ದೇಶದ ಅಭಿವೃದ್ಧಿಅಳತೆಗೆ ಜಿಡಿಪಿ ಅಲ್ಲ,ತಲಾ ಆದಾಯ ಮಾನದಂಡವಾಗ್ಬೇಕು;ಚರ್ಚೆಗೆ ಕಾರಣವಾದ ಗ್ರೋವರ್ ಸಲಹೆ

By Suvarna NewsFirst Published Nov 15, 2023, 3:17 PM IST
Highlights

ದೇಶದ ಅಭಿವೃದ್ಧಿಗೆ ಜಿಡಿಪಿಯನ್ನು ಅಳತೆಗೋಲಾಗಿ ಬಳಸಲಾಗುತ್ತಿದೆ. ಆದರೆ, ಇದರ ಬದಲು ತಲಾ ಆದಾಯವನ್ನು ಬಳಸೋದು ಸೂಕ್ತ ಎಂಬ ಸಲಹೆಯನ್ನು ಭಾರತ್ ಪೇ ಸಹಂಸ್ಥಾಪಕ ಅಶ್ನೀರ್ ಗ್ರೋವರ್ ಸೋಷಿಯಲ್ ಮೀಡಿಯಾದಲ್ಲಿ ನೀಡಿದ್ದರು. ಇದು ಈಗ ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದ್ದು, ನೆಟ್ಟಿಗರು ಪರ ಹಾಗೂ ವಿರೋಧ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾರೆ. 
 

Business Desk: ಭಾರತದ ಒಟ್ಟು ದೇಶೀಯ ಉತ್ಪಾದನೆಗೆ (ಜಿಡಿಪಿ) ಸಂಬಂಧಿಸಿ ಶಾರ್ಕ್ ಟ್ಯಾಂಕ್ ಇಂಡಿಯಾ ತೀರ್ಪುಗಾರ ಹಾಗೂ ಭಾರತ್ ಪೇ ಸಹಂಸ್ಥಾಪಕ ಅಶ್ನೀರ್ ಗ್ರೋವರ್ ಅವರ ಹೇಳಿಕೆಯೊಂದು ಚರ್ಚೆ ಹುಟ್ಟುಹಾಕಿದೆ. ಜಿಡಿಪಿ ನಿರ್ಧರಿಸಲು ವಿಭಿನ್ನ ಮಾನದಂಡ ಬಳಸುವಂತೆ ಗ್ರೋವರ್ ಸಲಹೆ ನೀಡಿದ್ದಾರೆ. ಸುಮ್ಮನೆ ಮೂರನೇ ಅಥವಾ ನಾಲ್ಕನೇ ಅತೀದೊಡ್ಡ ಆರ್ಥಿಕತೆ ಎಂದು ಸಂಭ್ರಮಿಸುವ ಬದಲು ತಲಾ ಆದಾಯದ ಆಧಾರದಲ್ಲಿ ಜಿಡಿಪಿ ನಿರ್ಧರಿಸುವಂತೆ ಸಲಹೆ ನೀಡಿದ್ದಾರೆ. ತಲಾ ಆದಾಯದ ಆಧಾರದಲ್ಲಿ ಪಟ್ಟಿ ಸಿದ್ಧಪಡಿಸೋದು ಅಭಿವೃದ್ಧಿ ಅಳತೆಯ ನಿಜವಾದ ಮಾನದಂಡ ಎಂದು ಅವರು ಹೇಳಿದ್ದಾರೆ. ಇದು ಜಿಡಿಪಿಗೆ ಸಬಂಧಿಸಿ ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಜಾಗತಿಕ ಆರ್ಥಿಕ ಪ್ರಗತಿಯನ್ನು ಅಳೆಯಲು ಜಿಡಿಪಿಯನ್ನು ಮಾನದಂಡವಾಗಿ ಬಳಸಲಾಗುತ್ತದೆ. ಜಿಡಿಪಿ ಗಾತ್ರದಲ್ಲಿ ವಿಶ್ವದಲ್ಲಿ 5ನೇ ಸ್ಥಾನದಲ್ಲಿರುವ ಭಾರತ, ತಲಾ ಆದಾಯದ ಲೆಕ್ಕಾಚಾರದಲ್ಲಿ 127ನೇ ಸ್ಥಾನದಲ್ಲಿದೆ. ಅಂದರೆ ಭಾರತದ ಜಿಡಿಪಿ ಆಧಾರಿತ ಹಾಗೂ ತಲಾ ಆದಾಯದಲ್ಲಿನ ಸ್ಥಾನದ ನಡುವೆ ಬಹುದೊಡ್ಡ ಅಂತರವಿದೆ. 

