ರೆಪೋ ರೇಟ್, ಸಿಆರ್‌ಆರ್‌ ಏರಿಕೆ ಮಾಡಿದ ಆರ್‌ಬಿಐ ನಿರ್ಧಾರದಿಂದ ಆಗುವ 5 ಬದಲಾವಣೆಗಳು

By Santosh Naik  |  First Published Jun 8, 2022, 10:41 PM IST

ದೇಶವು ಹೆಚ್ಚಿನ ಹಣದುಬ್ಬರ ಮತ್ತು ನಿಧಾನಗತಿಯ ಆರ್ಥಿಕ ಚೇತರಿಕೆಯೊಂದಿಗೆ ಹೋರಾಡುತ್ತಿರುವ ಸಮಯದಲ್ಲಿ ಆರ್‌ಬಿಐ ದರ ಏರಿಕೆಯಾಗಿದೆ. ಕಳೆದ ಕೆಲವು ವಾರಗಳಲ್ಲಿ ಮೂಲ ವಸ್ತುಗಳ ಬೆಲೆಯೂ ಗಗನಕ್ಕೇರಿದೆ.


ನವದೆಹಲಿ (ಜೂನ್ 8): ತನ್ನ ಅಚ್ಚರಿಯ ನಿರ್ಧಾರದಲ್ಲಿ ಬುಧವಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರ ( Repo Rate ) ಮತ್ತು ನಗದು ಮೀಸಲು ಅನುಪಾತದಲ್ಲಿ (ಸಿಆರ್‌ಆರ್) ಹೆಚ್ಚಳವನ್ನು ಪ್ರಕಟಿಸಿದೆ. ರೆಪೋ ದರವನ್ನು 40 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿ ಶೇ.4.4ಕ್ಕೆ ತಲುಪಿದೆ. ಮತ್ತೊಂದೆಡೆ, ಸಿಆರ್ ಆರ್ ಅನ್ನು 50 ಬೇಸಿಸ್ ಪಾಯಿಂಟ್ ಗಳಿಂದ 4.5 ಶೇಕಡಾಕ್ಕೆ ಹೆಚ್ಚಿಸಲಾಗಿದೆ.  

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ (RBI Governor Shaktikanta Das ) ಅವರು ಬುಧವಾರ ಈ ಘೋಷಣೆ ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ, ಆರ್‌ಬಿಐ (RBI) ತನ್ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಸತತ 11 ನೇ ಬಾರಿಗೆ ದರಗಳನ್ನು ಸ್ಥಿರವಾಗಿರಿಸಿತ್ತು. ಆರ್ಬಿಐ ದರ ಏರಿಕೆ ಮಾಡಿದ್ದು, ಷೇರು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿತ್ತು. ಆರ್ ಬಿಐ ಘೋಷಣೆ ಹೊರಬಿದ್ದ ಬಳಿಕ ಸೆನ್ಸೆಕ್ಸ್ 1300 ಅಂಕ ಕುಸಿದರೆ, ನಿಫ್ಟಿ ಕೂಡ ದೊಡ್ಡ ಮಟ್ಟದ ಕುಸಿತ ಕಂಡಿದೆ. 

ಆರ್ ಬಿಐ ನಿರ್ಧಾರದಿಂದ ನಮ್ಮ ಮೇಲೆ ಆಗುವ ಬದಲಾವಣೆಗಳು
1. ಸಾಲ ಇನ್ನು ದುಬಾರಿ:
ರೆಪೋ ದರದ ನೇರ ಏರಿಕೆಯ ಪರಿಣಾಮ ಬ್ಯಾಂಕ್‌ಗಳು ಗೃಹ ಸಾಲ (Home Loan) ಮತ್ತು ಇತರ ಎಲ್ಲ ಸಾಲಗಳ (Other Loan) ಮೇಲೆ ವಿಧಿಸುವ ಬಡ್ಡಿದರಗಳ (interest rates) ಏರಿಕೆ ಆಗುತ್ತದೆ. ಬಹುತೇಕ ಬ್ಯಾಂಕ್‌ಗಳು (Banks) ಈಗಾಗಲೇ ತಮ್ಮ ಬಡ್ಡಿ ದರವನ್ನು ಹೆಚ್ಚಿಸಿವೆ. ಇದೀಗ ಆರ್‌ಬಿಐ ಹೆಚ್ಚಳವನ್ನು ಘೋಷಿಸಿರುವುದರಿಂದ ದರಗಳು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

2.ಠೇವಣಿಗಳ ಮೇಲಿನ ಬಡ್ಡಿಯಲ್ಲಿ ಏರಿಕೆ: ರೆಪೋ ದರ ಏರಿಕೆ ಮಾಡಿದ್ದು ಠೇವಣಿದಾರರ ಪಾಲಿಗೆ ವರದಾನವಾಗಲಿದೆ.  ಉಳಿತಾಯ ಖಾತೆಗಳು (savings accounts), ಪೋಸ್ಟ್ ಆಫೀಸ್ ಉಳಿತಾಯ ಖಾತೆಗಳು (Post office savings accounts), ಸ್ಥಿರ ಠೇವಣಿಗಳು (ಎಫ್‌ಡಿ) (Fixed deposits) ಮತ್ತು ಇತರವುಗಳನ್ನು ಒಳಗೊಂಡಂತೆ ಠೇವಣಿಗಳ ಮೇಲಿನ ಬಡ್ಡಿದರಗಳು ಹೆಚ್ಚಾಗಿ ಜಿಗಿಯುವ ಸಾಧ್ಯತೆಯಿದೆ.

