ಷೇರು ಮಾರುಕಟ್ಟೆ ಭಾಷೆಯಲ್ಲಿ ಶಾರ್ಟ್ ಸೆಲ್ಲಿಂಗ್ ಅಥವಾ ಶಾರ್ಟಿಂಗ್ ಎಂದು ಕರೆಯಲಾಗುವ ಇದನ್ನು ಟ್ರೇಡಿಂಗ್‌ನ ತಂತ್ರ ಎಂದೇ ಹೇಳಲಾಗುತ್ತದೆ. ಒಂದು ಷೇರಿನ ಬೆಲೆ ಇಳಿಯಲಿದೆ ಎನ್ನುವ ನಿರೀಕ್ಷೆಯಲ್ಲಿ ಷೇರು ಖರೀದಿ ಮಾಡುವ ತಂತ್ರವಾಗಿದೆ.
ನವದೆಹಲಿ (ಜ.30): ಅದಾನಿ ಗ್ರೂಪ್ ಹಾಗೂ ಹಿಂಡೆನ್‌ಬರ್ಗ್ ಕಂಪನಿ ನಡುವೆ ಆರೋಪ ಪ್ರತ್ಯಾರೋಪಗಳು ಬಿರುಸಾಗಿ ಸಾಗುತ್ತಿದೆ. ಜನವರಿ 24 ರಂದು ಸಂಶೋಧನಾ ಸಂಸ್ಥೆ ಎಂದು ಹೇಳಿಕೊಂಡಿದ್ದ ಹಿಂಡಡೆನ್‌ಬರ್ಗ್ ತನ್ನ ವರದಿಯಲ್ಲಿ ಅದಾನಿ ಗ್ರೂಪ್ ವಿರುದ್ಧ ದೊಡ್ಡ ಮಟ್ಟ್ ಆರೋಪಗಳನ್ನು ಮಾಡಿತ್ತು. ಜನವರಿ 25 ರಂದು ಹಿಂಡೆನ್ ಬರ್ಗ್ ಎನ್ನುವುದು ಶಾರ್ಟ್ ಸೆಲ್ಲರ್ ಕಂಪನಿ ಎನ್ನುವುದು ಗೊತ್ತಾಗಿದ್ದಲ್ಲದೆ, ಅದಾನಿ ಗ್ರೂಪ್‌ನಲ್ಲಿ ಶಾರ್ಟ್ ಪೊಸಿಷನ್ ಹೊಂದಿದ್ದು ಬಹಿರಂಗವಾಗಿತ್ತು. ಹಿಂಡೆನ್‌ಬರ್ಗ್ ರಿಸರ್ಚ್ ಎತ್ತಿದ್ದ ಸಾಕಷ್ಟು ತನ್ನ ಪ್ರತಿಕ್ರಿಯೆಯಲ್ಲಿ ತಿರುಗೇಟು ನೀಡಿದ್ದ ಅದಾನಿ ಗ್ರೂಪ್, ಹಿಂಡೆನ್‌ಬರ್ಗ್ ಕಂಪನಿ ಒಂದು ಅನೈತಿಕ ಶಾರ್ಟ್ ಸೆಲ್ಲರ್ ಎಂದು ಹೇಳಿತ್ತು. ತಮ್ಮ ಕಂಒನಿಯ ಷೇರುಗಳ ಬೆಲೆಯನ್ನು ಕೆಳಗಿಳಿಸಲು ಹಾಗೂ ಸುಳ್ಳು ಮಾರುಕಟ್ಟೆಯನ್ನು ಸೃಷ್ಟಿಮಾಡಲು ಈ ವರದಿಯನ್ನು ಪ್ರಕಟಿಸಿದೆ ಎಂದು ಹೇಳಿತ್ತು. ಈ ಎಲ್ಲದರ ನಡುವೆ ಶಾರ್ಟ್ ಸೆಲ್ಲರ್, ಶಾರ್ಟಿಂಗ್ ಎಂದೂ ಕರೆಯಲ್ಪಡುವ ಈ ಟ್ರೇಡಿಂಗ್ ತಂತ್ರದ ಬಗ್ಗೆ ಕುತೂಹಲಗಳು ಆರಂಭವಾಗಿದೆ. ನಿಮಗದೆ ಗೊತ್ತಿರಲಿ ಇಂದು ದೇಶದ ಜನಸಂಖ್ಯೆಯ ತೀರಾ ಅಲ್ಪ ಮಂದಿಗೆ ಮಾತ್ರವೇ ಷೇರು ಮಾರುಕಟ್ಟೆ ಬಗ್ಗೆ ತಿಳಿದಿದೆ. ಅದರಲ್ಲೂ ಷೇರು ಮಾರುಕಟ್ಟೆಯಲ್ಲಿ ಷೇರಿನ ಬೆಲೆಯನ್ನು ಇಳಿಸುವ, ಏರಿಸುವ ತಂತ್ರಗಳ ಬಗ್ಗೆ ಅದರ ವ್ಯವಹಾರದ ಬಗ್ಗೆ ಗೊತ್ತಿರುವವರು ಬಹಳ ಕಡಿಮೆ.
