ಚಿನ್ನದ ದರ 82,000 ರು.!: ಏನಿದರ ಲೆಕ್ಕಾಚಾರ?

By Kannadaprabha NewsFirst Published Apr 26, 2020, 9:56 AM IST
Highlights

ಅಮೆರಿಕದ ಬ್ಯಾಂಕ್‌ ಆಫ್‌ ಅಮೆರಿಕ ಸೆಕ್ಯುರಿಟೀಸ್‌ (ಬಿಒಎಫ್‌ಎ) 2021ರ ಅಂತ್ಯಕ್ಕೆ 10 ಗ್ರಾಂ ಚಿನ್ನದ ದರ 82,000 ರು.ಗೆ ಏರಿಕೆಯಾಗುತ್ತದೆ ಎಂದು ಅಂದಾಜು ಮಾಡಿದೆ. ಇದು ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ನಿಜಕ್ಕೂ ಇದು ಸಾಧ್ಯವೇ ಎಂದು ತಿಳಿಯುವುದು ಈ ಲೇಖನದ ಉದ್ದೇಶ.

ಅಮೆರಿಕದ ಬ್ಯಾಂಕ್‌ ಆಫ್‌ ಅಮೆರಿಕ ಸೆಕ್ಯುರಿಟೀಸ್‌ (ಬಿಒಎಫ್‌ಎ) 2021ರ ಅಂತ್ಯಕ್ಕೆ 10 ಗ್ರಾಂ ಚಿನ್ನದ ದರ 82,000 ರು.ಗೆ ಏರಿಕೆಯಾಗುತ್ತದೆ ಎಂದು ಅಂದಾಜು ಮಾಡಿದೆ. ಇದು ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ನಿಜಕ್ಕೂ ಇದು ಸಾಧ್ಯವೇ ಎಂದು ತಿಳಿಯುವುದು ಈ ಲೇಖನದ ಉದ್ದೇಶ.

"

ಚಿನ್ನದ ದರ ನಿಗದಿ ಹೇಗೆ?

ಅನಾದಿ ಕಾಲದಿಂದಲೂ ಚಿನ್ನದ ಬಳಕೆಯಿದೆ, ಬೇಡಿಕೆಯಿದೆ, ಮೌಲ್ಯ ಹೆಚ್ಚುತ್ತಿದೆ. 2005ರಲ್ಲಿ 10ಗ್ರಾಂ ಗೆ 7000 ರು. ಇದ್ದ ಚಿನ್ನದ ದರ, ಈಗ 45,000 ರು. ಮುಟ್ಟಿದೆ. ಚಿನ್ನದ ದರ ನಿಗದಿಯಾಗುವುದು ಉತ್ಪಾದನೆ ವೆಚ್ಚ, ಡಾಲರ್‌ ಬೆಲೆ (ರುಪಾಯಿ ಮೌಲ್ಯ), ದೇಶಗಳು ವಿಧಿಸುವ ತೆರಿಗೆಗಳೊಂದಿಗೆ ಚಿನ್ನಕ್ಕಿರುವ ಬೇಡಿಕೆ ಮತ್ತು ಅದರ ಪೂರೈಕೆ ಆಧಾರದ ಮೇಲೆ. ಇತರೆ ದೇಶಗಳಿಗೆ ಹೋಲಿಸಿದರೆ ಜನರಿಂದ ಹೆಚ್ಚು ಬೇಡಿಕೆ ಇರುವುದು ಭಾರತ ಮತ್ತು ಚೀನಾ ದೇಶದಿಂದ. ಅಲ್ಲದೆ ದೇಶದ ಸೆಂಟ್ರಲ್‌ ಬ್ಯಾಂಕ್‌ ಅಂದರೆ ನಮ್ಮ ಆರ್‌ಬಿಐ ಕೂಡ ಹೆಚ್ಚು ಚಿನ್ನವನ್ನು ಖರೀದಿಸಿ ಖಜಾನೆಯಲ್ಲಿ ಇಡುತ್ತದೆ.

ಲಾಕ್‌ಡೌನ್‌: ಅಕ್ಷಯ ತೃತೀಯ ದಿನದಂದು ಕೋಟಿ ಕೋಟಿ ನಷ್ಟ..!

ಆದರೆ ಹಲವು ಬಾರಿ ಚಿನ್ನದ ಬೆಲೆ ದಿಢೀರ್‌ ಹೆಚ್ಚಾಗುವುದುಂಟು. ಇದಕ್ಕೆ ಮುಖ್ಯ ಕಾರಣ ಷೇರು ಮಾರುಕಟ್ಟೆಯಲ್ಲಿ ಉಂಟಾಗುವ ವ್ಯತ್ಯಯ. ಷೇರು ಮಾರುಕಟ್ಟೆಕುಸಿತ ಕಂಡಾಗ ಚಿನ್ನದ ಬೆಲೆ ಏರುವುದು ಸಹಜ. ಏಕೆಂದರೆ ದೊಡ್ಡ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಚಿನ್ನದಲ್ಲಿ ಹೂಡುತ್ತಾರೆ. ಮತ್ತೆ ಮಾರಿ ಷೇರು ಮಾರುಕಟ್ಟೆಸುಧಾರಿಸಿದಾಗ ಅದರಲ್ಲಿ ಹೂಡುತ್ತಾರೆ. ಈ ರೀತಿಯ ಏರಿಳಿತ ಕಡಿಮೆ ಅವಧಿ ಇರುತ್ತದೆ.

