Asianet Suvarna News Asianet Suvarna News

3 ಪಕ್ಷಗಳ ಸೇನಾಧ್ಯಕ್ಷರ ಲೆಕ್ಕಾಚಾರವೇ ರೋಚಕ!ಮಂಡ್ಯ ರಣರಂಗದಲ್ಲಿ ದಾಖಲೆಯ ಮತದಾನ..ಯಾರಿಗೆ ಲಾಭ..?

14 ಕ್ಷೇತ್ರಗಳಲ್ಲಿ ಮುಗಿದ ಮತಯುದ್ಧ..ಶುರು ಸೋಲು-ಗೆಲುವಿನ ಲೆಕ್ಕಾಚಾರ..!
ವೋಟಿಂಗ್ ಪರ್ಸಂಟೇಜ್ ಹೆಚ್ಚಾಗಿದ್ದು ಯಾರಿಗೆ ಪ್ಲಸ್.. ಯಾರಿಗೆ ಮೈನಸ್..?
ಮೈತ್ರಿ vs ಕಾಂಗ್ರೆಸ್..ಯಾರಿಗೆ ಸಿಗಲಿದೆ ಮತದಾನ ಪ್ರಮಾಣ ಹೆಚ್ಚಳದ ಲಾಭ..?
 

ಕರ್ನಾಟಕದ ಕುರುಕ್ಷೇತ್ರದಲ್ಲಿ ನಡೆದ ಮಹಾಭಾರತ ಯುದ್ಧದ ಮೊದಲ ಅಧ್ಯಾಯ ಮುಗಿದಿದೆ. ಅಂದ್ರೆ ಲೋಕಸಭಾ ಚುನಾವಣೆಯ(Lok Sabha elections 2024) ಫಸ್ಟ್ ರೌಂಡ್ ಮುಕ್ತಾಯವಾಗಿದ್ದು, 2ನೇ ಅಧ್ಯಾಯಕ್ಕೆ ಮೇ 7ರ ಮುಹೂರ್ತ. ಲೋಕಸಭಾ ಚುನಾವಣೆಯ ರಣರಂಗದಲ್ಲಿ ಒಂದನೇ ಪರ್ವ ಮುಗಿದಿದೆ. ರಾಜ್ಯದಲ್ಲಿ ಮೊದಲ ಹಂತದ ಮತದಾನ(Voting) ಶುಕ್ರವಾರ ನಡೆದಿದ್ದು, 14 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಗಳಲ್ಲಿ ಭದ್ರವಾಗಿದೆ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ತುಮಕೂರು, ಕೋಲಾರ, ಹಾಸನ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು. ಹೀಗೆ ಒಂದನೇ ಹಂತದಲ್ಲಿ ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ಮುಕ್ತಾಯವಾಗಿದೆ. ಇರೋ 14 ಸ್ಥಾನಗಳಲ್ಲಿ ಒಬ್ಬರು 10 ಸೀಟುಗಳು ನಮಗೆ ಫಿಕ್ಸ್ ಅಂದ್ರೆ, ಮತ್ತೊಬ್ರು ಹದಿನಾಲ್ಕರಲ್ಲೂ ನಮ್ಮದೇ ಜಯಭೇರಿ ಅಂತಿದ್ದಾರೆ. ಮಗದೊಬ್ರು 12ರಿಂದ 13 ಸ್ಥಾನ ಖಚಿತ ಅಂತಿದ್ದಾರೆ. ಇದ್ರಲ್ಲೇನೂ ವಿಶೇಷ ಇಲ್ಲ ಬಿಡಿ. ಯಾಕಂದ್ರೆ ಇದು ಪ್ರತಿ ಚುನಾವಣೆ(Election) ಮುಗಿದ ಮೇಲೆ ಕೇಳಿ ಬರೋ ಸಾಮಾನ್ಯ ಡೈಲಾಗ್. ವಿಷ್ಯ ಅದಲ್ಲ.. 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಜಾಸ್ತಿಯಾಗಿರೋದು ಯಾರಿಗೆ ಲಾಭ, ಯಾರಿಗೆ ನಷ್ಟ ಅನ್ನೋದೇ ಈಗ ಹಾಟ್ ಟಾಪಿಕ್.

ಇದನ್ನೂ ವೀಕ್ಷಿಸಿ:  HD Kumaraswamy: ಕಾನೂನು ಎಲ್ಲಾರಿಗೂ ಒಂದೇ ತಪ್ಪು ಮಾಡಿದ್ರೆ ಶಿಕ್ಷೆ ಆಗಲೇಬೇಕು : ಕುಮಾರಸ್ವಾಮಿ