ಯಾವುದೇ ಕೆಲಸವನ್ನು ಪ್ಲಾನ್ ಆಗಿ ಮಾಡಿದ್ರೆ ಅದ್ರಲ್ಲಿ ಯಶಸ್ಸು ಸಾಧ್ಯ. ಹಾಗೆ ವಿದ್ಯೆಗೆ ತಕ್ಕಂತೆ ಜಾಬ್ ಸಿಗ್ಲಿಲ್ಲ ಅಂತಾ ಖಾಲಿ ಕುಳಿತುಕೊಳ್ಳುವ ಬದಲು ಬುದ್ದಿ ಉಪಯೋಗಿಸಿ ಕೆಲಸ ಮಾಡಿದ್ರೆ ಒಳ್ಳೆಯದು.
ವಿದ್ಯಾರ್ಹತೆಗೆ ತಕ್ಕಂತೆ ನಾವು ಕೆಲಸ ಮಾಡುವ ಮನಸ್ಸು ಮಾಡ್ತೇವೆ. ಇಂಜಿನಿಯರಿಂಗ್ ಮಾಡಿದ ವ್ಯಕ್ತಿ ಇಂಜಿನಿಯರ್ ಕೆಲಸ ಮಾಡಬೇಕು, ಡಾಕ್ಟರ್ ಓದಿದ ವ್ಯಕ್ತಿ ಡಾಕ್ಟರ್ ಆಗ್ಬೇಕು ಹೀಗೆ ವಿದ್ಯಾರ್ಹತೆಗೆ ತಕ್ಕಂತೆ ಜನರು ಕೆಲಸ ಹುಡುಕ್ತಾರೆ. ಇಂಜಿನಿಯರ್ ಮಾಡಿದ ವ್ಯಕ್ತಿಯೊಬ್ಬ ಕಸ ಕಲೆಕ್ಟ್ ಮಾಡುವ ಕೆಲಸ ಮಾಡ್ತಾನೆ ಅಂದ್ರೆ ನೀವು ನಂಬೋದು ಕಷ್ಟ. ಆದ್ರೆ ನಂಬ್ಲೇಬೇಕು. ಇಬ್ಬರು ಯುವಕರು ಇಂಜಿನಿಯರಿಂಗ್ ಓದಿದ್ರೂ ಅದಕ್ಕೆ ಸಂಬಂಧಿಸಿದ ಕೆಲಸ ಮಾಡದೆ ಸ್ಕ್ರ್ಯಾಪ್ ವಿತರಕರಾಗಿದ್ದಾರೆ. ಇದೇನು ಸಾಮಾನ್ಯ ಕೆಲಸವಲ್ಲ. ಸ್ಟಾರ್ಟಪ್‌ನ ವಾರ್ಷಿಕ ವಹಿವಾಟು 10 ಕೋಟಿ ರೂಪಾಯಿ ತಲುಪಿದೆ. ನಾವಿಂದು ಅವರ ಸಾಧನೆಯ ಕಥೆ ಹೇಳ್ತೇವೆ.
ಇಂಜಿನಿಯರಿಂಗ್ (Engineering) ಮಾಡಿ ನಂತ್ರ ಸ್ಕ್ಯಾಪ್ ಬ್ಯುಸಿನೆಸ್ ಶುರು ಮಾಡಿದ ಯುವಕರು : ಭೋಪಾಲ್ (Bhopal) ಮೂಲದ ಐಟಿ ಎಂಜಿನಿಯರ್‌ಗಳಾದ ಅನುರಾಗ್ ಅಸಾತಿ ಮತ್ತು ರವೀಂದ್ರ ರಘುವಂಶಿ ಸ್ವಲ್ಪ ಭಿನ್ನವಾಗಿ ಆಲೋಚನೆ ಮಾಡಿದ್ರು. ಕಂಪನಿಯಲ್ಲಿ ಕೆಲಸ ಮಾಡುವ ಬದಲು ಸ್ವಂತದ್ದೊಂದು ಬ್ಯುಸಿನೆಸ್ (Business) ಶುರು ಮಾಡುವ ಆಲೋಚನೆ ಮಾಡಿದ್ರು. ಅನುರಾಗ್, ಓರಿಯಂಟಲ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡಿದ್ದರು. ಅನುರಾಗ್ ಗೆ ಇಂಜಿನಿಯರಿಂಗ್ ಮಾಡಲು ಹಣವಿರಲಿಲ್ಲವಂತೆ. ನಂತ್ರ ಕಾಲೇಜು ಆಡಳಿತ ಮಂಡಳಿ ಶುಲ್ಕದ ಮೇಲೆ ರಿಯಾಯಿತಿ ನೀಡಿದ ಕಾರಣ ಅವರು ಕಾಲೇಜು ಮುಗಿಸಿದ್ದರಂತೆ. ಈ ಮಧ್ಯೆ ಕಾಲೇಜಿಗೆ ಹೋಗಿ ಬರುವ ಸಮಯದಲ್ಲಿ ಜನರು ಆಪ್ ಬಳಸೋದನ್ನು ಅನುರಾಗ್ ನೋಡಿದ್ದರು. ನಾವು ಯಾಕೆ ಅಪ್ಲಿಕೇಷನ್ ತಯಾರಿಸಬಾರದು ಎಂದುಕೊಂಡಿದ್ದರಂತೆ.
