ಮಹಿಳಾ ದಿನ ವಿಶೇಷ; ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಸಾಕೇ!
ಸಬಲೀಕರಣ ಅನ್ನೋದು ಸರ್ಕಾರದ ಕಾರ್ಯಕ್ರಮ ಅಲ್ಲ, ಅಂತರಂಗದ ಆಶಯ. ಕಾನೂನು ಮಾಡುವುದಕ್ಕಿಂತ ಹೆಚ್ಚಿನದನ್ನು ಕಾರ್ಯವಿಧಾನ ಮಾಡಬಲ್ಲದು. ತಮ್ಮ ನೆಲೆಯನ್ನು ತಾನೇ ಕಂಡುಕೊಂಡು ದಿಟ್ಟತನದಿಂದ ತಲೆಯೆತ್ತಿ ನಿಂತವರು ಮತ್ತೊಬ್ಬರಿಗೆ ಸ್ಪೂರ್ತಿಯಾಗಬಲ್ಲರು. ಅಂಥ ಸ್ಪೂರ್ತಿವಂತರನ್ನು ಈ ಮಹಿಳಾ ದಿನದಂದು ಮಾತಾಡಿಸಿ ನಿಮ್ಮ ಮುಂದಿಡುತ್ತಿದ್ದೇವೆ. ನಿಮ್ಮಂಥ ಸಹಸ್ರ ಸಹಸ್ರ ಮಂದಿಯ ಅಂತಃಸ್ಪೂರ್ತಿ ಮತ್ತು ಹುಮ್ಮಸ್ಸನ್ನು ಇವರು ಪ್ರತಿನಿಧಿಸುತ್ತಾರೆ.
ಅನನ್ಯಾ ಭಟ್.ಗಾಯಕಿ
ಸಿನಿಮಾ ನಿರ್ದೇಶನದಂಥಾ ಕ್ಷೇತ್ರದಿಂದ ಡ್ರೈವಿಂಗ್‌ನಂಥ ಕ್ಷೇತ್ರಗಳವರೆಗೆ ಎಲ್ಲ ಕಡೆ ಹೆಣ್ಣುಮಕ್ಕಳಿಗೂ ಗಂಡುಮಕ್ಕಳಿಗೂ ಸಮಾನ ಅವಕಾಶಗಳಿರಬೇಕು. ಮದ್ವೆ ಆದಮೇಲೆ ಹೆಣ್ಣುಮಕ್ಕಳೇ ಅಡುಗೆ ಮಾಡಬೇಕು ಅನ್ನುವಂಥಾ ಹೇರಿಕೆ ಇರಬಾರದು. ಗಂಡುಮಕ್ಕಳಿಗೂ ಬಾಲ್ಯದಿಂದಲೇ ಅವರ ತಾಯಂದಿರು ಎಲ್ಲ ಕೆಲಸ ಕಲಿಸಿರಬೇಕು.
ನಾನು ಹೆಣ್ಣುಮಕ್ಕಳಿಗೆ ಪೀರಿಯೆಡ್ಸ್ ಟೈಮ್‌ನಲ್ಲಿ ಪ್ಯಾಡ್ ಬಳಕೆ ಬಿಡಿಸಿ ಮೆನ್‌ಸ್ಟು್ರವಲ್ ಕಪ್ ಬಳಕೆಯ ಹೇಗೆ ಅನ್ನೋದನ್ನು ಹೇಳಿಕೊಡ್ತಿದ್ದೀನಿ. ವೀಡಿಯೋಗಳನ್ನೂ ಮಾಡುತ್ತಿದ್ದೀನಿ. ಬಹಳ ಹೆಣ್ಣುಮಕ್ಕಳು ಕಪ್ ಬಳಕೆ ಮಾಡೋದು ಕಲ್ತಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಬಂದರೆ ಪೀರಿಯೆಡ್ಸ್ ಡೀಲ್ ಮಾಡೋದು ಸಲ ಬಹಳ ಮುಖ್ಯ. ಇಲ್ಲವಾದರೆ ಅವಳು ಗಂಡಸರ ಸಮ ಸಮಕ್ಕೆ ಕೆಲಸ ಮಾಡೋದು ಕಷ್ಟಆಗಬಹುದು.
