ಡೇಂಜರಸ್ ಒಪ್ಪಂದ ಮಾಡಿಕೊಂಡ ಶಿಕ್ಷಣ ಇಲಾಖೆ

ಡೇಂಜರಸ್ ಒಪ್ಪಂದ ಮಾಡಿಕೊಂಡ ಶಿಕ್ಷಣ ಇಲಾಖೆ

Feb. 23, 2018, 9:48 a.m.

ಇದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸುವ ಸುದ್ದಿ. ನಿಮ್ಮ ಮಕ್ಕಳ ಸಂಪೂರ್ಣ ಜಾತಕ ಸೇರ್ತಿದೆ ಸಮಾಜ ಘಾತುಕರ ಕೈಗೆ! ಹೌದು, ಇದು ಕೇವಲ ಸರ್ಕಾರಿ ಶಾಲೆಯ ಮಕ್ಕಳಷ್ಟೇ ಅಲ್ಲ ಅನುದಾನಿತ, ಖಾಸಗಿ ಶಾಲೆಗಳ ಮಕ್ಕಳ ಸಂಪೂರ್ಣ ವಿವರವೂ ಮಾರಾಟಕ್ಕೆ  ಇಡಲು ಶಿಕ್ಷಣ ಇಲಾಖೆ ಸಜ್ಜಾಗಿದೆ. ಸ್ಕೂಲ್ ಜೀ ಲಿಂಕ್ ಎಂಬ ಖಾಸಗಿ ಕಂಪನಿಗೆ ಎಲ್ಲಾ ವಿವರ ನೀಡಲು ಶಿಕ್ಷಣ ಇಲಾಖೆ ಒಪ್ಪಂದಕ್ಕೆ ಮುಂದಾಗಿದೆ. ಸ್ಕೂಲ್​  ಜೀ ಲಿಂಕ್​ ಸಿಇಓ ಹಿಮಾಂತು ಅರ್ಗರ್ವಾಲ್​ ಜೊತೆ ಒಡಂಬಿಕೆಗೆ ಶಾಲಿ ರಜನೀಶ್​ ಮುಂದಾಗಿದ್ದಾರೆ. ನಮ್ಮ ರಾಜ್ಯದ ವಿದ್ಯಾರ್ಥಿಗಳ ಸಂಪೂರ್ಣ ವಿವರ ಯಾರೊಂದಿಗೆ ಬೇಕಾದರೂ ಹಂಚಿಕೊಳ್ಳಲೂ ಸ್ಕೂಲ್ ಜೀ ಲಿಂಕ್ ಗೆ ಅಧಿಕಾರ ನೀಡಲಾಗಿದೆ. ಈಗಾಗಲೇ 3 ಲಕ್ಷಕ್ಕೂ  ಹೆಚ್ಚು ಶಿಕ್ಷಕರ ಸಂಪೂರ್ಣ ವಿವರಗಳು ಹಸ್ತಾಂತರ ಮಾಡಲಾಗಿದ್ದು,  ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಹಾಗೂ ರಾಜ್ಯ ಯೋಜನಾ ನಿರ್ದೇಶಕ ರೇಜುರನ್ನೂ ಕತ್ತಲೆಯಲ್ಲಿಟ್ಟು ಡಾಟಾ ನೀಡಿದ್ದಾರೆ... ಇನ್ನು ಸರ್ಕಾರ ಈ ವಿಚಾರದಲ್ಲಿ ತಡಮಾಡಿದರೆ ಮಕ್ಕಳ ಭವಿಷ್ಯ ಸಮಾಜ ಘಾತುಕರ ಕೈವಶವಾಗುವುದರಲ್ಲಿ ಸಂಶವೇ ಇಲ್ಲ..