ಉತ್ಪಾದನೆಯ ಮಿತಿ

ಈಗ ಹರಡಿರುವ ಕೊರೋನಾ ದೆಸೆಯಿಂದ 200ಕ್ಕೂ ಹೆಚ್ಚು ದೇಶಗಳ ಆರ್ಥಿಕತೆ ಅದಃಪತನಗೊಂಡಿದೆ. ಎಲ್ಲ ದೇಶಗಳ ಷೇರು ಮಾರುಕಟ್ಟೆಗಳು ಕುಸಿದಿವೆ. ಹಾಗಾಗಿ ಹೂಡಿಕೆದಾರರು ಚಿನ್ನದ ಕಡೆ ಮುಖ ಮಾಡಿದ್ದಾರೆ. ಅಲ್ಲದೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ತುಂಬಾ ಕಡಿಮೆ ಇದೆ. ಹಾಗಾಗಿ ಅದನ್ನು ಆಮದು ಮಾಡಿಕೊಳ್ಳುವ ದೇಶಗಳು ಮತ್ತು ಹೂಡಿಕೆದಾರರೂ ಕೂಡ ಚಿನ್ನದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಆದ್ದರಿಂದ ಚಿನ್ನದ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಅದರ ದರ ಕೂಡ ಏರುತ್ತದೆ.

ಬೇರೆ ಬೇರೆ ಪದಾರ್ಥಗಳಂತೆ ಬೇಡಿಕೆ ಏರಿದ ಕೂಡಲೆ ಚಿನ್ನದ ಉತ್ಪಾದನೆ ಹೆಚ್ಚಿಸಲಾಗದು. ಅದು ಒಂದು ಮಿತಿಯಲ್ಲಿಯೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಬಿಒಎಫ್‌ಎ ತಜ್ಞರು ಲೆಕ್ಕಾಚಾರ ಮಾಡಿ 2021ರ ಅಂತ್ಯಕ್ಕೆ ಚಿನ್ನದ ದರ 82,000 ರು. ಮುಟ್ಟುತ್ತದೆ ಎಂದು ಅಂದಾಜು ಮಾಡಿದ್ದಾರೆ. ಆದರೆ ಅಂದಾಜನ್ನು ನೇರವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಆರ್ಥಿಕತೆ ಕುಸಿತದಿಂದಾಗಿ ಜನರಲ್ಲಿ ಹೂಡಿಕೆಗಾಗಿ ಹಣದ ಲಭ್ಯತೆ ಕಡಿಮೆಯಾಗುತ್ತಿದೆ.

ಚಿನ್ನ ಪ್ರಿಯರಿಗೆ ಚಿನ್ನದಂತ ಮಾತು! ಇಲ್ಲಿ ಸ್ವಲ್ಪ ಕೇಳಿ!

ಕಷ್ಟದ ಪರಿಸ್ಥಿತಿಯಲ್ಲಿ ಜನರ ಆಯ್ಕೆ ಅಗತ್ಯ ವಸ್ತುಗಳಿಗೆ ಪ್ರಾಮುಖ್ಯತೆ ಮತ್ತು ಹಣವನ್ನು ಖರ್ಚು ಮಾಡುವುದನ್ನು ಕಡಿಮೆ ಮಾಡುತ್ತಾರೆ. ಅಲ್ಲದೆ ಸೆಂಟ್ರಲ್‌ ಬ್ಯಾಂಕುಗಳೂ ಕೂಡ ತಮ್ಮಲ್ಲಿರುವ ಚಿನ್ನವನ್ನು ಸ್ವಲ್ಪ ಮಾರುಕಟ್ಟೆಗೆ ಬಿಡುಗಡೆ ಮಾಡುವುದರ ಮೂಲಕ ಲಾಭ ಪಡೆಯುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ನೈಸರ್ಗಿಕ ವಿಕೋಪಗಳಿಂದಾಗುವ ಆರ್ಥಿಕ ಕುಸಿತ ಬೇಗನೆ ಸರಿಯಾಗುತ್ತದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಅಂದಾಜು ದರ ತಲುಪುವುದು ಕಷ್ಟ.

ಭಾರತದಲ್ಲಿ ಏನಾಗಬಹುದು?