ಮಹಿಳಾ ದಿನ ವಿಶೇಷ:ಇಶಾ ಪಂಥ್ ಎಂಬ ಧೀರೆ!
ತೃಪ್ತಿ ರಾವ್, ಮಿಸೆಸ್ ಇಂಡಿಯಾ
ನನ್ನ ಪ್ರಕಾರ ಮಹಿಳೆಯರ ಸಬಲೀಕರಣ ಅಂದರೆ ಅವರಿಗೆ ಬೇಕಾದ ಸ್ವಾತಂತ್ರ್ಯ ಸಿಗೋದು. ಅವರ ಕೆಲಸಕ್ಕೆ ಉತ್ತೇಜನ ನೀಡೋದು. ನಮ್ಮಲ್ಲಿ ಹೆಚ್ಚಿನ ಮಹಿಳೆಯರಿಗೆ ಉದ್ಯೋಗದ ಸ್ಥಳದಲ್ಲಿ ಸಾಕಷ್ಟುಬೆಂಬಲ, ಪ್ರೋತ್ಸಾಹ ಸಿಗುತ್ತಿಲ್ಲ. ಮೇಲಾಧಿಕಾರಿಗಳೆಲ್ಲ ಪುರುಷರೇ ಇರುತ್ತಾರೆ. ಉನ್ನತ ಹುದ್ದೆಯಲ್ಲಿರುವ ಮಹಿಳೆಯರ ಸಂಖ್ಯೆ ಶೇ.10ಕ್ಕಿಂತ ಕಡಿಮೆ ಇದೆ. ಅದು ಶೇ.50ಕ್ಕೇರಬೇಕಿದೆ. ಅದುವೇ ಸಬಲೀಕರಣ.
ನಾನು ಮಂಡ್ಯದ ಸಮೀಪ ಒಂದಿಷ್ಟುಬಡ ಕಾರ್ಮಿಕ ಹಾಗೂ ರೈತ ಮಹಿಳೆಯರನ್ನು ಭೇಟಿಯಾಗಿದ್ದೇನೆ. ಅವರಲ್ಲಿ ಹೆಚ್ಚಿನವರು ಕುಡುಕ ಗಂಡನಿಂದ ಹೊಡೆತ ತಿಂದು ಕಷ್ಟದಲ್ಲಿ ಬದುಕುತ್ತಿರುವವರು. ಅವರಿಗೆ ಸ್ವಾವಲಂಬಿಗಳಾಗಿ ಬದುಕಲು ಉತ್ತೇಜನ ನೀಡಿದ್ದೇನೆ.
ಪಂಜರಿ,ಹೊಟೇಲ್ ಉದ್ಯಮ
ಸಿಂಪಲ್ಲಾಗಿ ಹೇಳಬೇಕಂದ್ರೆ ಹೆಣ್ಣುಗಳು ಅವರ ಗುರಿ ಸಾಧಿಸಲು ಸಹಕಾರ ಕೊಡೋದು. ಅವರನ್ನು ಬೆಂಬಲಿಸೋದು ಸ್ತ್ರೀ ಸಬಲೀಕರಣದ ಹಿನ್ನೆಲೆಯಲ್ಲಿ ಮಹತ್ವದ ಪಾತ್ರ ವಹಿಸುತ್ತೆ.
ಮನೆಯವರಿಂದಲೇ ಶೋಷಣೆಗೊಳಾಗಿ ಮನೆಯಿಂದಾಚೆ ಬಂದ ಮೂರ್ನಾಲ್ಕು ಹೆಣ್ಮಕ್ಕಳಿಗೆ ನಮ್ಮ ಮನೆಯಲ್ಲೇ ಜಾಗ ಕೊಟ್ಟಿದ್ದೇನೆ. ಉದ್ಯೋಗವನ್ನೂ ನೀಡಿ ಅವರು ಸ್ವಾವಲಂಬಿಗಳಾಗುವ ಹಾಗೆ ಮಾಡಿದ್ದೇನೆ. ನಾನು ಸಕ್ರಿಯಳಾಗಿರುವ ಹೊಟೇಲ್ ಉದ್ಯಮದಲ್ಲಿ 30 ರಿಂದ 35 ರಷ್ಟುಮಹಿಳೆಯರಿಗೆ ಉದ್ಯೋಗ ನೀಡಿದ್ದೇನೆ. ಮಾನಸಿಕ ಬೆಂಬಲ, ಹಣಕಾಸಿನ ಸಹಾಯ ನೀಡುತ್ತಲೇ ಇದ್ದಾನೆ.
