ಅರ್ಧ ಹಾಸಿಗೆ ಅಪರಿಚಿತರಿಗೆ ನೀಡಿ, ಈಕೆ ಗಳಿಸ್ತಿದ್ದಾಳೆ ಹಣ! ಏನಿದು ಹೊಸ ಬ್ಯುಸಿನೆಸ್?

By Suvarna News  |  First Published Sep 13, 2023, 3:05 PM IST

ಹಣಗಳಿಸಲು ನಾನಾ ವಿಧಗಳಿವೆ. ಕೆಲವೊಂದು ವ್ಯವಹಾರಕ್ಕೆ ಬುದ್ದಿವಂತಿಕೆಯ ಅಗತ್ಯವಿದ್ರೆ ಮತ್ತೆ ಕೆಲವಕ್ಕೆ ಧೈರ್ಯಬೇಕು. ಈ ಮಹಿಳೆ ಧೈರ್ಯಕ್ಕೆ ಮೆಚ್ಚಲೇಬೇಕು. ಶ್ರೀಮಂತೆಯಾಗಲು ಈಕೆ ಮಾಡ್ತಿರುವ ಕೆಲಸ ಅಚ್ಚರಿ ಹುಟ್ಟಿಸುವಂತಿದೆ. 


ಹಣ ಗಳಿಸಲು ಜಗತ್ತಿನಲ್ಲಿ ಜನರು ಏನೆಲ್ಲ ಪ್ರಯತ್ನ ನಡೆಸುತ್ತಾರೆ. ಹಗಲು – ರಾತ್ರಿ ಎನ್ನದೆ ದುಡಿಯುವವರಿದ್ದಾರೆ. ಮತ್ತೆ ಕೆಲವರು ಹೊಸ ಹೊಸ ಉಪಾಯಗಳನ್ನು ಮಾಡಿ ಹಣ ಸಂಪಾದನೆ ಮಾಡ್ತಾರೆ. ಈಗಿನ ದಿನಗಳಲ್ಲಿ ಚಿತ್ರ ವಿಚಿತ್ರ ಬ್ಯುಸಿನೆಸ್ ಬಂದಿವೆ. ಮನುಷ್ಯದ ಕೂದಲು, ಹಳೆ ಬಟ್ಟೆ, ವಸ್ತು ಮಾರಾಟದಿಂದ ಹಿಡಿದು ದೊಡ್ಡ ದೊಡ್ಡ ಬ್ಯುಸಿನೆಸ್ ವರೆಗೆ ನಾವು ವೆರೈಟಿ ನೋಡ್ಬಹುದು. 

ದೊಡ್ಡ ದೊಡ್ಡ ನಗರಗಳಲ್ಲಿ ಮನೆ ಕಟ್ಟಿ, ಅದನ್ನು ಬಾಡಿಗೆ (Rent) ಗೆ ನೀಡುವ ಮೂಲಕವೇ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುವವರಿದ್ದಾರೆ. ಕೆಲ ಜನರು ತಮ್ಮ ಮನೆಯ ಒಂದು ಕೋಣೆಯನ್ನು ಬಾಡಿಗೆಗೆ ನೀಡಿ ಹಣ ಗಳಿಸ್ತಾರೆ. ಟೆರೆಸ್ ಬಾಡಿಗೆಗೆ ನೀಡಿ ಆರ್ಥಿಕ ಸ್ಥಿತಿ ಬಲಪಡಿಸಿಕೊಳ್ಳುವವರೂ ಇದ್ದಾರೆ. ಆದ್ರೆ ಇಲ್ಲೊಬ್ಬ ಮಹಿಳೆ ಹಾಟ್ ಬೆಡ್ಡಿಂಗ್ (Hot Bedding) ವ್ಯವಹಾರ ಶುರು ಮಾಡಿದ್ದಾಳೆ. ಆಸ್ಟ್ರೇಲಿಯಾ (Australia) ದ ನಿವಾಸಿ ಮೋನಿಕ್ ಜೆರೆಮಿಯಾ ಹಣ ಸಂಪಾದಿಸಲು ಹಾಟ್ ಬೆಡ್ಡಿಂಗ್  ವ್ಯವಹಾರ ಪ್ರಾರಂಭಿಸಿರುವ ಮಹಿಳೆ. ಈ 'ಹಾಟ್ ಬೆಡ್ಡಿಂಗ್' ಎಂದರೇನು ಮತ್ತು ಇದರ ಪ್ರಯೋಜನವೇನು ಎಂದು ನೀವು ಪ್ರಶ್ನೆ ಮಾಡ್ಬಹುದು. ಅದಕ್ಕೆ ಉತ್ತರ ಇಲ್ಲಿದೆ.