ಹಿಂಡೆನ್‌ಬರ್ಗ್ ವರದಿಯೇನೋ ಮಾಡಿದೆ. ಆದರೆ, ಈ ಕಂಪನಿ ಶಾರ್ಟ್ ಸೆಲ್ಲರ್ ಎಂದು ಗೊತ್ತಾದ ಬಳಿಕ ಅದಾನಿ ಗ್ರೂಪ್ ಅವರ ಮೇಲೆ ಮುಗಿಬಿದ್ದಿದೆ. ಹಾಗಂತ ಅದಾನಿ ಗ್ರೂಪ್ ವಂಚನೆ ಬಗ್ಗೆ ಅದು ಪ್ರಕಟಿಸುವ ವರದಿ ಸುಳ್ಳು ಅಂತಲ್ಲ. ಆದರೆ, ಅದಾನಿ ಗ್ರೂಪ್‌ನ ಬಗ್ಗೆ ಪ್ರಶ್ನೆ ಮಾಡಿದ್ದ ಹಿಂಡೆನ್‌ಬರ್ಗ್ ತನ್ನ ವಿಶ್ವಾಸಾರ್ಹತೆಯನ್ನೂ ಉಳಿಸಿಕೊಂಡಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಶಾರ್ಟ್ ಸೆಲ್ಲಿಂಗ್ ಅಂದರೇನು: ಸೆಬಿಯ ಮಾತುಗಳಂತೆಯೇ ಹೇಳುವುದಾದರೆ, ಟ್ರೇಡಿಂಗ್ ಸಮಯದಲ್ಲಿ ಸೆಲ್ಲರ್ ಹೊಂದಿರದ ಷೇರುಗಳನ್ನು ಮಾರಾಟ ಮಾಡುವ ಪ್ರಕ್ರಿಯೆಗೆ ಶಾರ್ಟ್ ಸೆಲ್ಲಿಂಗ್ ಎನ್ನುತ್ತಾರೆ. ಎಲ್ಲಾ ವರ್ಗದ ಹೂಡಿಕೆದಾರರು, ಅದು ಚಿಲ್ಲರೆ ಅಥವಾ ಸಾಂಸ್ಥಿಕ ಹೂಡಿಕೆದಾರರಾಗಿರಬಹುದು, ಶಾರ್ಟ್ ಸೆಲ್‌ಗೆ ಅನುಮತಿ ಇದೆ. ಶಾರ್ಟ್ ಸೆಲ್‌ನಲ್ಲಿ ಶಾರ್ಟ್ ಸೆಲ್ಲರ್ ಎರವಲು ಪಡೆದ ಸ್ಟಾಕ್ ಅನ್ನು ನಂತರ ಅಗ್ಗದ ಬೆಲೆಗೆ ಖರೀದಿಸುವ ಮೂಲಕ ಹಣವನ್ನು ಗಳಿಸುವ ಭರವಸೆಯಲ್ಲಿ ಮಾರಾಟ ಮಾಡುತ್ತಾನೆ.
