ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಪ್ರಾಣಿ, ಪಕ್ಷಿಯ ಬಗ್ಗೆಯೂ ವಿವರವಿದೆ. ಇದ್ರಲ್ಲಿ ಗುಬ್ಬಚ್ಚಿ ಕೂಡ ಒಂದು. ಗುಬ್ಬಚ್ಚಿ ನೋಡಿದ್ರೆ ನಮಗೆಷ್ಟು ಲಾಭ – ನಷ್ಟವಿದೆ ಎಂಬ ವಿವರ ಇಲ್ಲಿದೆ.
ಮನೆಯೊಳಗೊಂದು ಪುಟ್ಟ ಗೂಡು ಮಾಡಿ, ಚಿಂವ್ ಚಿಂವ್ ಅಂತ ಕೂಗುತ್ತಿದ್ದ ಗುಬ್ಬಚ್ಚಿ (sparrow) ಈಗ ಕಣ್ಮರೆಯಾಗಿದೆ. ಅಲ್ಲೊಂದು, ಇಲ್ಲೊಂದು ನೋಡಲು ಸಿಗೋದೇ ಅಪರೂಪ. ಈ ಗುಬ್ಬಚ್ಚಿ ಜ್ಯೋತಿಷ್ಯ ಶಾಸ್ತ್ರ (Astrology)ದಲ್ಲಿ ಪ್ರಾಮುಖ್ಯತೆಯನ್ನು ಹೊಂದಿದೆ. ವೇದಗಳು, ನಕ್ಷತ್ರಪುಂಜಗಳು ಮತ್ತು ಗ್ರಹಗಳೊಂದಿಗೆ ಸಂಬಂಧ ಹೊಂದಿದೆ. ಜ್ಯೋತಿಷ್ಯದಲ್ಲಿ ಪ್ರತಿಯೊಂದು ಪಕ್ಷಿಗೂ ಮಹತ್ವದ ಸ್ಥಾನವಿದೆ. ಅವು ನಮ್ಮ ಜೀವನದ ಜೊತೆ ನಂಟನ್ನು ಹೊಂದಿವೆ. ಭವಿಷ್ಯದ ಬಗ್ಗೆ ಸೂಕ್ಷ್ಮವಾಗಿ ನಮಗೆ ಸಂದೇಶವನ್ನು ನೀಡುತ್ತವೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಗುಬ್ಬಚ್ಚಿ ಕೂಡ ಅನೇಕ ಸಂಕೇತಗಳನ್ನು ನಮಗೆ ನೀಡುತ್ತದೆ. ಗುಬ್ಬಚ್ಚಿ ಅದೃಷ್ಟ ಮತ್ತು ಸಾವಿನ ಬಗ್ಗೆ ಸೂಚನೆಯನ್ನು ನೀಡುತ್ತದೆ. ಅಚಾನಾಕ್ ನಮ್ಮ ಕಣ್ಣ ಮುಂದೆ ಕಾಣಿಸಿಕೊಳ್ಳುವ ಗುಬ್ಬಚ್ಚಿ ಯಾವ ಸಂದೇಶ ನೀಡುತ್ತದೆ, ಯಾವ ಸಮಯದಲ್ಲಿ ಗುಬ್ಬಚ್ಚಿ ಕಾಣಿಸಿಕೊಂಡ್ರೆ ಒಳ್ಳೆಯದು ಎನ್ನುವ ಮಾಹಿತಿ ಇಲ್ಲಿದೆ.