ಮೋಹನ್ ದಾಸ್ ಪೈ ಎಂಬುವರು ಕಾರ್ಬನ್ ಹೊರಸೂಸುವಿಕೆಗೆ ಸಂಬಂಧಿಸಿ ಮಾಡಿದ ಪೋಸ್ಟ್ ಗೆ ಪ್ರತಿಕ್ರಿಯೆಯಾಗಿ ಗ್ರೋವರ್ ಈ ಸಲಹೆ ನೀಡಿದ್ದಾರೆ. ಜಗತ್ತಿನ ಕಾರ್ಬನ್ ಉಗುಳುವಿಕೆ ಪ್ರಮಾಣವನ್ನು ಅತೀದೊಡ್ಡ ಮಾಲಿನ್ಯ ಹೊಂದಿರುವ ರಾಷ್ಟ್ರದ ಆಧಾರದಲ್ಲಿ ಲೆಕ್ಕಾಚಾರ ಮಾಡುವ ಬದಲು ಪ್ರತಿ ವ್ಯಕ್ತಿಯ ಆಧಾರದಲ್ಲಿ ಲೆಕ್ಕ ಹಾಕಬೇಕು ಎಂಬ ಸಲಹೆ ನೀಡಿದ್ದರು. ಇದರಿಂದ ಸ್ಪಷ್ಟವಾದ ಚಿತ್ರಣ ಸಿಗುತ್ತದೆ ಎಂಬ ಮಾಹಿತಿ ನೀಡಿದ್ದರು. ಚೀನಾ ಹಾಗೂ ಅಮೆರಿಕದ ನಡುವೆ ಪ್ರತಿ ವ್ಯಕ್ತಿಯ ಹೊಗೆ ಉಗುಳುವಿಕೆ ಪ್ರಮಾಣದಲ್ಲಿ ವ್ಯತ್ಯಾಸವಿದೆ. ಏಕೆಂದರೆ ಚೀನಾ ಅತೀದೊಡ್ಡ ಪ್ರಮಾಣದಲ್ಲಿ ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ ಎಂದು ಅವರು ಹೇಳಿದ್ದರು.

ಈ ಆರ್ಥಿಕ ಸಾಲಿನಲ್ಲಿ ಭಾರತದ ಜಿಡಿಪಿ ಅಂದಾಜು ದರ ಶೇ.6.3: ವಿಶ್ವ ಬ್ಯಾಂಕ್

ಜಾಗತಿಕ ಆರ್ಥಿಕ ಬೆಳವಣಿಗೆಯನ್ನು ಅಳತೆ ಮಾಡಲು ಜಿಡಿಪಿಯನ್ನು ಪ್ರಮುಖ ಮಾನದಂಡವಾಗಿ ಬಳಸಲಾಗುತ್ತಿದೆ. ಜಿಡಿಪಿ ಗಾತ್ರದಲ್ಲಿ ಭಾರತದ ವಿಶ್ವದಲ್ಲೇ 5ನೇ ಸ್ಥಾನ ಹೊಂದಿದೆ. ಈ ಮೂಲಕ ಅಭಿವೃದ್ಧಿ ಹೊಂದಿರುವ ಅನೇಕ ರಾಷ್ಟ್ರಗಳನ್ನು ಅದು ಹಿಂದಿಕ್ಕಿದೆ. 

