ಅಂಡರ್-19 ವಿಶ್ವಕಪ್: ಫೈನಲ್'ವರೆಗಿನ ಟೀಂ ಇಂಡಿಯಾ ಪಯಣ ಹೀಗಿತ್ತು...

ಅಂಡರ್-19 ವಿಶ್ವಕಪ್: ಫೈನಲ್'ವರೆಗಿನ ಟೀಂ ಇಂಡಿಯಾ ಪಯಣ ಹೀಗಿತ್ತು...

Feb. 2, 2018, 9:41 p.m.

ನ್ಯೂಜಿಲೆಂಡ್'ನಲ್ಲಿ ನಡೆಯುತ್ತಿರುವ 12ನೇ ಆವೃತ್ತಿಯ ಅಂಡರ್ 19 ವಿಶ್ವಕಪ್'ನಲ್ಲಿ ಭಾರತ ಅಜೇಯವಾಗಿ ಫೈನಲ್ ಪ್ರವೇಶಿಸಿದೆ. ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಪೃಥ್ವಿ ಶಾ ಬಳಗ ಒಂದು ಸೋಲೂ ಕಾಣದೆ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಇದೀಗ ಫೆ.03ರಂದು ನಡೆಯುವ ಫೈನಲ್'ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ತಲಾ 3 ಬಾರಿ ವಿಶ್ವಕಪ್ ಜಯಿಸಿದ್ದು, ಈ ಬಾರಿ ಚಾಂಪಿಯನ್ ತಂಡ 4 ವಿಶ್ವಕಪ್ ಗೆದ್ದ ಮೊದಲ ತಂಡವೆನಿಸಲಿದೆ. ನಾಯಕ ಪೃಥ್ವಿ ಶಾ, ಕಮ್ಲೇಶ್ ನಾಗರಕೋಟಿ, ಅನುಕುಲ್ ರಾಯ್ ಟೀಂ ಇಂಡಿಯಾದ ಟ್ರಂಪ್ ಕಾರ್ಡ್ ಆಟಗಾರರೆನಿಸಿಕೊಂಡಿದ್ದು, ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದೆ ಕಿರಿಯರ ಟೀಂ ಇಂಡಿಯಾ. All The Best U-19 Team India