ಮಿಸ್ತ್ರಿ ಬಲಿಪಡೆದ ಕಾರಿನದ್ದು ಡೇಂಜರ್‌ ಇತಿಹಾಸ: ಯಾವ ದೇಶದಲ್ಲಿ ಹೇಗಿದೆ ಸೀಟ್‌ ಬೆಲ್ಟ್‌ ನಿಯಮ?

By Kannadaprabha News  |  First Published Sep 7, 2022, 7:13 AM IST

ಉದ್ಯಮಿ ಸೈರಸ್‌ ಮಿಸ್ತ್ರಿ ಬಲಿ ಪಡೆದ ಕಾರು ಅಪಘಾತ ಪ್ರಕರಣ, ಕಾರು ಪ್ರಯಾಣದ ವೇಳೆ ಸೀಟ್‌ ಬೆಲ್ಟ್‌ ಧರಿಸುವುದು ಎಷ್ಟುಅಗತ್ಯ ಎಂಬುದನ್ನು ಮತ್ತೊಮ್ಮೆ ಸಾರಿ ಹೇಳಿದೆ. ವಿಶ್ವದ ಬಹುತೇಕ ದೇಶಗಳಲ್ಲಿ ಇಂಥ ನಿಯಮ ದಶಕಗಳಿಂದ ಜಾರಿಯಲ್ಲಿದ್ದು, ಅದನ್ನು ಅಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ.


ನವದೆಹಲಿ: ಉದ್ಯಮಿ ಸೈರಸ್‌ ಮಿಸ್ತ್ರಿ ಬಲಿ ಪಡೆದ ಕಾರು ಅಪಘಾತ ಪ್ರಕರಣ, ಕಾರು ಪ್ರಯಾಣದ ವೇಳೆ ಸೀಟ್‌ ಬೆಲ್ಟ್‌ ಧರಿಸುವುದು ಎಷ್ಟುಅಗತ್ಯ ಎಂಬುದನ್ನು ಮತ್ತೊಮ್ಮೆ ಸಾರಿ ಹೇಳಿದೆ. ವಿಶ್ವದ ಬಹುತೇಕ ದೇಶಗಳಲ್ಲಿ ಇಂಥ ನಿಯಮ ದಶಕಗಳಿಂದ ಜಾರಿಯಲ್ಲಿದ್ದು, ಅದನ್ನು ಅಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ನಿಯಮ ಮೀರಿದವರಿಗೆ ಕಠಿಣ ಶಿಕ್ಷೆಯೂ ಜಾರಿಯಾಗುತ್ತಿದೆ. ಭಾರತದಲ್ಲೂ ಜನತೆ ಇಂಥ ನಿಯಮ ಕಡ್ಡಾಯ ಪಾಲಿಸಬೇಕಿದೆ. ಈ ಹಿನ್ನೆಲೆಯಲ್ಲಿ ವಿವಿಧ ದೇಶಗಳಲ್ಲಿನ ಇಂಥ ನಿಯಮಗಳ ಕುರಿತ ಮಾಹಿತಿ ಇಲ್ಲಿದೆ.
 
ಅಮೆರಿಕ: 1968ರಿಂದಲೂ ಅಮೆರಿಕದಲ್ಲಿ (America) ಸೀಟ್‌ಬೆಲ್ಟ್‌ ಧರಿಸುವುದು ಕಡ್ಡಾಯ. ನ್ಯೂಯಾರ್ಕ್(New York), ನ್ಯೂಹ್ಯಾಂಪ್‌ಶೈರ್‌ ಹಾಗೂ ಮಿಚಿಗನ್‌ ರಾಜ್ಯಗಳಲ್ಲಿ ಹಿಂದಿನ ಆಸನಗಳಲ್ಲಿ ಕುಳಿತ 16 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಸೀಟ್‌ಬೆಲ್ಟ್‌ ಧರಿಸುವುದು ಕಡ್ಡಾಯವಾಗಿಲ್ಲ. ಸೀಟ್‌ಬೆಲ್ಟ್‌ ಧರಿಸದೇ ಇದ್ದವರಿಗೆ 16,000 ರು.ವರೆಗೂ ದಂಡ ವಿಧಿಸಬಹುದು.

ಆಸ್ಪ್ರೇಲಿಯಾ: 1973ರ ಬಳಿಕ ದ್ವಿಚಕ್ರ ವಾಹನ ಹೊರತುಪಡಿಸಿ ಎಲ್ಲ ಪ್ರಯಾಣಿಕ ವಾಹನಗಳ ಚಾಲಕರಿಗೆ ಸೀಟ್‌ ಬೆಲ್ಟ್‌ (seatbelt) ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಬಸ್‌ ಚಾಲಕರಿಗೆ ಸೀಟ್‌ಬೆಲ್ಟ್‌ ಕಡ್ಡಾಯವಾಗಿಲ್ಲ. ನಿಯಮ ಉಲ್ಲಂಘಿಸಿದವರಿಗೆ 70000 ರು.ವರೆಗೆ ದಂಡ ವಿಧಿಸಿ ಡ್ರೈವಿಂಗ್‌ ಲೈಸನ್ಸ್‌ ರದ್ದುಗೊಳಿಸಬಹುದಾಗಿದೆ.

Tap to resize

Latest Videos

undefined

ಕೆನಡಾ: ಕೆನಡಾದಲ್ಲೂ (Canada) 1976ರಿಂದ ಸೀಟ್‌ಬೆಲ್ಟ್‌ ಧರಿಸುವಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಚಾಲಕ ಮಾತ್ರವಲ್ಲದೇ ಮಕ್ಕಳು ಸೇರಿದಂತೆ ಕಾರಿನಲ್ಲಿ ಕುಳಿತ ಇತರೆ ಪ್ರಯಾಣಿಕರು ಸೀಟ್‌ಬೆಲ್ಟ್‌ ಧರಿಸದಿದ್ದರೂ ಕಾರಿನ ಮಾಲಿಕನು ದಂಡ ಪಾವತಿಸಬೇಕಾಗುತ್ತದೆ. ಸೀಟ್‌ಬೆಲ್ಟ್‌ ಧರಿಸಿದ್ದರೆ ಕೆನಡಾದಲ್ಲಿ 13,500 ರು. ದಂಡ ವಿಧಿಸಲಾಗುತ್ತದೆ.

ಬ್ರಿಟನ್‌: ಬ್ರಿಟನ್‌ನಲ್ಲಿ ಎಲ್ಲ ಪ್ರಯಾಣಿಕರಿಗೂ ಸೀಟ್‌ಬೆಲ್ಟ್‌ ಧರಿಸುವುದು ಕಡ್ಡಾಯವಾಗಿದೆ. ಕಾರಿನಲ್ಲಿ ಮಕ್ಕಳು ಪ್ರಯಾಣಿಸುತ್ತಿದ್ದರೆ ಅವರಿಗಾಗಿ ವಿಶೇಷ ಚೈಲ್ಡ್‌ಸೀಟು ಅಳವಡಿಸಿ, ಅವರಿಗೂ ಸೀಟ್‌ಬೆಲ್ಟ್‌ ತೊಡಿಸಬೇಕಾಗುತ್ತದೆ. ಬ್ರಿಟನ್‌ನಲ್ಲಿ ಸೀಟ್‌ಬೆಲ್ಟ್‌ ನಿಯಮ ಉಲ್ಲಂಘಿಸವರಿಗೆ 46,000 ರು.ವರೆಗೆ ದಂಡ ವಿಧಿಸಬಹುದಾಗಿದೆ.

