ಪಾದರಾಯನಪುರ ಗಲಭೆ, ತಪ್ಪೊಪ್ಪಿಕೊಂಡ ಆರೋಪಿ ವಜೀರ್ ಖಾನ್!

ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಗಲಭೆ ಪೂರ್ವ ನಿಯೋಜಿತವೇ?| ಅನುಮಾನ ಹೆಚ್ಚಿಸಿದೆ ವೈರಲ್ ಆದ ದೃಶ್ಯಾವಳಿಗಳು| ನಾಲ್ನೂರಕ್ಕೂ ಅಧಿಕ ಮಂದಿಯಿಂದ ಕೊರೋನಾ ವಾರಿಯರ್ಸ್ ಮೇಲೆ ದಾಳಿ

First Published Apr 20, 2020, 3:06 PM IST | Last Updated Apr 20, 2020, 3:12 PM IST

ಬೆಂಗಳೂರಿನ ಪಾದರಾಯನುರ ವಾರ್ಡ್‌ನಲ್ಲಿ ಕೊರೋನಾ ವಾರಿಯರ್ಸ್‌ ಮೇಲೆ ನಡೆದ ದಾಳಿ ಸದ್ಯ ದೇಶದಾದ್ಯಂತ ಸದ್ದು ಮಾಡಿದೆ. ಈಗಾಗಲೇ ಪೊಲೀಸರು ಐವತ್ತಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಾಲಾಗಿದೆ. ಇನ್ನು ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸಬೇಕೆಂಬ ಕೂಗೂ ಕೇಳಿ ಬಂದಿದೆ.

ಪಾದರಾಯನಪುರ ಗಲಭೆ ಹಿಂದಿನ ಮಾಸ್ಟರ್ ಮೈಂಡ್?

ಹೀಗಿರುವಾಗ ಈ ಗಲಭೆ ಪೂರ್ವ ನಿಯೋಜಿತ ಕೃತ್ಯವೇ? ಎಂಬ ಅನುಮಾನವೂ ಮನೆ ಮಾಡಿದೆ. ಈ ಗಲಭೆಯಲ್ಲಿ ಮಕ್ಕಳು ಹಾಗೂ ಮಹಿಳೆಯರು ಭಾಗಿಯಾಗಿದ್ದರು. ಅಲ್ಲದೇ ನಾಲ್ಕು ತಂಡಗಳಲ್ಲಿ ಈ ದಾಳಿ ನಡೆದಿತ್ತು ಎನ್ನಲಾಗಿದೆ.

ಪಾದರಾಯನಪುರ ಗಲಭೆ ಪೂರ್ವ ನಿಯೋಜಿತವಾ?: ನಾಲ್ಕು ಗುಂಪು ರಹಸ್ಯ!

ಇನ್ನು ಈ ದಾಳಿಯಲ್ಲಿ ಸುಮಾರು ನಾಲ್ನೂರಕ್ಕೂ ಅಧಿಕ ಮಂದಿಇ ಇದ್ದರು ಎಂಬ ಅಂಶ ಮತ್ತಷ್ಟು ಆಘಾತಕಾರಿಯಾಗಿದೆ. ಒಒಂದು ವೇಳೆ ಈ ದಾಳಿ ಲಪೂರ್ವ ನಿಯೋಜಿತವಾಗಿದ್ದರೆ, ಇದರ ಹಿಂದಿನ ಮಾಸ್ಟರ್ ಮೈಂಡ್ ಯಾರು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.