technology
By Suvarna Web Desk | 01:00 PM March 10, 2017
ರಿಲಯನ್ಸ್'ನಿಂದ ಹೊಸ 4ಜಿ ಗ್ರಾಹಕರಿಗೆ 49 ರೂಪಾಯಿಗೆ 1ಜಿಬಿ ಡೇಟಾ

Highlights

3ಜಿ ಮತ್ತು 4ಜಿ ಗ್ರಾಹಕರಿಗೂ ಆಫರ್ ಪ್ರಕಟಿಸಲಾಗಿದ್ದು, 99 ರೂಪಾಯಿಗೆ ಅನಿಯಮಿತ 3ಜಿ ಡೇಟಾ ಮತ್ತು 49ರೂಪಾಯಿಗೆ ಅನಿಯಮಿತ 2ಜಿ ಡೇಟಾ ನೀಡುವುದಾಗಿ ತಿಳಿಸಿದೆ.

ನವದೆಹಲಿ(ಮಾ.10): ಅಗ್ಗದ ದರದ ಇಂಟರ್‌'ನೆಟ್ ಮತ್ತು ಉಚಿತ ಕರೆಯ ಆಫರ್ ಪ್ರಕಟಿಸಿರುವ ಸೋದರ ಮುಕೇಶ್ ಅಂಬಾನಿ ಅವರ ಜಿಯೋಗೆ ಸೆಡ್ಡು ಹೊಡೆಯಲು ಅನಿಲ್ ಅಂಬಾನಿ ಅವರು ತಮ್ಮ ರಿಲಯನ್ಸ್ ಕಮ್ಯುನಿಕೇಶನ್‌'ನ ಹೊಸ 4ಜಿ ಗ್ರಾಹಕರಿಗೆ ಆಕರ್ಷಕ ಆಫರ್ ಪ್ರಕಟಿಸಿದ್ದಾರೆ.

ಕೇವಲ 49 ರೂಪಾಯಿಗೆ 1 ಜಿಬಿ 4ಜಿ ಡೇಟಾ, 149 ರೂಪಾಯಿಗೆ 3 ಜಿಬಿ ಡೇಟಾ ಜತೆಗೆ ರಿಲಯನ್ಸ್ ನೆಟ್‌'ವರ್ಕ್‌ನಲ್ಲಿ ಉಚಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆ ನೀಡುವುದಾಗಿ ರಿಲಯನ್ಸ್ ಕಮ್ಯುನಿಕೇಶನ್ ಪ್ರಕಟಿಸಿದೆ. ‘ಜಾಯ್ ಆಪ್ ಹೋಲಿ’ ಆಫರ್ 28 ದಿನಗಳ ವ್ಯಾಲಿಡಿಟಿ ಒಳಗೊಂಡಿದೆ.

ಅಲ್ಲದೇ 3ಜಿ ಮತ್ತು 4ಜಿ ಗ್ರಾಹಕರಿಗೂ ಆಫರ್ ಪ್ರಕಟಿಸಲಾಗಿದ್ದು, 99 ರೂಪಾಯಿಗೆ ಅನಿಯಮಿತ 3ಜಿ ಡೇಟಾ ಮತ್ತು 49ರೂಪಾಯಿಗೆ ಅನಿಯಮಿತ 2ಜಿ ಡೇಟಾ ನೀಡುವುದಾಗಿ ತಿಳಿಸಿದೆ.

ಇದಷ್ಟೇ ಅಲ್ಲದೇ ಕರ್ನಾಟಕ, ಹರ್ಯಾಣ, ಉತ್ತರಪ್ರದೇಶ, ಆಂದ್ರಪ್ರದೇಶ, ಗುಜರಾತ್, ಮಹರಾಷ್ಟ್ರ, ಕೇರಳ,ತಮಿಳುನಾಡಿನ ಹೊಸ 2ಜಿ ಗ್ರಾಹಕರಿಗೆ ಪ್ರತ್ಯೇಕ ಆಫರ್ ಪ್ರಕಟಿಸಲಾಗಿದ್ದು ಕೇವಲ 49 ರೀಚಾರ್ಜ್ ಮಾಡಿಸಿದರೆ ಅನಿಯಮಿತ ಡೇಟಾ, 20 ರೂಪಾಯಿ ಮೌಲ್ಯದ ಟಾಕ್ ಟೈಮ್ ದೊರೆಯಲಿದ್ದು, ಪ್ರತಿ ನಿಮಿಷಕ್ಕೆ 25 ಪೈಸೆ ಕರೆದರ ನಿಗದಿಪಡಿಸಲಾಗಿದೆ. ಈ ಆಫರ್ 28 ದಿನಗಳ ವ್ಯಾಲಿಡಿಟಿಯನ್ನೊಳಗೊಂಡಿದೆ.  

Show Full Article


Recommended


bottom right ad