Tap to resize

Latest Videos

3.ಬಾಂಡ್ ಇಳುವರಿಯಲ್ಲಿ ಏರಿಕೆ: ಉಳಿತಾಯದ ಜೊತೆಗೆ ಬಾಂಡ್‌ಗಳ (Bond) ಮೇಲಿನ ಆದಾಯವೂ ಹೆಚ್ಚಾಗುವ ಸಾಧ್ಯತೆಯಿದೆ. ಬುಧವಾರವೇ 10 ವರ್ಷಗಳ ಸರ್ಕಾರಿ ಬಾಂಡ್‌ನಲ್ಲಿನ ಇಳುವರಿ 25 ಮೂಲ ಅಂಕಗಳನ್ನು ಹೆಚ್ಚಿಸಲಾಗಿದೆ.

RBI Repo Rate: ರೆಪೋ ದರ ಎಂದರೇನು? ಬ್ಯಾಂಕ್‌ನಿಂದ ಸಾಲ ಪಡೆದವರಿಗೆ ಸಮಸ್ಯೆ ಖಚಿತ

4. ಆರ್ಥಿಕ ಚೇತರಿಕೆಯಲ್ಲಿ ನಿಧಾನಗತಿ: ಕೊನೆಯ ಎಂಪಿಸಿ (MPC) ಪ್ರಕಟಣೆಯಲ್ಲಿ, ಆರ್‌ಬಿಐ ಗವರ್ನರ್ ದಾಸ್ ಬೇಡಿಕೆಯು ಇನ್ನೂ ಸಾಂಕ್ರಾಮಿಕ ಪೂರ್ವದ ಮಟ್ಟಕ್ಕೆ ಹಿಂತಿರುಗಿಲ್ಲ ಎಂದು ಹೇಳಿದ್ದರು. ಸಾಲಗಳು ದುಬಾರಿಯಾಗುವುದರಿಂದ, ಬೇಡಿಕೆಯ ಚೇತರಿಕೆಯು ಹೆಚ್ಚಿನ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಾಣಿಜ್ಯ ಪತ್ರಿಕೆಯೊಂದರ ಪ್ರಕಾರ, ಖಾಸಗಿ ಬಳಕೆ ಇನ್ನೂ ಪೂರ್ವ ಸಾಂಕ್ರಾಮಿಕ ಹಂತದ ಮಟ್ಟಕ್ಕೆ ತಲುಪಿಲ್ಲ ಎಂದು ತಿಳಿಸಿದೆ.

Repo Rate Hike:ನಿರೀಕ್ಷೆಯಂತೆ ಮತ್ತೆ ರೆಪೋ ದರ ಹೆಚ್ಚಿಸಿದ ಆರ್ ಬಿಐ; ಸಾಲಗಾರರಿಗೆ ಗಾಯದ ಮೇಲೆ ಬರೆ

5.ಹಣದುಬ್ಬರ ಕುಸಿತ: ಸಿಆರ್‌ಆರ್‌ನಲ್ಲಿ ( CRR ) ಏರಿಕೆಯೊಂದಿಗೆ, ಆರ್‌ಬಿಐ ಆರ್ಥಿಕತೆಯಿಂದ ಹೆಚ್ಚುವರಿ ಲಿಕ್ವಿಡಿಟಿಯನ್ನು ಹೀರಿಕೊಳ್ಳುವ ಗುರಿಯನ್ನು ಹೊಂದಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಹಣದುಬ್ಬರ ಅಂಕಿಅಂಶಗಳು ನೀತಿ ನಿರೂಪಕರನ್ನು ಚಿಂತೆಗೀಡು ಮಾಡಿದೆ. ನಡೆಯುತ್ತಿರುವ ರಷ್ಯಾ ಉಕ್ರೇನ್ ಯುದ್ಧದ ಕಾರಣದಿಂದಾಗಿ, ಹೆಚ್ಚಿನ ಸರಕುಗಳ ಬೆಲೆಗಳು ಏರಿದೆ. ತೈಲ ಬೆಲೆಗಳಲ್ಲಿ ವಿಪರೀತ ಎನ್ನುವಷ್ಟು ಏರಿಕೆಯಾಗಿದೆ. ಈ ಎಲ್ಲದರಲ್ಲೂ, ಹೆಚ್ಚಿನ ಬೇಡಿಕೆಯು ಹಣದುಬ್ಬರವನ್ನು ಮೇಲಕ್ಕೆ ತಳ್ಳುತ್ತದೆ. CRR ಮೂಲಕ, RBI ಬೆಲೆಗಳನ್ನು ನಿಯಂತ್ರಿಸಲು ಆರ್ಥಿಕತೆಯಿಂದ 87,000 ಕೋಟಿ ರೂ.ಗಳನ್ನು ತೆಗೆದುಹಾಕುವ ಗುರಿ ಹೊಂದಿದೆ.

click me!