ಕರೆನ್ಸಿ ನೋಟ್‌ ಬ್ಯಾನ್‌ ಮಾಡಿದ ಪಾಕಿಸ್ತಾನ, ಹೊಸ ನೋಟು ಬಿಡುಗಡೆಗೆ ಆದೇಶ!

By Santosh NaikFirst Published Jan 30, 2024, 7:49 PM IST
Highlights

ಹೊಸ ನೋಟುಗಳು ಈಗಾಗಲೇ ಅಸ್ತಿತ್ವದಲ್ಲಿರುವ ಕರೆನ್ಸಿಯನ್ನು ಕ್ರಮೇಣವಾಗಿ ಬದಲಾಯಿಸಲಿದೆ. ಜನರಿಗೆ ಆಗುವ ಅಡಚಣೆ ಹಾಗೂ ಜನರಲ್ಲಾಗುವ ಭೀತಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ  ಎಂದು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ಗವರ್ನರ್ ಜಮೀಲ್ ಅಹ್ಮದ್ ಹೇಳಿದ್ದಾರೆ.

ನವದೆಹಲಿ (ಜ.30): ನಕಲಿ ನೋಟುಗಳ ಕಾರಣದಿಂದಾಗಿ ಆರ್ಥಿಕತೆಯ ಮೇಲೆ ದೊಟ್ಟ ಪರಿಣಾಮವನ್ನು ಎದುರಿಸುತ್ತಿರುವ ಪಾಕಿಸ್ತಾನದ ಸೆಂಟ್ರಲ್‌ ಬ್ಯಾಂಕ್‌. ಸುಧಾರಿತ ಅಂತರರಾಷ್ಟ್ರೀಯ ಭದ್ರತಾ ವೈಶಿಷ್ಟ್ಯಗಳಿರುವ ಹೊಸ ನೋಟುಗಳನ್ನು ಪರಿಚಯಿಸುವ ಯೋಜನೆಯನ್ನು ಪ್ರಕಟ ಮಾಡಿದೆ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ಗವರ್ನರ್ ಜಮೀಲ್ ಅಹ್ಮದ್ ಪ್ರಕಾರ, ಹೊಸ ನೋಟುಗಳು ಅಸ್ತಿತ್ವದಲ್ಲಿರುವ ಕರೆನ್ಸಿಯನ್ನು ಕ್ರಮೇಣವಾಗಿ ಬದಲಾಯಿಸುತ್ತವೆ. ಸಾರ್ವಜನಿಕರಿಗೆ ಆಗುವ ಸಮಸ್ಯೆಯನ್ನು ಕಡಿಮೆ ಮಾಡಲು ಹಾಗೂ ಅವರಲ್ಲಾಗುವ ಆತಂಕವನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಹೊಸ ಮಾದರಿಯ ನೋಟುಗಳು ವಿಭಿನ್ನ ಭದ್ರತಾ ಸಂಖ್ಯೆಗಳು ಮತ್ತು ವಿನ್ಯಾಸಗಳನ್ನು ಒಳಗೊಂಡಿರುತ್ತವೆ, ಆಧುನಿಕ ಮಾನದಂಡಗಳೊಂದಿಗೆ ಪಾಕಿಸ್ತಾನದ ಕರೆನ್ಸಿ ಇರಲಿದೆ ಎಂದು ಅಹ್ಮದ್‌ ತಿಳಿಸಿದ್ದಾರೆ. ನೋಟುಗಳ ಭದ್ರತೆಯನ್ನು ಹೆಚ್ಚಿಸುವುದು ಪ್ರಮುಖ ಗುರಿಯಾಗಿದ್ದರೂ, ಕಪ್ಪುಹಣದ ಸಮಸ್ಯೆಯನ್ನು ಮಟ್ಟಹಾಕಲು 5 ಸಾವಿರ ಹಾಗೂ ಅದಕ್ಕಿಂತ ಹೆಚ್ಚಿನ ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಸಾಧ್ಯತೆಯೂ ಇದಾಗಿರಬಹುದು ಎಂದು ಹಣಕಾಸು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚಿನ ಮುಖಬೆಲೆಯ ನೋಟುಗಳ ಚಲಾವಣೆಯು ಕಪ್ಪುಹಣದ ಅಕ್ರಮ ಬಳಕೆಯನ್ನು ಸುಲಭಗೊಳಿಸಿದೆ, ಪಾಕಿಸ್ತಾನದಲ್ಲಿ ಈಗಾಗಲೇ ನಗದು ಕೊರತೆಯ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ.