ಉದಾಹರಣೆಗೆ, 500 ರೂಪಾಯಿ ಬೆಲೆಯ ಷೇರು 300 ರೂಪಾಯಿಗೆ ಕುಸಿಯಬಹುದು ಎನ್ನುವ ನಿರೀಕ್ಷೆಯಲ್ಲಿ ಶಾರ್ಟ್ ಸೆಲ್ಲರ್, ಮಾರ್ಜಿನ್ ಅಕೌಂಟ್ ಬಳಸಿಕೊಂಡು ಬ್ರೋಕರ್‌ನಿಂದ ಸ್ಟಾಕ್‌ಅನ್ನು ಎರವಲು ಪಡೆಯಬಹುದು ಅಥವಾ ಸೆಟಲ್‌ಮೆಂಟ್ ಅವಧಿಗೂ ಮುನ್ನ ಅದೇ ಷೇರನ್ನು ಮರುಖರೀದಿ ಕೂಡ ಮಾಡಬಹುದು. ಶಾರ್ಟ್ ಸೆಲ್ಲರ್ ರೂ.500 ಷೇರು 300 ರೂ.ಗೆ ಕುಸಿದಾಗ ಅದನ್ನು ಮರಳಿ ಖರೀದಿಸುವ ಭರವಸೆಯೊಂದಿಗೆ ಮಾರಾಟ ಮಾಡುತ್ತಾನೆ. ಹಾಗೇನಾದರೂ ಷೇರು ಅದೇ ಮೊತ್ತಕ್ಕೆ ಕುಸಿದರೆ, ಆತ ಆ ಷೇರನ್ನು ಖರೀದಿ ಮಾಡಿ, ತನ್ನ ಪೊಸಿಷನ್‌ಅನ್ನು ಕ್ಲೋಸ್ ಮಾಡುತ್ತಾರೆ. ಬ್ರೋಕರ್‌ಗೆ ಪಾವತಿಸಿದ ಮಾರ್ಜಿನ್ ಅನ್ನು ಕಡಿತಗೊಳಿಸಿದ ನಂತರ ಅವನು ಮಾರಾಟದ ಬೆಲೆ ಮತ್ತು ಖರೀದಿ ಬೆಲೆಯ ನಡುವಿನ ವ್ಯತ್ಯಾಸವನ್ನು ಗಳಿಸುತ್ತಾನೆ. ಒಟ್ಟಾರೆ ಶಾರ್ಟ್ ಸೆಲ್ಲರ್‌ನ ಮುಖ್ಯ ಉದ್ದೇಶ ಏನೆಂದರೆ, 'ಷೇರು ಕುಸಿದಾಗ ಹಣ ಮಾಡು' ಅನ್ನೋದು.
ಹಾಗೇನಾದರೂ ಇದೇ ಷೇರು 600 ರೂಪಾಯಿಗೆ ಏರಿದರೆ ಏನಾಗಲಿದೆ ಎನ್ನುವ ಕುತೂಹಲ ಇರಬಹುದು. ಈ ವೇಳೆ ಶಾರ್ಟ್ ಸೆಲ್ಲರ್‌ಗೆ ಪ್ರತಿ ಷೇರಿನ ಮೇಲೆ 100 ರೂಪಾಯಿ ನಷ್ಟವಾಗುತ್ತದೆ. ಷೇರು ಎಷ್ಟು ಮೊತ್ತ ಏರಿಕೆ ಕಾಣುತ್ತದೆಯೋ ಅಷ್ಟೇ ಮೊತ್ತವನ್ನು ಶಾರ್ಟ್ ಸೆಲ್ಲರ್ ಕಳೆದುಕೊಳ್ಳುತ್ತಾನೆ. ಆದ್ದರಿಂದ, ಶಾರ್ಟ್ ಸೆಲ್ಲಿಂಗ್ ಅಪಾಯಕಾರಿ ಪರಿಗಣಿಸಲಾಗುತ್ತದೆ, ಅಲ್ಲಿ ಷೇರು ಮೌಲ್ಯವು ಉಲ್ಬಣಗೊಳ್ಳುವುದನ್ನು ಮುಂದುವರೆಸಿದರೆ ನಷ್ಟವು ಅನಿಯಮಿತವಾಗಿರುತ್ತದೆ.
413 ಪುಟದ ಅದಾನಿ ಗ್ರೂಪ್ ತಿರುಗೇಟಿಗೆ ಹಿಂಡೆನ್‌ಬರ್ಗ್ ಪ್ರತಿಕ್ರಿಯೆ 'ಮೋಸವನ್ನು ರಾಷ್ಟ್ರೀಯತೆಯಿಂದ ಮರೆಮಾಚಲಾಗದು'!