ಜಾಗತಿಕ ಆರ್ಥಿಕ ಬೆಳವಣಿಗೆಯನ್ನು ಅಳೆಯಲು ಜಿಡಿಪಿಯನ್ನು ಪ್ರಮುಖ ಮಾನದಂಡವಾಗಿ ಬಳಸಲಾಗುತ್ತದೆ. ಇನ್ನು ಜಿಡಿಪಿ ಗಾತ್ರದಲ್ಲಿ ಭಾರತ ಜಾಗತಿಕವಾಗಿ 5ನೇ ಸ್ಥಾನ ಹೊಂದಿದೆ. ಆದರೆ, ತಲಾ ಆದಾಯದಲ್ಲಿ ಭಾರತ ಹಿಂದೆ ಉಳಿದಿದ್ದು, 127ನೇ ಸ್ಥಾನದಲ್ಲಿದೆ.ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಇತ್ತೀಚಿನ ದಾಖಲೆ ಅನ್ವಯ 2022-23ನೇ ಸಾಲಿನಲ್ಲಿ ಭಾರತದ ತಲಾ ನಿವ್ವಳ ರಾಷ್ಟ್ರೀಯ ಆದಾಯ (NNI) 98,374ರೂ.ಗೆ ಏರಿಕೆಯಾಗಿದೆ. ಸಮಗ್ರ ಜಿಡಿಪಿ ಹಾಗೂ ತಲಾ ಆದಾಯದ ನಡುವಿನ ಭಾರೀ ವ್ಯತ್ಯಾಸ ಭಾರತದ ಆರ್ಥಿಕತೆಯನ್ನು ಕುಗ್ಗಿಸಿದೆ. 

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಜಾಗತಿಕ ಏರಿಳಿತಗಳ ನಡುವೆಯೂ ತನ್ನ ದೃಢವಾದ ಆರ್ಥಿಕ ನೀತಿಗಳಿಂದಾಗಿ ಶೇ6.3ರಷ್ಟು ಏರಿಕೆ ಕಾಣಲಿದೆ ಎಂದು ವಿಶ್ವಬ್ಯಾಂಕ್‌ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.  ಹೂಡಿಕೆ ಹಾಗೂ ದೇಶೀಯ ಬೇಡಿಕೆ ಗಮನಿಸಿ ವಿಶ್ವ ಬ್ಯಾಂಕ್ ಈ ಬೆಳವಣಿಗೆ ದರವನ್ನು ಅಂದಾಜಿಸಿದೆ. 

ವಿಶ್ವದ ಟಾಪ್‌ 10 ಆರ್ಥಿಕತೆಯಲ್ಲಿ ನಾವೇ ಬೆಸ್ಟ್‌ : ಇತರ ರಾಷ್ಟ್ರಗಳೊಂದಿಗೆ ಹೋಲಿಸಿ ಗ್ರಾಫ್‌ ಬಿಡುಗಡೆ

ವಿಶ್ವದ ಅಗ್ರ 10 ಆರ್ಥಿಕತೆಗಳಲ್ಲಿ ಭಾರತದ ಸ್ಥಾನವೇ ಅತ್ಯುತ್ತಮವಾಗಿದೆ ಎಂದು ಕೇಂದ್ರ ಸರ್ಕಾರ ಆಗಸ್ಟ್ ಕೊನೆಯಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಗ್ರಾಫ್‌ ಬಿಡುಗಡೆ ಮಾಡಿರುವ ಸರ್ಕಾರ, ಭಾರತದ ಜಿಡಿಪಿ ಬೆಳವಣಿಗೆ ಶೇ.5.9ರಷ್ಟಿದೆ ಎಂದು ಹೇಳಿತ್ತು. ಈ ಗ್ರಾಫಿಕ್ಸ್ ನಲ್ಲಿ ಅಮೆರಿಕ, ಚೀನಾ, ಕೆನಡಾ (Canada) ದೇಶಗಳ ಆರ್ಥಿಕತೆಯನ್ನು ಹೋಲಿಕೆ ಮಾಡಲಾಗಿದೆ. ಭಾರತದ ಆರ್ಥಿಕ (Indian Economy) ಪ್ರಗತಿ ದರ ಶೇ.5.9 ಇದ್ದು ಭಾರತ ಮೊದಲ ಸ್ಥಾನದಲ್ಲಿದೆ. 

click me!