ಮೂಲಬೆಲೆಗಿಂತ 10 ಪಟ್ಟು ಹೆಚ್ಚಿನ ಮೊತ್ತಕ್ಕೆ ಹರಾಜಾದ ಆಟಗಾರರಿವರು; ಕನ್ನಡಿಗನಿಗೆ ಮೊದಲ ಸ್ಥಾನ..!

ಮೂಲಬೆಲೆಗಿಂತ 10 ಪಟ್ಟು ಹೆಚ್ಚಿನ ಮೊತ್ತಕ್ಕೆ ಹರಾಜಾದ ಆಟಗಾರರಿವರು; ಕನ್ನಡಿಗನಿಗೆ ಮೊದಲ ಸ್ಥಾನ..!

Jan. 31, 2018, 3:58 p.m.

'ಮಿಲಿಯನ್ ಡಾಲರ್' ಟೂರ್ನಿ ಎಂದೇ ಕರೆಸಿಕೊಳ್ಳುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 11ನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಮುಗಿದಿದೆ. 8 ಪ್ರಾಂಚೈಸಿಗಳು ಬಹುತೇಕ 90% ಹಣವನ್ನು ನೀಡಿ ತಮಗಿಷ್ಟವಾದ ಆಟಗಾರರನ್ನು ಖರೀದಿಸಿದ್ದಾರೆ. ಅದರಲ್ಲೂ ಕೆಲ ಆಟಗಾರರು ತಮಗೆ ನಿಗದಿಪಡಿಸಲಾಗಿದ್ದ ಮೂಲಬೆಲೆಗಿಂತ 10, 20 ಹಾಗೂ 30 ಪಟ್ಟು ಬೆಲೆಗೆ ಹರಜಾಗಿದ್ದಾರೆ. ಈ ಪಟ್ಟಿಯಲ್ಲಿ ಮೂಲಬೆಲೆಗಿಂತ ಅತಿಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರ ಎಂಬ ಖ್ಯಾತಿ ಕನ್ನಡಿಗ ಕೆ. ಗೌತಮ್ ಪಾಲಾಗಿದೆ. ಮೂಲಬೆಲೆಗಿಂತ 10 ಪಟ್ಟು ಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರರ ಟಾಪ್ -10 ನಿಮ್ಮ ಮುಂದೆ...