Asianet Suvarna News Asianet Suvarna News

ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ದೇಶದಲ್ಲಿ ಕೊರೋನಾ ಸೋಂಕು ಏಕಾಏಕಿ ಏರಿಕೆ!

ದೇಶದಲ್ಲಿ ಲಾಕ್‌ಡೌನ್ ಸಡಿಲಿಸಿದ ಬೆನ್ನಲ್ಲೇ, ಕೊರೋನಾ ಸೋಂಕಿತರ ಸಂಖ್ಯೆ ಏಕಾಏಕಿ ಏರಿಕೆಯಾಗಿದೆ. ಈ ನಿಟ್ಟಿನಲ್ಲಿ ಈ ಇಡೀ ವಾರ ಭಾರತದ ಪಾಲಿಗೆ ನಿರ್ಣಾಯಕ ವಾರವಾಗಲಿದ್ದು, ಗರಿಷ್ಟ ಅಪಾಯ ಎದುರಾಗುವ ಸಾಧ್ಯತೆಗಳಿವೆ.

ನವದೆಹಲಿ(ಮೇ.05): ದೇಶದಲ್ಲಿ ಲಾಕ್‌ಡೌನ್ ಸಡಿಲಿಸಿದ ಬೆನ್ನಲ್ಲೇ, ಕೊರೋನಾ ಸೋಂಕಿತರ ಸಂಖ್ಯೆ ಏಕಾಏಕಿ ಏರಿಕೆಯಾಗಿದೆ. ಈ ನಿಟ್ಟಿನಲ್ಲಿ ಈ ಇಡೀ ವಾರ ಭಾರತದ ಪಾಲಿಗೆ ನಿರ್ಣಾಯಕ ವಾರವಾಗಲಿದ್ದು, ಗರಿಷ್ಟ ಅಪಾಯ ಎದುರಾಗುವ ಸಾಧ್ಯತೆಗಳಿವೆ. ಇತ್ತ ರಾಜ್ಯದ ನೆತ್ತಿ ಮೇಲೂ ಕೊರೋನಾ ಆತಂಕದ ತೂಗುಗತ್ತಿ ತೂಗಲಾರಂಭಿಸಿದೆ. ಹೀಗಾಗಿ ಈ ವಾರದಲ್ಲಿ ಕೊಂಚ ಯಾಮಾರಿದರೂ ಭಾರತಕ್ಕೆ ಬಹುದೊಡ್ಡ ಅಪಾಯ ಕಾದಿದೆ ಎಂಬುವುದರಲ್ಲಿ ಅನುಮಾನವಿಲ್ಲ.

ಇನ್ನು ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲಿ ದೇಧವ್ಯಾಪಿ ಒಂದೆಡೆ ದಿಢೀರ್ ಸಂಚಾರ ಹೆಚ್ಚಳವಾಗಿದ್ದರೆ, ಮತ್ತೊಂದೆಡೆ ಮದ್ಯ ಮಾರಾಟ ಅರಂಭವಾಗಿರುವುದರಿಂದ ಎಣ್ಣೆ ಪ್ರಿಯರು ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ವೈನ್‌ ಶಾಪ್ ಎದುರು ಕಾಯಲಾರಂಭಿಸಿದ್ದಾರೆ. 

ಈಗಾಗಲೇ ಕೇವಲ ಒಂದು ದಿನದಲ್ಲಿ ಸೋಂಕಿತರ ಸಂಖ್ಯೆ ಮೂರು ಸಾವಿರಕ್ಕೇರಿದ್ದು, ಒಟ್ಟು ಸಂಖ್ಯೆ 46437ಕ್ಕೇರಿದೆ. ಇತ್ತ ಸಾವಿನ ಸಂಖ್ಯೆಯೂ ಹೆಚ್ಚಿದ್ದು, ಬರೋಬ್ಬರಿ 195 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೋನಾಗೆ ದೇಶದಲ್ಲಿ ಒಟ್ಟು 1566 ಮಂದಿ ಬಲಿಯಾಗಿದ್ದಾರೆ.