Asianet Suvarna News Asianet Suvarna News

ಎಚ್ಚರ, ಇನ್ನು ನಿಯಮ ಉಲ್ಲಂಘಿಸಿದ್ರೆ ಕೊರೋನಾ 'ಸೋಂಕಿತ'ನೊಂದಿಗೆ ಬಂದ್ ಮಾಡ್ತಾರೆ!

ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್| ಸರ್ಕಾರ ಲಾಕ್‌ಡೌನ್ ಹೇರಿದ್ದರೂ ಕ್ಯಾರೇ ಎನ್ನದ ಜನರಿಂದ ಓಡಾಟ| ಬೇಜವಾಬ್ದಾರಿ ಮನಸ್ಥಿತಿಯ ಜನರಿಗೆ ಬುದ್ಧಿ ಕಲಿಸಲು ಪೊಲೀಸರ ಸೂಪರ್ ಪ್ಲಾನ್

ಕೊರೋನಾ ನಿಯಂತ್ರಿಸಲು ಲಾಕ್‌ಡೌನ್ ಹೇರಲಾಗಿದೆ. ಆದರೀಗ ಸರ್ಕಾರದ ಈ ಆದೇಶಕ್ಕೇ ಕ್ಯಾರೇ ಎನ್ನದ ಜನ ಬೇಕಾಬಿಟ್ಟಿಯಾಗಿ ರಸ್ತೆಯಲ್ಲಿ ಓಡಾಡ್ತಿದ್ದಾರೆ. ಇವರನ್ನು ತಡೆಯೋದೆ ಪೊಲೀಸರಿಗೆ ಬಹುದೊಡ್ಡ ಸವಾಲಾಗಿದೆ.

ಈಗಾಗಲೇ ಪೊಲೀಸರು ಬಸ್ಕಿ, ಹಣೆ ಮೇಲೆ ಸೀಲ್, ಲಾಠಿ ರುಚಿ ಹೀಗೆ ನಾನಾ ಪ್ರಯೋಗ ಮಾಡಿದರೂ ಜನರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಪೊಲೀಸರ ಯಾವ ಶಿಕ್ಷೆಗೂ ಜಗ್ಗದ ಕೊಬ್ಬಿದ ಕೆಲ ಮಂದಿ ರಸ್ತೆಯಲ್ಲಿ ಬೈಕ್ ಸವಾರಿ ಆರಂಭಿಸಿದ್ದಾರೆ.

ಹೀಗಿರುವಾಗ ಇಂತಹವರ ದರ್ಪ ಇಳಿಸಲು ಪೊಲೀಸರು ಸೂಪರ್‌ ಹಿಟ್ ಐಡಿಯಾ ಕಂಡುಕೊಂಡಿದ್ದಾರೆ. ರಸ್ತೆಗಿಳಿಯುವ ಬೈಕ್ ಸವಾರರನ್ನು 'ಕೊರೋನಾ ಸೋಂಕಿತ' ಇರುವ ಆಂಬುಲೆನ್ಸ್‌ನೊಳಕಗೆ ಹಾಕುತ್ತಿದ್ದಾರೆ. ಎಷ್ಟಂದ್ರೂ ಕೊರೋನಾ ಭಯವಿಲ್ಲದೇ ರಸ್ತೆಗಿಳಿದವರಲ್ವೇ? 

ಆದರೆ ಪೊಲೀಸರ ಈ ಐಡಿಯಾದ ಹಿಂದೆಯೂ ಒಂದು ಟ್ವಿಸ್ಟ್ ಇದೆ. ಏನದು? ನೀವೇ ನೋಡಿ

Video Top Stories