Asianet Suvarna News Asianet Suvarna News

ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಆಕಾಂಕ್ಷಿಗಳಲ್ಲಿ ತಳಮಳ: ಕಮಲ ನಾಯಕರು ಕಾಂಗ್ರೆಸ್‌ನತ್ತ ಮುಖ ಮಾಡ್ತಾರಾ..?

ಬಿಜೆಪಿ ನಾಯಕರು ಕಾಂಗ್ರೆಸ್‌ನತ್ತ ಮುಖ ಮಾಡ್ತಾರಾ..?
ಬಿಜೆಪಿ ಮುಖಂಡ ಸೋಮಣ್ಣ ಕಾಂಗ್ರೆಸ್ ಕದ ತಟ್ತಾರಾ..?
ಮುದ್ದಹನುಮೇಗೌಡ ಕಾಂಗ್ರೆಸ್ ಅಭ್ಯರ್ಥಿ ಆಗ್ತಾರಾ..?

ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಕಾಂಗ್ರೆಸ್(Congress) ಜೋರಾಗಿದೆ. ಇತ್ತ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕನ ಆಯ್ಕೆ ಬಳಿಕ ಅಸಮಾಧ ಬುಗಿಲೆದ್ದಿದೆ. ಇದರ ನಡುವೆ ಮಾಜಿ ಸಚಿವ ವಿ.ಸೋಮಣ್ಣ(V. Somanna) ಕಾಂಗ್ರೆಸ್ ಸೇರ್ಪಡೆಯ ಗುಮಾನಿ ಜೋರಾಗಿದೆ. ಈಗ ತುಮಕೂರಿನಿಂದ(Tumakuru) ಲೋಕಸಭೆ ಕಣಕ್ಕಿಳಿಯಲು ಸಚ್ಚಾಗಿದ್ದಾರೆ. ಅದು ಬಿಜೆಪಿಯಿಂದಲ್ಲ ಕಾಂಗ್ರೆಸ್‌ನಿಂದ ಎನ್ನಲಾಗ್ತಿದೆ. ಇನ್ನೂ ಸೋಮಣ್ಣ ಜೊತೆಗೆ ಮತ್ತೊಬ್ಬ ಬಿಜೆಪಿ ನಾಯಕ ತುಮಕೂರಿನಿಂದಲೇ ಲೋಕಸಭೆಗೆ(loksabha) ಕಣಕ್ಕಿಳಿತಾರೆ ಅನ್ನೋ ಕೂಗು ಜೋರಾಗಿದೆ. ಹಾಗಾಗಿ ತುಮಕೂರು ಕಾಂಗ್ರೆಸ್ ಟಿಕೆಟ್‌ಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಬಿಜೆಪಿಯಲ್ಲಿ ಕೆಲವು ಹಿರಿಯರಲ್ಲಿ ಅಸಮಾಧಾನವಿದ್ದು, ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕನ ಆಯ್ಕೆ ಬಳಿಕ ಮುನಿಸು ಜೋರಾಗಿದೆ. ಜೆಡಿಎಸ್ ಜೊತೆ ಮೈತ್ರಿಯಿಂದಾಗಿಯೂ ನಾಯಕರಲ್ಲಿ ಗೊಂದಲ ಉಂಟಾಗಿದೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲೂ ಗೊಂದಲದ ವಾತಾವರಣವಿದ್ದು, ಮೂರೂ ಪಕ್ಷದಲ್ಲೂ ಆಕಾಂಕ್ಷಿಗಳ ದಂಡೇ ಇದೆ. ಇದರಿಂದ ಜೆಡಿಎಸ್ ಮೈತ್ರಿಯಿಂದಾಗಿ ಆಕಾಂಕ್ಷಿಗಳಲ್ಲಿ ತಳಮಳ ಶುರುವಾಗಿದೆ.

ಇದನ್ನೂ ವೀಕ್ಷಿಸಿ:  ಉಡುಪಿಯಲ್ಲಿ ಕ್ರಿಸ್‌ಮಸ್‌ ತಯಾರಿ ಶುರು: ವೈನ್‌, ರಮ್‌ ಮಿಶ್ರಣದಿಂದ ಲಕ್ಷಾಂತರ ಮೌಲ್ಯದ ಕೇಕ್‌ ಸಿದ್ಧ