ಮಾನಸಿಕ ಆರೋಗ್ಯ ವೃದ್ಧಿಸುತ್ತವೆ ನೀವು ಸಾಕಿದ ಪ್ರಾಣಿಗಳು

ಮಾನಸಿಕ ಆರೋಗ್ಯ ವೃದ್ಧಿಸುತ್ತವೆ ನೀವು ಸಾಕಿದ ಪ್ರಾಣಿಗಳು

Feb. 13, 2018, 3:42 p.m.

ನಾವು ಸಾಕಿದ ಪ್ರಾಣಿಗಳು ನಮಗೆಂದಿಗೂ ಆಪ್ತವೇ. ಅವುಗಳು ಎಷ್ಟೋ ಸಲ ನಮ್ಮ ಬೇಸರವನ್ನು ಸಂಪೂರ್ಣವಾಗಿ ನಿವಾರಿಸುತ್ತವೆ. ದಣಿದು ಹೋದಾಗ ಅವುಗಳು ಮುದ್ದು ಮತ್ತೆ ಹೊಸ ಹುರುಪು ತುಂಬುತ್ತದೆ. ಯಾವುದೇ ಸ್ವಾರ್ಥವಿಲ್ಲದ ಪ್ರೀತಿಯು ಮನುಷ್ಯನ ಆರೋಗ್ಯಕ್ಕೂ ಪೂರಕವೆಂದರೆ ನೀವು ನಂಬಲೇಬೇಕು. ಬಿಎಂಸಿ ಸೈಕಾಲಜಿ ಹೇಳುವ ಪ್ರಕಾರ ಮಾನಸಿಕ ಆರೋಗ್ಯವನ್ನು ಸಾಕು ಪ್ರಾಣಿಗಳು ಹೆಚ್ಚಿಸುತ್ತವೆಯಂತೆ. ಈ ಸಂಬಂಧ ಅನೇಕ ರೀತಿಯಾದ ಸಂಶೋಧನೆಗಳು ನಡೆದಿದ್ದು, ಈ ಎಲ್ಲಾ ಸಂಶೋಧನೆಗಳಲ್ಲಿ ಬೆಳಕಿಗೆ ಬಂದ ವಿಚಾರವೆಂದರೆ ಸಾಕು ಪ್ರಾಣಿಗಳಿಂದ ಮನುಷ್ಯನ ಮಾನಸಿಕ ನೆಮ್ಮದಿ ಹೆಚ್ಚಿ ಮಾನಸಿಕ ರೋಗಗಳು ದೂರಾಗುತ್ತವೆ ಎನ್ನುವುದು.