ಕ್ಯಾಪಿಟಲ್ ಇನ್ವೆಸ್ಟ್‌ಮೆಂಟ್‌ನ ಸೊಹೇಲ್ ಫಾರೂಕ್ ಅವರು ಪಾಕಿಸ್ತಾನದ ವಿತ್ತೀಯ ವ್ಯವಸ್ಥೆಯ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರೀಯ ಬ್ಯಾಂಕ್ ತೆಗೆದುಕೊಂಡ ಸಕಾರಾತ್ಮಕ ಹೆಜ್ಜೆಯನ್ನು ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ನೋಟು ಅಮಾನ್ಯೀಕರಣವನ್ನು ಕರೆನ್ಸಿ ಪರಿವರ್ತನೆಯಲ್ಲಿ ಸೇರಿಸಲಾಗುತ್ತದೆಯೇ ಎಂಬ ಪ್ರಶ್ನೆಯ ಬಗ್ಗೆ ಗೊಂದಲವಿದೆ ಎಂದು ತಿಳಿಸಿದ್ದಾರೆ.

Latest Videos

ನಗದು ಹಣದ ಕೊರತೆ ಎದುರಿಸುತ್ತಿರುವ ಪಾಕಿಸ್ತಾನದ ಆರ್ಥಿಕತೆಯುಲ್ಲಿ ಕಪ್ಪು ಹಣದ ಬಳಕೆ ಹೆಚ್ಚಾಗಿ ಕಾಣುತ್ತಿದೆ. ಹೆಚ್ಚಿನ ಮುಖಬೆಲೆಯ ನೋಟುಗಳ ಚಲಾವಣೆಯಿಂದ ಇದು ಬಹಳ ಸುಲಭವೂ ಆಗಿದೆ. ಪಾಕಿಸ್ತಾನದ ಆರ್ಥಿಕತೆಯ ದೃಷ್ಟಿಯಿಂದ ಇದು ಉತ್ತಮವಾಗಿದೆ. ಇದರಲ್ಲಿ ನೋಟು ಅಮಾನ್ಯೀಕರಣ ಒಳಗೊಂಡಿದೆಯೇ ಇಲ್ಲವೇ ಎನ್ನುವುದು ಖಚಿತವಾಗಬೇಕಿದೆ ಎಂದು ಫಾರೂಕ್‌ ಹೇಳಿದ್ದಾರೆ.

₹2000 ನೋಟು ಇನ್ನೂ ಇದೆಯಾ? ಅಂಚೆ ಮೂಲಕ ಕಳಿಸಿ ನಗದಾಗಿಸಿ

ಹೊಸ ಕರೆನ್ಸಿಯ ಅನುಷ್ಠಾನದ ಸಮಯದಲ್ಲಿ ಸಾರ್ವಜನಿಕರಿಗೆ ಮತ್ತು ವ್ಯವಹಾರಗಳಿಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ಕೇಂದ್ರ ಬ್ಯಾಂಕ್ ವ್ಯವಸ್ಥೆ ಮಾಡಬೇಕು ಎಂದು ಇನ್ನೊಬ್ಬ ಬ್ಯಾಂಕರ್‌ ಹೇಳಿದ್ದಾರೆ. ಡಿಸೆಂಬರ್‌ನಲ್ಲಿ ಪಾಕಿಸ್ತಾನದಲ್ಲಿ ಹಣದುಬ್ಬರ ದರವು ಸತತ ಎರಡನೇ ತಿಂಗಳಿಗೆ ಏರಿಕೆ ಕಂಡಿದೆ. ಐಎಂಎಫ್‌ ಬೆಂಬಲಿತ ಇಂಧನ ವೆಚ್ಚದ ಹೆಚ್ಚಳ ಮತ್ತು ದುರ್ಬಲ ಕರೆನ್ಸಿಯಿಂದ ನಡೆಸಲ್ಪಟ್ಟಿದೆ. 2023 ರಲ್ಲಿ ಡಾಲರ್ ಎದುರು ಪಾಕಿಸ್ತಾನಿ ರೂಪಾಯಿ ಸರಿಸುಮಾರು 24% ರಷ್ಟು ಕುಸಿದಿದೆ.

ಮೋದಿಗೂ ಇಷ್ಟವಿರಲಿಲ್ಲ 2000 ರು. ನೋಟು : ನೋಟುಗಳ ಹಿಂತೆಗೆತ ಅಪನಗದೀಕರಣ ಅಲ್ಲ: ನೃಪೇಂದ್ರ

click me!