ಪ್ರತೀಕ್ಷಾ ಕಾಶಿ,ನೃತ್ಯ ಪಟು
ಪ್ರತೀ ಹೆಣ್ಣು ನನಗೆ ವಿಶಿಷ್ಟವಾಗಿಯೇ ಕಾಣುತ್ತಾಳೆ. ಪ್ರತಿಯೊಬ್ಬ ಹೆಣ್ಣೊಳಗೂ ಮೊಳಕೆಯ ರೂಪದಲ್ಲಿ ಒಂದು ಪ್ರತಿಭೆ ಇರುತ್ತೆ. ಆ ಮೊಳಕೆಯನ್ನು ಹೆಮ್ಮರವಾಗಿಸಲು ಅವಳ ಕುಟುಂಬ, ಸಮಾಜ ಅವಕಾಶ ನೀಡಬೇಕು.
ನಾನು ನೃತ್ಯ ವಿದ್ಯಾರ್ಥಿನಿ, ಜೊತೆಗೆ ಅಮ್ಮ ನಡೆಸುವ ಶ್ಯಾಂಭವಿ ಡ್ಯಾನ್ಸ್ ಅಕಾಡೆಮಿಯಲ್ಲಿ ಮುಖ್ಯ ಶಿಕ್ಷಕಿಯಾಗಿ ನೃತ್ಯ ಕಲಿಸುತ್ತೇನೆ. ಇಲ್ಲಿಗೊಬ್ಬ ಚಿಕ್ಕ ಹುಡುಗಿ ಬರುತ್ತಾಳೆ. ಬಹಳ ಚೆನ್ನಾಗಿ ಡ್ಯಾನ್ಸ್ ಮಾಡ್ತಾಳೆ. ಆದರೆ ಅವಳ ಹೆತ್ತವರಿಗೆ ನೃತ್ಯದ ಮಹತ್ವ ಗೊತ್ತಿಲ್ಲ. ಡ್ಯಾನ್ಸ್ ಕ್ಲಾಸ್‌ಗೆ ಕಳಿಸೋದನ್ನು ನಿಲ್ಲಿಸಿದರು. ನಾನು ಅವರನ್ನು ಕರೆದು ಅವಳ ಪ್ರತಿಭೆ, ನೃತ್ಯದ ಮಹತ್ವ ಮನವರಿಕೆ ಮಾಡಿಕೊಟ್ಟಮೇಲೆ ಆ ಮಗುವನ್ನು ಪ್ರೋತ್ಸಾಹಿಸಿದರು. ಇಂಥ ಕೆಲಸಗಳನ್ನು ನಮ್ಮ ಕ್ಷೇತ್ರದಲ್ಲಿ ಮಾಡುತ್ತ ಇರುತ್ತೇವೆ.
ಶಿಲ್ಪಾ ಶೆಟ್ಟಿ ಹೆಣ್ಣು ಮಗುವಿಗಾಗಿ ಹಂಬಲಿಸಿದ್ದು ಇದಕ್ಕಾ?
ಮೇಘನಾ ಸುಧೀಂದ್ರ,ಎಐ ಇಂಜಿನಿಯರ್
ಮಹಿಳಾ ಸಬಲೀಕರಣವೆಂದರೆ ಹೆಣ್ಣುಮಕ್ಕಳು ಆರ್ಥಿಕವಾಗಿ ಸಾಮಾಜಿಕವಾಗಿ ಅವರ ವಿಚಾರಗಳನ್ನ ಮತು ಅವರ ಜೀವನವನ್ನ ಅಡೆತಡೆಗಳಿಲ್ಲದೇ ನಡೆಸಿಕೊಂಡು ಹೋಗುವುದು. ಜೀವನವನ್ನ ತಮ್ಮ ಆಸೆ, ಇಷ್ಟದ ಹಾಗೆ ನಡೆಸಿಕೊಳ್ಳುವ ಹಕ್ಕು ಮತ್ತು ಅಧಿಕಾರ ಹೆಣ್ಣುಮಕ್ಕಳಿಗೆ ಬಂದಾಗಲೇ ಅವರು ಆರ್ಥಿಕವಾಗಿ ಸಬಲರಾಗೋದು.