ಹಿಂಡೆನ್‌ಬರ್ಗ್‌ನ ವರದಿ ಮತ್ತು ಶಾರ್ಟ್ ಸೆಲ್ಲರ್ ಬಗ್ಗೆ ಎದ್ದಿರುವ ಪ್ರತಿ-ಪ್ರಶ್ನೆಗಳ ಮಧ್ಯೆ, ಇನ್‌ಗವರ್ನ್ ರಿಸರ್ಚ್ ಸರ್ವಿಸಸ್ ಹಿಂಡೆನ್‌ಬರ್ಗ್ ಅನ್ನು ಷೇರು ಬೆಲೆಯನ್ನು ತಗ್ಗಿಸುವ ಗುರಿಯೊಂದಿಗೆ ನಕಾರಾತ್ಮಕ ವರದಿಯನ್ನು ಬಿಡುಗಡೆ ಮಾಡಲು ಪ್ರೇರೇಪಿತ ದೃಷ್ಟಿಕೋನವನ್ನು ಹೊಂದಿರುವ ಮತ್ತೊಂದು ಮಾರುಕಟ್ಟೆ ಕಂಪನಿ ಎಂದೇ ಪರಿಗಣಿಸಬೇಕು ಎಂದು ಹೇಳಿದೆ.
ಹಿಂಡೆನ್‌ಬರ್ಗ್ ರಿಸರ್ಚ್ ವಿಚಾರದಲ್ಲಿ ಶಾರ್ಟ್ ಸೆಲ್ಲರ್, ಅದಾನಿ ಗ್ರೂಪ್ ಕಂಪನಿಗಳಲ್ಲಿ ಯುಎಸ್ ಟ್ರೇಡೆಡ್ ಬಾಂಡ್‌ಗಳು ಮತ್ತು ನಾನ್-ಇಂಡಿಯನ್-ಟ್ರೇಡೆಡ್ ಡೆರಿವೇಟಿವ್‌ಗಳ ಮೂಲಕ ಇತರ ಭಾರತೀಯ-ವ್ಯಾಪಾರ ಮಾಡದ ರೆಫರೆನ್ಸ್ ಸೆಕ್ಯುರಿಟಿಗಳ ಮೂಲಕ ಶಾರ್ಟ್ ಪೊಸಿಷನ್‌ಗಳನ್ನು ಹೊಂದಿದ್ದಾರೆ ಎಂದು ಹೇಳಿದೆ. ಅ ಮೂಲಕ ಕಂಪನಿಯ ವರದಿಯ ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡಿದೆ.
ಒಂದೇ ಒಂದು ರಿಪೋರ್ಟ್, 1.44 ಲಕ್ಷ ಕೋಟಿ ಕಳೆದುಕೊಂಡ ಗೌತಮ್ ಅದಾನಿ!
ಶಾರ್ಟ್ ಸೆಲ್ಲರ್‌ಗಳ ಬಗ್ಗೆ ಸೆಬಿ ತನಿಖೆ: ಭಾರತದ ಮಾರುಕಟ್ಟೆ ನಿಯಂತ್ರಕ, ಸೆಬಿ ಕಳೆದ ಕೆಲವು ದಿನಗಳಲ್ಲಿ ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಶಾರ್ಟ್ ಸೆಲ್ಲರ್ ಕಂಪನಿಗಳನ್ನು ತನಿಖೆ ಮಾಡುವ ಸಾಧ್ಯತೆಯಿದೆ. ಕಳೆದ ಕೆಲವು ವಹಿವಾಟು ಅವಧಿಗಳಲ್ಲಿ ಭಾರತೀಯ ಮಾರುಕಟ್ಟೆಗಳು ಶಾರ್ಟ್ ಸೆಲ್ಲರ್‌ಗಳಿಂದ ದಾಳಿಗೆ ಒಳಗಾಗಿವೆ ಮತ್ತು ಮಾರುಕಟ್ಟೆಯನ್ನು ತಗ್ಗಿಸುವಲ್ಲಿ ಸಣ್ಣ ಮಾರಾಟಗಾರರ ಪಾತ್ರದ ಬಗ್ಗೆ ತನಿಖೆಯಲ್ಲಿ ತಿಳಿದುಕೊಳ್ಳಲಾಗುತ್ತದೆ ಎನ್ನಲಾಗಿದೆ.