ಗ್ರೀಕ್ ಪುರಾಣ (Greek Mythology )ದಲ್ಲಿ, ಗುಬ್ಬಚ್ಚಿಯು ಪ್ರೀತಿಯ ದೇವತೆಯಾದ ಅಫ್ರೋಡೈಟ್ ದೇವತೆಯೊಂದಿಗೆ ಸಂಬಂಧ ಹೊಂದಿದೆ. ಇಲ್ಲಿ ಗುಬ್ಬಚ್ಚಿಯನ್ನು ಕುಟುಂಬದ ಪ್ರೀತಿ ಮತ್ತು ಭಕ್ತಿಯ ಸಂಕೇತವಾಗಿ ಕಾಣುತ್ತಾರೆ. ಬೈಬಲ್ ನಲ್ಲಿಯೂ ಗುಬ್ಬಚ್ಚಿಯನ್ನು ದೇವರ ಸಂಕೇತವೆಂದು ಪರಿಗಣಿಸಲಾಗಿದೆ. ಗುಬ್ಬಚ್ಚಿ ನಿಮ್ಮ ಮನೆಯಲ್ಲಿ ಅಥವಾ ಸಮೀಪದಲ್ಲೊ ವಾಸವಾಗಿದ್ದು, ಪ್ರತಿ ದಿನ ನಿಮ್ಮ ಕಣ್ಣಿಗೆ ಕಾಣ್ತಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಅತಿ ಅಪರೂಪಕ್ಕೆ ಗುಬ್ಬಚ್ಚಿ ನಿಮ್ಮ ಕಣ್ಣಿಗೆ ಬಿದ್ದರೆ ಮಾತ್ರ ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ ಎಂದರ್ಥ.
undefined
120 ದಿನಗಳ ಯೋಗ ನಿದ್ರೆಯಿಂದ ಏಳಲಿರುವ ವಿಷ್ಣು, ಈ ರಾಶಿಗೆ ರಾಜಯೋಗ
ಆರ್ಥಿಕ ಸ್ಥಿತಿ ಸುಧಾರಣೆ : ಗುಬ್ಬಚ್ಚಿ ನಿಮ್ಮ ಬಳಿ ಬರೋದನ್ನು ನೀವು ನೋಡಿದ್ರೆ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದರ್ಥ. ಮುಂದಿನ ದಿನಗಳಲ್ಲಿ ಆರ್ಥಿಕ ಸಮೃದ್ಧಿಯಾಗಲಿದ್ದು, ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ನಿಮ್ಮ ಜೀವನಕ್ಕೆ ಸಂಪತ್ತು ಹರಿದು ಬರಲಿದೆ ಎಂಬುದರ ಒಂದು ಸಂಕೇತ ಇದು.
ಕಷ್ಟದ ಸೂಚನೆ : ಗುಬ್ಬಚ್ಚಿ ನಿಮ್ಮ ಬಳಿ ಹೇಗೆ ಬರುತ್ತೆ ಎಂಬುದು ಇಲ್ಲಿ ಮಹತ್ವವನ್ನು ಪಡೆಯುತ್ತದೆ. ಗುಬ್ಬಚ್ಚಿ ಪ್ರಕ್ಷುಬ್ಧಗೊಂಡಿದ್ದರೆ ಇಲ್ಲವೆ ಅಸಮಾಧಾನದಲ್ಲಿದ್ದರೆ, ನೋವಿನಲ್ಲಿದ್ದರೆ ಮುಂದಿನ ದಿನಗಳಲ್ಲಿ ನೀವು ಸಂಕಷ್ಟ ಎದುರಿಸಲಿದ್ದೀರಿ ಎಂದರ್ಥ. ಭವಿಷ್ಯದಲ್ಲಿ ಸಾಕಷ್ಟು ಕಷ್ಟಗಳು ನಿಮ್ಮ ಬೆನ್ನು ಹತ್ತಲಿದೆ ಎಂಬ ಸೂಚನೆ.
ದಾಂಪತ್ಯ (Marriage) ಜೀವನದಲ್ಲಿ ಏರುಪೇರು : ಗುಬ್ಬಚ್ಚಿಯನ್ನು ನೀವು ಪದೇ ಪದೇ ನೋಡ್ತಿದ್ದರೆ, ಅದ್ರಲ್ಲೂ ಬೆಸ ಸಂಖ್ಯೆಯ ಗುಬ್ಬಚ್ಚಿಗಳು ನಿಮ್ಮ ಕಣ್ಣಿಗೆ ಬೀಳ್ತಿದ್ದರೆ ನಿಮ್ಮ ವೈವಾಹಿಕ ಜೀವನ ಸಂತೋಷಕರವಾಗಿಲ್ಲ ಎಂಬ ಸಂಕೇತವಾಗಿದೆ. ಆದಷ್ಟು ಬೇಗ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ.