ವಿಜ್ಞಾನ ಅಥವಾ ಸಂಶೋಧನೆ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಬಹಳ ಕಡಿಮೆ. ಅವರನ್ನ ಈ ಕ್ಷೇತ್ರಕ್ಕೆ ಎಳೆದುಕೊಂಡು ಬರಲು ಎಜ್ಟ್ಝಿs ಡಿhಟ ್ಚಟdಛಿ, Wಟಞಛ್ಞಿ ಜ್ಞಿ ಈaಠಿas್ಚಜಿಛ್ಞ್ಚಿಛಿ ಇವೆರಡೂ ಸಂಸ್ಥೆಯಲ್ಲಿ ಸ್ವಯಂ ಸೇವಕಿಯಾಗಿ ಬಾರ್ಸಿಲೋನಾ ಮತ್ತು ಭಾರತದಲ್ಲಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಪ್ರೌಢ ಶಾಲೆ ವಿದ್ಯಾರ್ಥಿನಿಯರನ್ನು ಆರಿಸಿ ಅವರಿಗೆ ಕೋಡಿಂಗ್ ಕಲಿಸಿ ವಿಜ್ಞಾನ ಕ್ಷೇತ್ರಕ್ಕೆ ದೂಡುವ ಕೆಲಸ ನನ್ನದು.
ಪೂಜಾ ಹರ್ಷ, ಮೈಸೂರು,ಮಾರ್ಶಲ… ಆಟ್ಸ್‌ರ್
ಈಗಿರುವ ಸಾಮಾಜಿಕ ಸನ್ನಿವೇಶದಲ್ಲಿ ಪ್ರತೀ ಹೆಣ್ಣೂ ಸ್ವತಂತ್ರವಾಗಿರೋದನ್ನು ಇಷ್ಟಪಡುತ್ತಾಳೆ. ಬರೀ ಆರ್ಥಿಕ ಸ್ವಾತಂತ್ರ್ಯ ಒಂದರಿಂದ ಎಲ್ಲವೂ ಸಿಕ್ಕಿಬಿಡಲ್ಲ. ಅವಳು ದೈಹಿಕವಾಗಿ, ಭಾವನಾತ್ಮಕವಾಗಿ ಹಾಗೂ ಆರ್ಥಿಕವಾಗಿ ಸಬಲಳಾದರೆ ಮಾತ್ರ ಅವಳಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಗಲು ಸಾಧ್ಯ. ಆತ್ಮವಿಶ್ವಾಸದಿಂದಿರಲೂ ಇದು ಅನಿವಾರ್ಯ.
2016ರಿಂದ 16 ಶಾಲೆಗಳಲ್ಲಿ ಕಿಕ್‌ಬಾಕ್ಸಿಂಗ್ ಕಲಿಸಿದ್ದೇನೆ. ನೂರಕ್ಕೂ ಹೆಚ್ಚು ಸೆಲ್‌್ಫ ಡಿಫೆನ್ಸ್ ಟ್ರೈನಿಂಗ್ ಉಚಿತವಾಗಿ ಕೊಟ್ಟಿದ್ದೀನಿ. ಪೊಲೀಸ್ ಡಿಪಾರ್ಟ್‌ಮೆಂಟ್, ಕಾರ್ಪೊರೇಟ್ ಕಂಪೆನಿಗಳಲ್ಲಿ ತರಬೇತಿ ನೀಡಿದ್ದೀನಿ. ಟಿವಿ ಚಾನೆಲ್‌ಗಳಲ್ಲಿ ಅರಿವು ಮೂಡಿಸೊ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೀನಿ.