀಚಿನ ವರದಿ ತಿಳಿಸಿದೆ. ಇಲ್ಲಿ ಭೂತ ಅಥವಾ ಘೋಸ್ಟ್ ಎಂದ ತಕ್ಷಣ ಮಾಲ್ ಗಳಲ್ಲಿ ದೆವ್ವವಿದೆ ಎಂದು ಭಾವಿಸಬೇಡಿ. ಘೋಸ್ಟ್ ಮಾಲ್ ಅಂದ್ರೆ ಬಳಕೆಯಾಗದ ಸ್ಥಳಾವಕಾಶ ಹೆಚ್ಚಿರುವ ಹಾಗೂ ಜನದಟ್ಟಣೆ ಇಲ್ಲದ ಮಾಲ್ ಗಳು ಎಂದರ್ಥ. ಭಾರತದ ಬಹುತೇಕ ಮೆಟ್ರೋ ನಗರಗಳ ಮಾಲ್ ಗಳಲ್ಲಿ ಬಳಕೆಯಾಗದ ಸ್ಥಳಾವಕಾಶ ಹೆಚ್ಚಿದ್ದು, ಮಳಿಗೆಗಳು ಇಲ್ಲದ ಕಾರಣ ಜನಜಂಗುಳಿಯೂ ಇಲ್ಲ ಎಂದು ವರದಿ ಹೇಳಿದೆ. ಈ ರೀತಿ ಖಾಲಿ ಹೊಡೆಯುವ ಮಾಲ್ ಗಳು ಇಲ್ಲವೇ ಘೋಸ್ಟ್ ಮಾಲ್ ಗಳಲ್ಲಿ ಬಳಕೆಯಾಗದ ಸ್ಥಳಾವಕಾಶ ಹೆಚ್ಚಿದ್ದು, ಮಳಿಗೆಗಳು ಇಲ್ಲದ ಕಾರಣ ಜನಜಂಗುಳಿಯೂ ಇಲ್ಲ. ಈ ರೀತಿ ಖಾಲಿ ಹೊಡೆಯುತ್ತಿರುವ ಮಾಲ್ ಗಳನ್ನು ನವೀಕರಿಸಬೇಕಾದ ಅಗತ್ಯವಿದೆ ಎಂದು ಈ ವರದಿ ಅಭಿಪ್ರಾಯಪಟ್ಟಿದೆ. ಒಂದು ಮಾಲ್ ನಲ್ಲಿ ಶೇ.40ಕ್ಕಿಂತ ಹೆಚ್ಚಿನ ಸ್ಥಳಾವಕಾಶ ಬಳಕೆಯಾಗದಿದ್ದಾಗ ಅಥವಾ ಖಾಲಿಯಿದ್ರೆ ಅಂಥ ಮಾಲ್ ಅನ್ನು ಘೋಸ್ಟ್ ಮಾಲ್ ಎಂದು ಕರೆಯಲಾಗುತ್ತದೆ.  ಭಾರತದಲ್ಲಿ ಒಟ್ಟು 271 ಶಾಪಿಂಗ್ ಮಾಲ್ ಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ 57 ಮಾಲ್ ಗಳು ಘೋಸ್ಟ್ ಮಾಲ್ ಗಳಾಗಿವೆ. ಈ 57 ಮಾಲ್ ಗಳು ದೇಶದ 8 ಟಾಪ್ ನಗರಗಳಲ್ಲಿದ್ದು, ಒಟ್ಟು ಸರಿಸುಮಾರು 8.4 ಮಿಲಿಯನ್ ಚದರ ಅಡಿ ಪ್ರದೇಶ  ಬಳಕೆಯಾಗಿಲ್ಲ ಎಂದು ನೈಟ್ ಫ್ರಾಂಕ್ ವರದಿ ತಿಳಿಸಿದೆ. 

ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (NCR) 3.35 ಮಿಲಿಯನ್ ಚದರ ಅಡಿ ಪ್ರದೇಶವನ್ನು ಗೋಸ್ಟ್ ಮಾಲ್ ಆಕ್ರಮಿಸಿಕೊಂಡಿದೆ. ಘೋಸ್ಟ್ ಮಾಲ್ ಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದ್ದು, 1.38 ಮಿಲಿಯನ್ ಚದರ ಅಡಿ ಪ್ರದೇಶ ಘೋಸ್ಟ್ ಮಾಲ್ ಗಳು ಆಕ್ರಮಿಸಿಕೊಂಡಿವೆ. ಹೈದರಾಬಾದ್ ಹಾಗೂ ಮುಂಬೈ ನಗರಗಳಲ್ಲಿ ಕ್ರಮವಾಗಿ 1.14 ಮಿಲಿಯನ್ ಚದರ ಅಡಿ ಹಾಗೂ  1.13 ಮಿಲಿಯನ್ ಚದರ ಅಡಿ ಪ್ರದೇಶಗಳು ಘೋಸ್ಟ್ ಮಾಲ್ ಗಳಾಗಿವೆ. ಇನ್ನು ಅಹಮದಾಬಾದ್ ನಲ್ಲಿ 0.37 ಮಿಲಿಯನ್ ಚದರ ಅಡಿ, ಪುಣೆಯಲ್ಲಿ 0.37 ಮಿಲಿಯನ್ ಚದರ ಅಡಿ, ಕೋಲ್ಕತ್ತದಲ್ಲಿ 0.32 ಮಿಲಿಯನ್ ಚದರ ಅಡಿ ಹಾಗೂ ಚೆನ್ನೈನಲ್ಲಿ 0.33 ಮಿಲಿಯನ್ ಚದರ ಅಡಿ ಪ್ರದೇಶಗಳನ್ನು ಘೋಸ್ಟ್ ಮಾಲ್ ಆಕ್ರಮಿಸಿಕೊಂಡಿವೆ. 

Tap to resize

Latest Videos

ಬಿಸ್ಲೆರಿ ಮಾರಾಟಕ್ಕಿದೆ, ಖರೀದಿ ಮಾಡ್ತಿರೋ ಕಂಪನಿ ಇದು!

ಭಾರತದಲ್ಲೇಕೆ ಇಷ್ಟು ಘೋಸ್ಟ್ ಮಾಲ್ ಗಳಿವೆ?
ವರದಿ ಪ್ರಕಾರ ದೇಶದಲ್ಲಿ ಘೋಸ್ಟ್ ಮಾಲ್ ಗಳ ಸಂಖ್ಯೆ ಹೆಚ್ಚಲು ಅನೇಕ ಕಾರಣಗಳಿವೆ. ಮಾಲೀಕತ್ವದ ಸಮಸ್ಯೆ, ವಿನ್ಯಾಸದ ತೊಂದರೆಗಳು, ಗ್ರಾಹಕರ ನಿರ್ವಹಣೆ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಮುಂತಾದವು ಭಾರತದಲ್ಲಿ ಘೋಸ್ಟ್ ಮಾಲ್ ಗಳ ಸಂಖ್ಯೆಯನ್ನು ಹೆಚ್ಚಿಸಿವೆ.

ಒಂದೇ ದಿನದಲ್ಲಿ 80 ಸಾವಿರ ಕೋಟಿ ಕಳೆದುಕೊಂಡ Jeff Bezos: ವಿಶ್ವದ 2ನೇ ಶ್ರೀಮಂತ ಸ್ಥಾನಕ್ಕೆ Gautam Adani ಮತ್ತಷ್ಟು ಹತ್ತಿರ

ಘೋಸ್ಟ್ ಮಾಲ್ ಗಳ ಬಳಕೆ ಹೇಗೆ?
ಮಹಾನಗರಗಳಲ್ಲಿ ಖಾಲಿ ಜಾಗ ಸಿಗೋದೆ ಕಷ್ಟ. ಹೀಗಿರುವಾಗ ಮಾಲ್ ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಖಾಲಿ ಜಾಗಗಳು ಬಳಸದೆ ಬಿಡೋದು ಸರಿಯಲ್ಲ. ಇಂಥ ಖಾಲಿ ಸ್ಥಳವನ್ನು ದೊಡ್ಡ ಮೊತ್ತದ ಬಾಡಿಗೆ ನೀಡಿ ಬ್ಯುಸಿನೆಸ್ ಪಾರ್ಕ್ ಅಥವಾ ಜನಪ್ರಿಯ ಉದ್ಯಮ ವಲಯಗಳಲ್ಲಿ ಕಚೇರಿ ತೆರೆಯಲು ಸಾಧ್ಯವಾಗದ ಸ್ಥಳೀಯ ಉದ್ಯಮಗಳಿಗೆ ಲೀಸ್ ಗೆ ನೀಡಹುದು. ಇನ್ನು ಬರ್ತ್ ಡೇ ಪಾರ್ಟಿ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಗಳ ಆಯೋಜನೆಗೂ ಇಂಥ ಸ್ಥಳಗಳನ್ನು ಬಾಡಿಗೆಗೆ ನೀಡಬಹುದು. ಇನ್ನು ಇಂಥ ಸ್ಥಳಾವಕಾಶಗಳಲ್ಲಿ ಮಕ್ಕಳಿಗೆ ಪ್ಲೇ ಏರಿಯಾ ನಿರ್ಮಾಣ ಮಾಡಬಹುದು. ಒಳಾಂಗಣ ಕ್ರೀಡೆಗಳನ್ನು ಆಯೋಜಿಸಬಹುದು. ಒಟ್ಟಾರೆ ಮಾಲ್ ಗಳಲ್ಲಿನ ಖಾಲಿ ಜಾಗವನ್ನು ಹಾಗೆಯೇ ಬಿಡುವ ಬದಲು ಯಾವುದಾರೂ ಉದ್ದೇಶಕ್ಕೆ ಬಳಸಿದ್ರೆ ಅದ್ರಿಂದ ಒಂದಿಷ್ಟು ಆದಾಯವಾದ್ರೂ ಬರುತ್ತದೆ. 
 

click me!