Latest Videos

undefined

ಇಂಡಿಯಾ-ಭಾರತ್‌ ಹೆಸರಿನ ಗದ್ದಲದ ನಡುವೆ, ಕಂಪನಿಯ ಹೆಸರನ್ನು ಭಾರತ್‌ಡಾರ್ಟ್‌ ಎಂದು ಬದಲಿಸಿದ ಬ್ಲ್ಯೂಡಾರ್ಟ್‌!

ಹಾಟ್ ಬೆಡ್ಡಿಂಗ್ ಅಂದ್ರೆ ಹಾಸಿಗೆಯನ್ನು ಬಾಡಿಗೆಗೆ ನೀಡುವುದು. ಅದೂ ಹಾಸಿಗೆಯ ಒಂದು ಭಾಗವನ್ನು ಮಾತ್ರ ಎನ್ನುವುದು ವಿಶೇಷ. ಹಾಸಿಗೆಯ ಒಂದು ಭಾಗವನ್ನು ಬಾಡಿಗೆಗೆ ನೀಡಿರುವ ಮೋನಿಕ್ ಜೆರೆಮಿಯಾ ಇನ್ನೊಂದು ಭಾಗದಲ್ಲಿ ತಾನು ಮಲಗ್ತಾಳೆ.  36 ವರ್ಷದ ಮೋನಿಕ್ ಜೆರೆಮಿಯಾ,ಅಪರಿಚಿತರಿಗೆ ಅರ್ಧ ಹಾಸಿಗೆಯನ್ನು ಬಾಡಿಗೆಗೆ ನೀಡಿ ಹಣ ಸಂಪಾದನೆ ಮಾಡ್ತಿದ್ದಾಳೆ. ಆಕೆ ವ್ಯವಹಾರ ನಿಮಗೆ ಅಚ್ಚರಿ ತರಬಹುದು. ಹಾಸಿಗೆಯಲ್ಲಿ ಅರ್ಧಾ ಬಾಗ ಬಾಡಿಗೆಗೆ ನೀಡುವುದು, ಅದೂ ಒಂದು ಮಹಿಳೆ ಎಂದಾಗ ಅಚ್ಚರಿಯಾಗದೆ ಇರೋದಿಲ್ಲ. ಭಾವನಾತ್ಮಕವಾಗಿ ಸಂಬಂಧ (Emotional Bonding) ಹೊಂದಿಲ್ಲದ ಹಾಗೂ ಪಕ್ಕದಲ್ಲಿರುವ ವ್ಯಕ್ತಿಯ ಸ್ಥಾನವನ್ನು ಗೌರವಿಸುವ ವ್ಯಕ್ತಿಗೆ ಮಾತ್ರ ಮೋನಿಕ್ ಜೆರೆಮಿಯಾ ಹಾಸಿಗೆಯನ್ನು ಬಾಡಿಗೆಗೆ ನೀಡುತ್ತಾಳೆ.

ಹಾಟ್ ಬೆಡ್ಡಿಂಗ್ ವ್ಯವಹಾರದ ಜೊತೆ ಬೇರೆ ಜಾಬ್ ಕೂಡ ಮಾಡ್ತಾಳೆ ಮೋನಿಕ್ ಜೆರೆಮಿಯಾ. ಇವೆರಡರಿಂದ ಹೆಚ್ಚು ಹಣ ಸಂಪಾದನೆ ಮಾಡಬಹುದು ಎಂಬುದು ಮೋನಿಕ್ ಜೆರೆಮಿಯಾ ಮಾತು. ಆಕೆ ಹಾಟ್ ಬೆಡ್ಡಿಂಗ್ ವ್ಯವಹಾರದಲ್ಲಿ ಪ್ರತಿ ತಿಂಗಳು ಸುಮಾರು 51 ಸಾವಿರ ರೂಪಾಯಿ ಗಳಿಸ್ತಾಳಂತೆ. 