ಜರ್ಮನಿ: 1984ರ ಬಳಿಕ ಜರ್ಮನಿಯಲ್ಲಿ (Germany) ಕಾರಿನ ಹಿಂಭಾಗದಲ್ಲಿ ಕುಳಿತವರಿಗೂ ಸೀಟ್‌ಬೆಲ್ಟ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. 12 ವರ್ಷ ಮೇಲ್ಪಟ್ಟವರು ಕಾರಿನ ಮುಂಭಾಗದಲ್ಲಿ ಕುಳಿತು ಸಾಮಾನ್ಯ ಸೀಟ್‌ ಬೆಲ್ಟ್‌ ಬಳಸಬಹುದು. ಇದಲ್ಲದಿದ್ದರೆ ಚೈಲ್ಡ್‌ ಸೀಟ್‌ನಲ್ಲೇ ಕುಳಿತುಕೊಳ್ಳಬೇಕು. ಇಲ್ಲದಿದ್ದರೆ 5000 ರು. ದಂಡ ವಿಧಿಸಲಾಗುತ್ತದೆ.

ಸಿಂಗಾಪುರ: 1993ರ ಬಳಿಕ ಸಿಂಗಾಪುರದಲ್ಲೂ ಕಾರಿನ ಹಿಂಭಾಗದಲ್ಲಿ ಕುಳಿತವರಿಗೆ ಸೀಟ್‌ಬೆಲ್ಟ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸಿಂಗಾಪುರದಲ್ಲಿ ಮಕ್ಕಳು ಪ್ರಯಾಣಿಸಬೇಕಾದರೆ ಅವರು ಅಡ್ಜಸ್ಟೆಬಲ್‌ ಸೀಟ್‌ಬೆಲ್ಟ್‌ ಧರಿಸಲೇಬೇಕು. ಈ ನಿಯಮ ಉಲ್ಲಂಘಿಸಿದವರಿಗೆ ಕೋರ್ಟ್‌ 80,000 ದಂಡ ಅಥವಾ 3 ತಿಂಗಳು ಜೈಲು ವಿಧಿಸಬಹುದು.

ಫ್ರಾನ್ಸ್‌: ಫ್ರಾನ್ಸ್‌ನಲ್ಲಿ ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಕುಳಿತ ಎಲ್ಲ ನಾಗರಿಕರು ಸೀಟ್‌ಬೇಲ್ಟ್‌ ಧರಿಸಲೇಬೇಕು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿ ಸೀಟ್‌ಬೆಲ್ಟ್‌ ಧರಿಸದೇ ಇದ್ದಲ್ಲಿ ಕಾರಿನ ಮಾಲಿಕನೇ ಇದಕ್ಕೆ ಹೊಣೆಯಾಗಲಿದ್ದು, ಆತನೇ 12,000 ರು.ವರೆಗೂ ದಂಡವನ್ನು ಪಾವತಿಸಬೇಕಾಗುತ್ತದೆ.

ಸ್ಪೇನ್‌: ಕಾರ್‌ ಪಾರ್ಕ್ ಮಾಡುವಾಗ ಹಾಗೂ ಅಂಗವಿಕಲರಿಗೆ ಹೊರತುಪಡಿಸಿ ಕಾರಿನಲ್ಲಿರುವ ಎಲ್ಲ ಪ್ರಯಾಣಿಕರಿಗೂ ಸೀಟ್‌ಬೆಲ್ಟ್‌ ಕಡ್ಡಾಯವಾಗಿರುತ್ತದೆ. ಇದರೊಂದಿಗೆ ವಾಹಮ ಚಲಾಯಿಸುವಾಗ ಮೊಬೈಲ್‌ ಫೋನುಗಳನ್ನು (Mobile phone)ಬಳಸುವುದನ್ನು ಇಲ್ಲಿ ನಿರ್ಬಂಧಿಸಲಾಗಿದೆ. ನಿಯಮ ಉಲ್ಲಂಘಿಸಿದವರೆಗೆ ಇಲ್ಲಿ 2 ಲಕ್ಷದವರೆಗೂ ದಂಡ ವಿಧಿಸಬಹುದಾಗಿದೆ.