ಬರೋಬ್ಬರಿ 800 ಕೋಟಿ ಕಂಪೆನಿಯ ಸಿಇಒ ಎಂ.ಎಸ್ ಧೋನಿಯ ಅತ್ತೆ ಶೀಲಾ ಸಿಂಗ್
ಹಾಗೆ ಜನರು ಸ್ಕ್ರ್ಯಾಪ್ ಮಾರಾಟ ಮಾಡಲು ಸಮಸ್ಯೆ ಎದುರಿಸುತ್ತಿದ್ದದ್ದನ್ನು ಕಂಡಿದ್ದರು. ಸ್ಕ್ಯಾಪ್ ಗಾಡಿ ಬರೋದನ್ನು ಕಾಯ್ತಿದ್ದರು. ಅದನ್ನು ನೋಡಿದ ಅನುರಾಗ್, ನಾವ್ಯಾಕೆ ಸ್ಕ್ರ್ಯಾಪ್ ಕಲೆಕ್ಟರ್ ಕೆಲಸ ಮಾಡಬಾರದು ಎಂದು ಆಲೋಚನೆ ಮಾಡಿದ್ದರು. ಅದರಂತೆ ಅವರು ಸ್ಕ್ರ್ಯಾಪ್ ಕಲೆಕ್ಟ್ ಮಾಡೋಕೆ ಅಪ್ಲಿಕೇಷನ್ ಶುರು ಮಾಡಿದ್ದರು.
300ಕ್ಕೂ ಹೆಚ್ಚು ಜನರಿಗೆ ಉದ್ಯೋಗ : ಅನುರಾಗ್ ಹಾಗೂ ರವೀಂದ್ರ ರಘುವಂಶಿ ಸೇರಿ ಅಪ್ಲಿಕೇಷನ್ ಸಿದ್ಧಪಡಿಸಿದ್ರು. ಮನೆಯವರಿಗೆ ಈ ವಿಷ್ಯ ಗೊತ್ತಿರಲಿಲ್ಲ. ಈ ವಿಷ್ಯ ತಿಳಿದ್ರೆ ನನಗೆ ಇದನ್ನು ಮಾಡೋಕೆ ಮನೆಯವರು ಬಿಡ್ತಿರಲಿಲ್ಲ. ಕೆಲಸ ಶುರು ಮಾಡಿ ಎರಡು ವರ್ಷಗಳ ಕಾಲ ಅವರು ಸ್ಕ್ರ್ಯಾಪ್ ತೆಗೆದುಕೊಳ್ಳಲು ಮನೆ ಮನೆಗೆ ಹೋಗ್ತಿದ್ದರು. ಇದ್ರ ಜೊತೆಗೆ ಅನುರಾಗ್ ಕೆಲಸವನ್ನು ಮಾಡ್ತಿದ್ದರು. 2014 ರಲ್ಲಿ ಕಬಾಡಿವಾಲಾ ಸ್ಟಾರ್ಟ್‌ಅಪ್ ಅನ್ನು ಪ್ರಾರಂಭಿಸಿದರು. 2015ರಲ್ಲಿ ಕೆಲಸ ಬಿಟ್ಟ ಅನುರಾಗ್ ಫುಲ್ ಟೈಂ ಈ ಕೆಲಸ ಮಾಡಲು ಆರಂಭಿಸಿದರು. ಅನುರಾಗ್ ಆರಂಭದಲ್ಲಿ ಕುಟುಂಬ ಮತ್ತು ಸ್ನೇಹಿತರ ಸಹಾಯದಿಂದ 25 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ರು. ಅನುರಾಗ್ ಪ್ಲಾನ್ ಕೇಳಿದ ಕುಟುಂಬಸ್ಥರು ಅವರಿಗೆ ಬೆಂಬಲ ನೀಡಿದರು. ಆರಂಭದಲ್ಲಿ ಅವರಿಗೆ ಹೆಚ್ಚಿನ ಆರ್ಡರ್ ಬರ್ತಾ ಇರಲಿಲ್ಲ. ಆದರೀಗ ಕಬಾಡಿವಾಲಾ ಸ್ಟಾರ್ಟ್ ಅಪ್ ಎತ್ತರಕ್ಕೆ ಬೆಳೆದಿದೆ.
Marketing Tricks: ಅದ್ಭುತ ಮಾರ್ಕೆಟಿಂಗ್! ಗಮನ ಸೆಳೆದ ಸೂಪರ್ ಮಾರ್ಕೆಟ್ ʻನೆನಪುಗಳ ಗೋಡೆ ʼ
ಸ್ಟಾರ್ಟಪ್‌ನ ವಾರ್ಷಿಕ ವಹಿವಾಟು (Annual Transaction of Startup) 10 ಕೋಟಿ ರೂಪಾಯಿವರೆಗೆ ಬಂದು ತಲುಪಿದೆ. ಅವರ ಸಂಸ್ಥೆಯು 300ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿದೆ. 2019 ರಲ್ಲಿ ಏಂಜೆಲ್ ಹೂಡಿಕೆದಾರರು 3 ಕೋಟಿ ರೂಪಾಯಿ ಹೂಡಿಕೆ ಮಾಡಿತ್ತು. ಕೆಲವು ತಿಂಗಳ ಹಿಂದೆ ಮುಂಬೈ ಹೂಡಿಕೆದಾರ ಸಂಸ್ಥೆ 15 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಈ ಮೂಲಕ ಭೋಪಾಲ್‌ನಲ್ಲಿ ಇದೇ ಮೊದಲ ಬಾರಿಗೆ ಸ್ಕ್ರ್ಯಾಪ್ ವ್ಯಾಪಾರದ ಸ್ಟಾರ್ಟ್‌ಅಪ್‌ಗೆ ಇಷ್ಟು ದೊಡ್ಡ ಮೊತ್ತದ ಹಣ ದೊರೆತಂತಾಗಿದೆ.