ಅಪೂರ್ಣ ಕೆಲಸ : ಸಾಮಾನ್ಯವಾಗಿ ಗುಬ್ಬಚ್ಚಿ ಬೆಳಿಗ್ಗೆ ನಮ್ಮ ಕಣ್ಣಿಗೆ ಕಾಣಿಸುತ್ತದೆ. ಅದೇ ಮಧ್ಯಾಹ್ನ ಅಥವಾ ರಾತ್ರಿ ಗುಬ್ಬಚ್ಚಿ ಕಾಣಿಸಿಕೊಂಡ್ರೆ ಅದ್ರಲ್ಲೂ ಬೆಸ ಸಂಖ್ಯೆಯಲ್ಲಿ ಕಾಣಿಸಿಕೊಂಡ್ರೆ ನಿಮ್ಮ ಕೆಲಸ ಅಪೂರ್ಣವಾಗುತ್ತದೆ ಎಂದರ್ಥ. ತಪ್ಪು ಸಮಯದಲ್ಲಿ ಗುಬ್ಬಚ್ಚಿ ಕಾಣಿಸಿಕೊಳ್ಳೋದು ಒಳ್ಳೆಯದಲ್ಲ.
ಶನಿಯ ನೇರ ಸಂಚಾರದಿಂದ ಈ 4 ರಾಶಿಗೆ ಕಷ್ಟ, ಆರೋಗ್ಯ ಉದ್ಯೋಗದ ಮೇಲೆ ಕೆಟ್ಟ ದೃಷ್ಟಿ
ಕೊಕ್ಕು ತೆರೆದಿರುವ ಗುಬ್ಬಚ್ಚಿ : ಕೊಕ್ಕು ತೆರೆದಿರುವ ಗುಬ್ಬಚ್ಚಿ ಕಾಣಿಸಿಕೊಂಡ್ರೆ ನಿಮ್ಮ ಹದಗೆಟ್ಟಿರುವ ಕೆಲಸಕ್ಕೆ ಪರಿಹಾರ ಸಿಗುತ್ತೆ ಎಂದರ್ಥ. ಯಾರೊಬ್ಬರಿಂದ ಅಥವಾ ಅನಿರೀಕ್ಷಿತ ಮೂಲದಿಂದ ನೀವು ಬೆಂಬಲವನ್ನು ಸ್ವೀಕರಿಸುತ್ತೀರಿ ಎಂದರ್ಥ. ಕೆಲವು ಪ್ರಮುಖ ಕೆಲಸಗಳಲ್ಲಿ ಸಹಾಯವನ್ನು ಪಡೆಯುತ್ತೀರಿ ಎಂಬ ಸೂಚನೆ ನೀಡುತ್ತದೆ.
ಆರೋಗ್ಯದ ಚಿಹ್ನೆಗಳು : ಗುಬ್ಬಚ್ಚಿಯು ಪದೇ ಪದೇ ಕಾಣಿಸಿಕೊಂಡರೆ ಅಥವಾ ಯಾವುದೇ ಕಾರಣವಿಲ್ಲದೆ ನಿಮ್ಮ ಬಳಿ ಬಂದರೆ, ಅದು ನಿಮ್ಮ ಆರೋಗ್ಯದ ಸಂಕೇತವಾಗಿರಬಹುದು. ನಿಮ್ಮ ಆರೋಗ್ಯದ ಬಗ್ಗೆ ನೀವು ಗಮನ ಹರಿಸಬೇಕು ಮತ್ತು ನಿಯಮಿತ ತಪಾಸಣೆ ಮಾಡಿಸಬೇಕು ಎಂದರ್ಥ.