ಭಾರತದ ಶೇ.90ರಷ್ಟು ಕಾರುಗಳಲ್ಲಿರೋಲ್ಲAir Bags: ಐಷಾರಾಮಿ ಕಾರುಗಳಿಗೆ ಮಾತ್ರ ಸೀಮಿತ

ಭಾರತದಲ್ಲಿ ಸೀಟ್‌ಬೆಲ್ಟ್‌ ನಿಯಮ

ಭಾರತದಲ್ಲಿ ಕಾರಿನ ಮುಂಭಾಗದಲ್ಲಿ ಮಾತ್ರವಲ್ಲ, ಹಿಂಭಾಗದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೂ ಸೀಟ್‌ ಬೆಲ್ಟ್‌ ಧರಿಸುವುದು ಕಡ್ಡಾಯವಾಗಿದೆ. ಕೇಂದ್ರದ ಮೋಟಾರು ವಾಹನಗಳ ಕಾಯ್ದೆ, ನಿಯಮ 138, ಷರತ್ತು 3ರ ಅನ್ವಯ, ‘ವಾಹನವು ಪ್ರಯಾಣಿಸುತ್ತಿರುವ ವೇಳೆಯಲ್ಲಿ ಕಾರಿನ ಚಾಲಕ ಮಾತ್ರವಲ್ಲ, ಹಿಂಭಾಗದಲ್ಲಿ ಕುಳಿತ ಪ್ರಯಾಣಿಕರು ಕೂಡಾ ಸೀಟ್‌ಬೆಲ್ಟ್‌ ಧರಿಸುವುದು ಕಡ್ಡಾಯವಾಗಿದೆ’. ಸೀಟ್‌ಬೆಲ್ಟ್‌ ಧರಿಸದೇ ವಾಹನ ಚಲಾಯಿಸುತ್ತಿದ್ದವರಿಗೆ 1000 ರು.ವರೆಗೆ ದಂಡವನ್ನು ವಿಧಿಸಬಹುದಾಗಿದೆ. ಇದಲ್ಲದೇ ಟ್ರಾಫಿಕ್‌ ಪೊಲೀಸರು (Traffic Police) ವಾಹನವನ್ನು ಅಥವಾ ಡ್ರೈವಿಂಗ್‌ ಲೈಸನ್ಸ್‌ ಅನ್ನು ಜಪ್ತಿ ಮಾಡಿಕೊಳ್ಳಬಹುದಾಗಿದೆ. ರಾಜ್ಯದಿಂದ ರಾಜ್ಯಕ್ಕೆ ದಂಡ ವಿಧಿಸುವ ಪ್ರಮಾಣವು ಬದಲಾಗುತ್ತದೆ.

 
ಶೇ.70ರಷ್ಟು ಹಿಂಬದಿ ಸವಾರರು ಸೀಟ್‌ಬೆಲ್ಟ್‌ ಧರಿಸಲ್ಲ

ದೇಶದಲ್ಲಿ ಕಾನೂನಿದ್ದರೂ ಸಾಮಾನ್ಯವಾಗಿ ಕಾರಿನ ಹಿಂಭಾಗದಲ್ಲಿ ಕುಳಿತ ಸವಾರರು ಸೀಟ್‌ಬೆಲ್ಟ್‌ ಧರಿಸುವುದಿಲ್ಲ. ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಕಾರಿನ ಹಿಂಭಾಗದಲ್ಲಿ ಕುಳಿತ 10 ಜನರಲ್ಲಿ 7 ಜನರು ಎಂದಿಗೂ ಸೀಟ್‌ಬೆಲ್ಟ್‌ ಬಳಕೆ ಮಾಡುವುದಿಲ್ಲ. 10,000 ಜನರು ಪಾಲ್ಗೊಂಡ ಸಮೀಕ್ಷೆಯಲ್ಲಿ ಶೇ.70ರಷ್ಟು ಜನರು ತಾವು ಹಿಂಭಾಗದಲ್ಲಿ ಕುಳಿತಾಗ ಸೀಟ್‌ಬೆಲ್ಟ್‌ ಧರಿಸುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಕೇವಲ ಶೇ.26ರಷ್ಟುಜನರು ಸೀಟ್‌ಬೆಲ್ಟ್‌ ಧರಿಸುವುದಾಗಿ ಹೇಳಿದ್ದಾರೆ.