ಹೊಸ ದಾಖಲೆ ಬರೆದ ಮುಂಬೈ ಗಣೇಶ ಹಬ್ಬ, ಲಾಲ್‌ಬೌಗುಚಾ ರಾಜಾನಿಗೆ 26. 5 ಕೋಟಿ ವಿಮೆ!

ಕೊರೊನಾ ಸಂದರ್ಭದಲ್ಲಿ ಶುರುವಾಯ್ತು ಈ ವ್ಯವಹಾರ: ಮೋನಿಕ್ ಜೆರೆಮಿಯಾ ಕೊರೊನಾ ಸಮಯದಲ್ಲಿ ಹಾಟ್ ಬೆಡ್ಡಿಂಗ್ ವ್ಯವಹಾರ ಶುರು ಮಾಡಿದ್ದಾಳೆ. ಕೊರೊನಾ, ಲಾಕ್‌ಡೌನ್ ಸಮಯದಲ್ಲಿ ಮೋನಿಕ್ ಜೆರೆಮಿಯಾ ಮನೆಯಲ್ಲಿ ಒಂಟಿಯಾಗಿದ್ದಳು. ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ದ ಆಕೆಗೆ ಕೆಲಸದ ಮೇಲೂ ಹೊಡೆತ ಬಿದ್ದಿತ್ತು. ಶಿಕ್ಷಣ ಆನ್ಲೈನ್ ಆದ ಕಾರಣ ಯಾರ ಜೊತೆಯೂ ಬೆರೆಯುವ ಅವಕಾಶ ಸಿಗುತ್ತಿರಲಲ್ಲ. ಇದ್ರಿಂದ ಮೋನಿಕ್ ಜೆರೆಮಿಯಾ ಜೀವನ ಬೋರಿಂಗ್ ನಿಂದ ಕೂಡಿತ್ತು. ಹಾಗೆ ಜೀವನ ನಿರ್ವಹಣೆಗೆ ಹಣ ಸಾಲ್ತಿರಲಿಲ್ಲ. ಏನನ್ನಾದ್ರೂ ಹೊಸದು ಮಾಡಬೇಕು ಎಂದು ಆಲೋಚನೆ ಮಾಡಿದ ಮೋನಿಕ್ ಜೆರೆಮಿಯಾ, ಹಾಟ್ ಬೆಡ್ಡಿಂಗ್ ವ್ಯವಹಾರ ಶುರು ಮಾಡಿದ್ಲು.

ಹಾಟ್ ಬೆಡ್ಡಿಂಗ್ ಗೆ ಪರಸ್ಪರ ಗೌರವಿಸುವ ಹಾಗೂ ಆರಾಮದಾಯಕ ವ್ಯಕ್ತಿಯನ್ನು ಮೋನಿಕ್ ಜೆರೆಮಿಯಾ ಹುಡುಕುತ್ತಿದ್ದಳು. ಆಕೆಯ ಮೊದಲ ಕ್ಲೈಂಟ್ ಆಗಿ ಬಂದಿದ್ದು ಆಕೆ ಮಾಜಿ ಗೆಳೆಯ. ಆತನಿಗೆ ಮಾನಸಿಕ ಬೆಂಬಲದ ಅಗತ್ಯವಿತ್ತು ಎನ್ನುತ್ತಾಳೆ ಮೋನಿಕ್ ಜೆರೆಮಿಯಾ. ಹಾಟ್ ಬೆಡ್ಡಿಂಗ್ (Hot Bedding) ವ್ಯವಹಾರ ಶುರು ಮಾಡಿದ ಮೇಲೆ ಮೋನಿಕ್ ಜೆರೆಮಿಯಾ ಎರಡು ಬಾರಿ ತನ್ನ ಮಾಜಿ ಗೆಳೆಯನಿಗೆ ಬೆಡ್ ಬಾಡಿಗೆ ನೀಡಿದ್ದಾಳೆ.   

click me!