ಹಾಗಾದರೆ ಭಾರತದಲ್ಲಿ 2021ರ ಅಂತ್ಯಕ್ಕೆ ಚಿನ್ನದ ದರ ಎಷ್ಟಾಗಬಹುದು? ನಮ್ಮ ದೇಶ ಕಚ್ಚಾ ತೈಲದ ನಂತರ ಅತಿ ಹೆಚ್ಚು ಆಮದು ಮಾಡಿಕೊಳ್ಳುವುದು ಚಿನ್ನವನ್ನು. ನಾವು ಚಿನ್ನವನ್ನು ಹೂಡಿಕೆಗಿಂತಲೂ ಹೆಚ್ಚಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ. ಎಲ್ಲಾ ಕಾರ‍್ಯಕ್ರಮಗಳಿಗೆ ಮುಖ್ಯವಾಗಿ ಮದುವೆ ಸಮಾರಂಭಗಳಿಗೆ ಚಿನ್ನ ಅವಶ್ಯಕ. ನಮಗೆ ಸಿಗುವ ಚಿನ್ನದ ಬೆಲೆ ನಿಗದಿಯಾಗುವುದು ಅಂತಾರಾಷ್ಟ್ರೀಯ ಮಾರುಕಟ್ಟೆಬೆಲೆ, ಡಾಲರ್‌ ಬೆಲೆ, ಸೀಮಾ ಸುಂಕ ಮತ್ತು ಜಿಎಸ್‌ಟಿ ಆಧಾರದ ಮೇಲೆ. ನಮ್ಮ ದೇಶದಲ್ಲಿ ಶೇ.10ರಷ್ಟುಸೀಮಾ ಸುಂಕ ಮತ್ತು ಶೇ.3ರಷ್ಟುಜಿಎಸ್‌ಟಿ ವಿಧಿಸಲಾಗುತ್ತಿದೆ. ಇವೆಲ್ಲದರ ಆಧಾರದ ಮೇಲೆ ನಮ್ಮ ದೇಶದಲ್ಲಿ ಚಿನ್ನದ ದರ ನಿಗದಿಯಾಗುತ್ತದೆ.

ಹೂಡಿಕೆದಾರರ ಗಮನಕ್ಕೆ

ಸರಿಯಾದ ಅಂದಾಜು ಮಾಡುವುದಾದರೆ 2021ರ ಅಂತ್ಯಕ್ಕೆ ಚಿನ್ನದ ದರ 10ಗ್ರಾಂ ಗೆ 50,000 ರುಪಾಯಿ ಆಸುಪಾಸಿನಲ್ಲಿ ಇರುತ್ತದೆ. ಹಾಗಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವವರು ಈ ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.

ಆನ್‌ಲೈನ್‌ನಲ್ಲಿ ಚಿನ್ನ, ಕೊಳ್ಳುವುದು ಹೇಗಣ್ಣ?

ಮೊದಲನೆಯದಾಗಿ ನಿಮ್ಮ ಬಳಿ ಹೂಡಿಕೆಗಾಗಿ ಹಣ ಇರಬೇಕು. ಯಾವುದೇ ಕಾರಣಕ್ಕಾಗಿ ಸಾಲ ಮಾಡಿ ಹಣ ಹೂಡಿಕೆ ಮಾಡಬೇಡಿ. ಅಗತ್ಯವಿರುವಷ್ಟುಆಭರಣಗಳನ್ನು ಕೊಳ್ಳಿ. ಮಿಕ್ಕಿದ ಹಣ, ನಾಣ್ಯಗಳು ಮತ್ತು ಗಟ್ಟಿಮೇಲಿರಲಿ. ಹಳೆಯ ಚಿನ್ನವನ್ನು ಮಾರಿ ಹೊಸ ಚಿನ್ನವನ್ನು ಹೂಡಿಕೆ ಮಾಡಬೇಡಿ. ಅದರಿಂದ ನಿಮಗೆ ಸ್ವಲ್ಪ ನಷ್ಟವಾಗುತ್ತದೆ. ಹಾಲ್‌ ಮಾರ್ಕ್ ಇರುವ ಚಿನ್ನವನ್ನೇ ಖರೀದಿಸಿ. ಮುಖ್ಯವಾಗಿ ನಿಮಗೆ ಚಿನ್ನದ ಹೂಡಿಕೆಯೇ ಮುಖ್ಯವಾಗಿದ್ದರೆ ಚಿನ್ನದ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿ. ನಮ್ಮ ಸರ್ಕಾರದ ಜೊತೆ ಹಲವು ಸಂಸ್ಥೆಗಳು ಚಿನ್ನದ ಬಾಂಡ್‌ಗಳನ್ನು ನೀಡುತ್ತಿವೆ.

ಒಟ್ಟಾರೆ ನಿಮಗೆ ಅವಕಾಶವಿದ್ದರೆ ಚಿನ್ನದ ಹೂಡಿಕೆಗಳಿಗೆ ಸೂಕ್ತ ಕಾಲ. ಬ್ಯಾಂಕ್‌ ಬಡ್ಡಿಗಿಂತ ಹೆಚ್ಚಿನ ಆದಾಯವನ್ನು ನಿಮಗೆ ನೀಡುತ್ತದೆ.

 

 

click me!