Seat Belt ಹಾಕ್ಕೊಂಡು ಪ್ರಾಣ ಉಳಿಸ್ಕಳಿ..! ಬೆಲ್ಟ್‌ ಹಾಕ್ಕೊಂಡ್ರಷ್ಟೇ ಏರ್‌ಬ್ಯಾಗ್‌ ಓಪನ್‌
ಸಾವು ನೋವು ತಡೆಯುವಲ್ಲಿ ಸೀಟ್‌ಬೆಲ್ಟ್‌ ನಂ.1

ವಿಶ್ವ ಆರೋಗ್ಯ ಸಂಸ್ಥೆಯು ಜೂನ್‌ನಲ್ಲಿ ಬಿಡುಗಡೆಗೊಳಿಸಿದ ವರದಿಯ ಪ್ರಕಾರ ಕಾರಿನ ಹಿಂಭಾಗದಲ್ಲಿ ಕುಳಿತವರು ಸೀಟ್‌ಬೆಲ್ಟ್‌ ಧರಿಸುವುದರಿಂದ ಶೇ. 25ರಷ್ಟುಸಾವು ಹಾಗೂ ಗಂಭೀರ ಗಾಯಗಳಾಗುವ ಸಾಧ್ಯತೆ ತಗ್ಗುತ್ತದೆ. ಅದೇ ಕಾರಿನ ಚಾಲಕರು (drivers) ಹಾಗೂ ಮುಂಭಾಗದಲ್ಲಿರುವವರು ಸೀಟ್‌ಬೆಲ್ಟ್‌ ಧರಿಸುವುದರಿಂದ ಸಾವಿನ ಸಾಧ್ಯತೆ ಶೇ. 45- 50ರಷ್ಟುತಗ್ಗುತ್ತದೆ ಎಂದು ಹೇಳಿದೆ.


ಮಿಸ್ತ್ರಿ ಬಲಿಪಡೆದ ಕಾರಿನದ್ದು ಡೇಂಜರ್‌ ಇತಿಹಾಸ

ಸೈರಸ್‌ ಮಿಸ್ತ್ರಿ ಅವರನ್ನು ಬಲಿ ಪಡೆದ ಮರ್ಸಿಡಿಸ್‌ ಬೆಂಝ್‌ (Mercedes Benz)ಕಾರು, ಈ ಹಿಂದೆಯೂ ಹಲವು ಬಾರಿ ಸಿಗ್ನಲ್‌ ಜಂಪ್‌ ಹಾಗೂ ಅತೀ ವೇಗದ ಸಂಚಾರ ನಿಯಮ ಉಲ್ಲಂಘನೆಯ ಇತಿಹಾಸ ಹೊಂದಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಆದರೆ ನಿಯಮ ಉಲ್ಲಂಘನೆ ವೇಳೆ ಕಾರು ಚಲಾಯಿಸಿದ ವ್ಯಕ್ತಿ ಮಾಹಿತಿ ತಿಳಿದು ಬಂದಿಲ್ಲ ಎನ್ನಲಾಗಿದೆ. ಜೊತೆಗೆ ಸೈರಸ್‌ ಪ್ರಯಾಣಿಸುತ್ತಿದ್ದ ಕಾರು ಇನ್ನೊಂದು ವಾಹನವನ್ನು ಓವರ್‌ಟೇಕ್‌ ಮಾಡುವ ವೇಳೆ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು


