Asianet Suvarna News Asianet Suvarna News

ಪ್ರೀತ್ಸೆ ಅಂತಾ ನೇಹಾ ಹಿಂದೆ ಬಿದ್ದಿದ್ದ ಫಯಾಜ್, ಪ್ರೀತಿ ನಿರಾಕರಿಸಿದ ಕಾರಣ ಚಾಕು ಇರಿದು ಹತ್ಯೆ!

ಹುಬ್ಬಳ್ಳಿ ಕಾರ್ಪೋರೇಟರ್ ಪುತ್ರಿ ಜಿಹಾದ್‌ಗೆ ಬಲಿ, ರಾಜ್ಯದಲ್ಲಿ 2ನೇ ಹಂತದ ಚುನಾವಣೆಗೆ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ, ವಿಜಯೇಂದ್ರ ಶಾಸ್ತ್ರ ಹೇಳ್ತಾರಾ? ತಿರುಗೇಟು ನೀಡಿದ ಸಿದ್ದರಾಮಯ್ಯ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

ಹುಬ್ಬಳ್ಳಿ ಕಾರ್ಪೋರೇಟರ್ ಪುತ್ರಿ ಮೇಲೆ ಫಯಾಜ್ ಭೀಕರ ದಾಳಿ ಮಾಡಿ ಹತ್ಯೆ ಮಾಡಿದ್ದಾನೆ. ತಾಯಿ-ಸ್ನೇಹಿತರ ಮುಂದೆ ಆರೋಪಿ ಫಯಾಜ್ 9 ಬಾರಿ ಚಾಕು ಇರಿದು ನೇಹಾಳನ್ನು ಹತ್ಯೆ ಮಾಡಿದ್ದಾನೆ.ನೇಹಾ ಹಾಗೂ ಫಯಾಜ್ ಒಂದೇ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದರ. ಹಲವು ದಿನಗಳಿಂದ ನೇಹಾಳ ಬೆನ್ನು ಬಿದ್ದಿದ್ದ. ಪ್ರೀತ್ಸೆ ಅಂತಾ ಹಿಂದೆ ಬಿದ್ದ ಕಾರಣ ನೇಹಾ ಕಾಲೇಜು ಕೂಡ ತೊರೆದಿದ್ದಳು. ಪರೀಕ್ಷೆ ಕಾರಣ ತಾಯಿ ಜೊತೆ ಕಾಲೇಜಿಗೆ ಆಗಮಿಸಿದ್ದಳು. ಮಾಸ್ಕ್ ಹಾಕಿಕೊಂಡು ಕಾಲೇಜಿಗೆ ಆಗಮಿಸಿದ  ಆರೋಪಿ ಫಯಾಜ್, ಚಾಕುವಿನಿಂದ ನೇಹಾಳನ್ನು ಹತ್ಯೆ ಮಾಡಿದ್ದಾನೆ.
 

Video Top Stories