ಸ್ವತಃ ಕ್ವಾರೆಂಟೈನ್ ಆಗ್ತೀವಂದ್ರೂ ಕೇಳೋರೇ ಇಲ್ಲ: ಅಧಿಕಾರಿಗಳ 'ಮಹಾ' ನಿರ್ಲಕ್ಷ್ಯ
ಮಂಗಳೂರಿನಲ್ಲಿ ಮುಂಬೈನಿಂದ ಬಂದವರನ್ನು ಕ್ವಾರೆಂಟೈನ್ ,ಮಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದಿದೆ. ಮುಂಬೈನಿಂದ ಬೆಳಗ್ಗೆ 3.30ಕ್ಕೆ ಮಂಗಳೂರಿಗೆ ತಲುಪಿದ ಜನರು ಸ್ವತಃ ಕ್ವಾರೆಂಟೈನ್ ಆಗುತ್ತೇವೆ ಎಂದರೂ ಅಧಿಕಾರಿಗಳು ಈ ಸಂಬಂಧ ಆಸಕ್ತಿ ತೋರಿಸಿಲ್ಲ.
ಮಂಗಳೂರು(ಜೂ.04): ಮಂಗಳೂರಿನಲ್ಲಿ ಮುಂಬೈನಿಂದ ಬಂದವರನ್ನು ಕ್ವಾರೆಂಟೈನ್ ,ಮಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದಿದೆ. ಮುಂಬೈನಿಂದ ಬೆಳಗ್ಗೆ 3.30ಕ್ಕೆ ಮಂಗಳೂರಿಗೆ ತಲುಪಿದ ಜನರು ಸ್ವತಃ ಕ್ವಾರೆಂಟೈನ್ ಆಗುತ್ತೇವೆ ಎಂದರೂ ಅಧಿಕಾರಿಗಳು ಈ ಸಂಬಂಧ ಆಸಕ್ತಿ ತೋರಿಸಿಲ್ಲ.
ಸುಮಾರು 30 ಜನ ಕಕ್ಕಾಬಿಕ್ಕಿಯಾಗಿದ್ದಾರೆ. ಥರ್ಮಲ್ ಸ್ಕ್ರೀನಿಂಗ್ ಬಿಟ್ಟು ಮತ್ತೇನು ಮಾಡುವುದಕ್ಕೂ ಅಧಿಕಾರಿಗಳು ಆಸ್ತಿ ವಹಿಸಿಲ್ಲ. ರೈಲ್ವೇ ಸ್ಟೇಷನ್‌ನಿಂದ ಬಸ್, ಆಟೋ ಮೂಲಕ ಜನ ಸ್ಟೇಷನ್‌ಗೆ ಹೋಗಿರುವ ಘಟನೆ ನಡೆದಿದೆ.
'ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೆ'
ಈಗಾಗಲೇ ಮುಂಬೈ ಸೋಂಕು ಕರಾವಳಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿಸಿದ್ದು, ಇದರೊಂದಿಗೆ ಅಧಿಕಾರಿಗಳೂ ನಿರ್ಲಕ್ಷ್ಯ ತೋರಿಸಿರುವುದು ಅಪಾಯವನ್ನು ಆಹ್ವಾನಿಸಿದಂತಾಗಿದೆ.