ಸೈರಸ್‌ ಮಿಸ್ತ್ರಿ ಅಂತ್ಯಸಂಸ್ಕಾರ

ರಸ್ತೆ ಅಪಘಾತದಲ್ಲಿ ನಿಧನರಾದ ಟಾಟಾ ಗ್ರೂಫ್ಸ್‌ನ ಮಾಜಿ ಮುಖ್ಯಸ್ಥ ಸೈರಸ್‌ ಮಿಸ್ತ್ರಿ (54) ಅವರ ಅಂತ್ಯ ಸಂಸ್ಕಾರ ಮಂಗಳವಾರ ಮುಂಬೈನ ವರ್ಲಿ ಶವಾಗಾರದಲ್ಲಿ ನಡೆಯಿತು. ಅಂತ್ಯ ಸಂಸ್ಕಾರದಲ್ಲಿ ರತನ್‌ ಟಾಟಾ ಅವರ ಮಲತಾಯಿ ಸಿಮೊನ್‌ ಟಾಟಾ, ಉದ್ಯಮಿಗಳಾದ ಅನಿಲ್‌ ಅಂಬಾನಿ, ಅಜಿತ್‌ ಗುಲ್ಬಾಚಂದ್‌, ದೀಪಕ್‌ ಪಾರೇಖ್‌, ವಿಶಾಲ್‌ ಕಂಪನಿ ಸೇರಿದಂತೆ ಹಲವು ಉದ್ಯಮಿಗಳು, ರಾಜಕೀಯ ನಾಯಕರು ಭಾಗಿಯಾಗಿದ್ದರು. ಆದರೆ ಟಾಟಾ ಸಮೂಹದ ಪ್ರಮಖರಾರ‍ಯರೂ ಭಾಗಿಯಾಗಿರಲಿಲ್ಲ.


ಹಿಂಬದಿ ಸವಾರರಿಗೂ ಇನ್ನು ಸೀಟ್‌ಬೆಲ್ಟ್‌ ಅಲರಾಂ

ಸೈರಸ್‌ ಮಿಸ್ತ್ರಿ ಸೀಟ್‌ಬೆಲ್ಟ್‌ ಧರಿಸದ ಕಾರಣ ಕಾರು ಅಪಘಾತದಲ್ಲಿ ನಿಧನರಾದ ಬೆನ್ನಲ್ಲೇ ವಾಹನ ತಯಾರಕರು ಹಿಂದಿನ ಸೀಟುಗಳಲ್ಲೂ ಸೀಟ್‌ಬೆಲ್ಟ್‌ ಅಲರಾಂ ವ್ಯವಸ್ಥೆಯನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಸ್ತುತ ಕಾರಿನ ಮುಂಭಾಗದಲ್ಲಿರುವ ಸವಾರರಿಗೆ ಮಾತ್ರ ಸೀಟ್‌ಬೆಲ್ಟ್‌ ರಿಮೈಂಡರ್‌ ಒದಗಿಸುವುದು ಕಡ್ಡಾಯವಾಗಿದೆ. ಮಂಗಳವಾರ ಕಾಯಕ್ರಮವೊಂದರಲ್ಲಿ ಮಾತನಾಡಿದ ಮಾತನಾಡಿದ ಕೇಂದ್ರ ಸಾರಿಗೆ ಹಾಗೂ ಹೆದ್ದಾರೆ ಸಚಿವ ನಿತಿನ್‌ ಗಡ್ಕರಿ ‘ವಾಹನ ತಯಾರಕ ಕಂಪನಿಗಳು ಹಿಂಭಾಗದ ಸವಾರರಿಗೂ ಸೀಟ್‌ಬೆಲ್ಟ್‌ ಬೀಪ್‌ ವ್ಯವಸ್ಥೆ ಅಳವಡಿಸುವುದನ್ನು ಕಡ್ಡಾಯಗೊಳಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

click me!