Asianet Suvarna News Asianet Suvarna News

ಕೇದಾರದಲ್ಲಿದ್ದ ಬೆಳಗಾವಿ ಮೂಲದ ಪಂಡಿತ ಮೃತ್ಯುಂಜಯ ಲಿಂಗೈಕ್ಯ

ಉತ್ತರಾಖಂಡದ ಕೇದಾರದ ಜಂಗಮ ಪೀಠದಲ್ಲಿ ವೇದವಾಚಕ ಪಂಡಿತರಾಗಿ ಸೇವೆ ಸಲ್ಲಿಸುತ್ತಿದ್ದ ಬೈಲಹೊಂಗಲದ ಮೂಲದ ಪಂಡಿತ ಮೃತ್ಯುಂಜಯ ಗುರುಲಿಂಗ ಪೂಜಾರಜೀ ಹಿರೇಮಠ(38) ಅವರು ಕೇದಾರದಲ್ಲಿ ಹೃದಯಾಘಾತದಿಂದ ಶುಕ್ರವಾರ ರಾತ್ರಿ ನಿಧನರಾದರು. 

Pandit Mrityunjaya of Belagavi who was in Kedarnath Passes Away gvd
Author
First Published Apr 21, 2024, 10:42 AM IST

ಬೆಳಗಾವಿ (ಏ.21): ಉತ್ತರಾಖಂಡದ ಕೇದಾರದ ಜಂಗಮ ಪೀಠದಲ್ಲಿ ವೇದವಾಚಕ ಪಂಡಿತರಾಗಿ ಸೇವೆ ಸಲ್ಲಿಸುತ್ತಿದ್ದ ಬೈಲಹೊಂಗಲದ ಮೂಲದ ಪಂಡಿತ ಮೃತ್ಯುಂಜಯ ಗುರುಲಿಂಗ ಪೂಜಾರಜೀ ಹಿರೇಮಠ(38) ಅವರು ಕೇದಾರದಲ್ಲಿ ಹೃದಯಾಘಾತದಿಂದ ಶುಕ್ರವಾರ ರಾತ್ರಿ ನಿಧನರಾದರು. ಮೂಲತಃ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದರಾಗಿರುವ ಪಂಡಿತ ಮೃತ್ಯುಂಜಯ್ಯ ಹಿರೇಮಠ ಅವರ ಕುಟುಂಬ ಕಳೆದ ಐದು ದಶಕಗಳದಿಂದ ಕೇದಾರದಲ್ಲಿಯೇ ನೆಲೆಸಿದ್ದರು. 

ಇವರ ತಂದೆ ಗುರುಲಿಂಗ ಪೂಜಾರಜೀ ಹಿರೇಮಠ ಅವರು, ಸಣ್ಣವಯಸ್ಸಿನಲ್ಲೇ ಕೇದಾರಕ್ಕೆ ತೆರಳಿ ಅಲ್ಲಿಯೇ ನೆಲೆಸಿ, ಕೇದಾರದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಮೃತರಿಗೆ ಒಟ್ಟು ಮೂರು ಜನ ಸಹೋದರರಿದ್ದು, ಮೃತ್ಯುಂಜಯ್ಯ ಮೂರನೇಯವರಾಗಿದ್ದಾರೆ. ಹಿರಿಯ ಸಹೋದರ ಶಂಕರಲಿಂಗ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡನೇ ಸಹೋದರ ಡಾ. ಶಿವಕಾಂತೇಶ ಕೇದಾರದಲ್ಲಿಯೇ ಸರ್ಕಾರಿ ವೈದ್ಯರಾಗಿ, ಕೊನೆಯ ಸಹೋದರ ಉಮೇಶ್ವರ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮೃತ್ಯಂಜಯ್ಯ ಹಿರೇಮಠ ಅವರು ಎಸ್‌ಎಸ್‌ಎಲ್‌ಸಿ ವರೆಗೆ ಕೇದಾರದಲ್ಲಿ ವ್ಯಾಸಂಗ ಮಾಡಿ, ಬಳಿಕ ಗುಲ್ಬರ್ಗಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿದ್ದಾರೆ. 

ಬೆಂಗಳೂರು ಜನ ಬದಲಾವಣೆ ಬಯಸಿದ್ದಾರೆ: ಮುಖಾಮುಖಿ ಸಂದರ್ಶನದಲ್ಲಿ ಮನ್ಸೂರ್‌ ಅಲಿಖಾನ್‌!

ದೇವರ ಸೇವೆ ಸಲ್ಲಿಸಬೇಕೆಂಬ ಉದ್ದೇಶದಿಂದ ವೇದಗಳ ಅಧ್ಯಯನದಲ್ಲಿ ಹೆಚ್ಚು ಪ್ರಾವಿಣ್ಯತೆ ಪಡೆದು ಭೋದನೆ ಮಾಡುತ್ತಿದ್ದರು. ಶುಕ್ರವಾರ ರಾತ್ರಿ 9 ಗಂಟೆಯ ಸುಮಾರಿಗೆ ಶೌಚಾಲಯಕ್ಕೆ ಹೋಗಿದ್ದ ಸಮಯದಲ್ಲಿ ಏಕಾಎಕಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಕೇದಾರದ ಓಕಿಮಠದಲ್ಲಿ ಮಾಡಲಾಗಿದೆ. ಇವರ ಮನೆ ಹಾಗೂ ಜಮೀನು ಚಿಕ್ಕಬಾಗೇವಾಡಿ ಗ್ರಾಮದಲ್ಲಿಯೇ ಇದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೃತರಿಗೆ ತಂದೆ ಗುರುಲಿಂಗ ಪೂಜಾರಿಜೀ ಹಿರೇಮಠ, ತಾಯಿ ಸುಮಿತ್ರಾದೇವಿ, ಮೂವರು ಸಹೋದರರು ಇದ್ದಾರೆ.

Follow Us:
Download App:
  • android
  • ios