Asianet Suvarna News Asianet Suvarna News

ಎಂಇಎಸ್ ಮುಖಂಡರಿಗೆ ಕ್ಯಾರೆ ಎನ್ನದ ಮಹಾ ಸಿಎಂ!

ಎಂಇಎಸ್ ಮುಖಂಡರಿಗೆ ಮಹಾ ಸಿಎಂ ಅವರಿಂದ ಮುಜುಗರ! ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಎಂಇಎಸ್ ಮುಖಂಡರನ್ನು ನಿರ್ಲಕ್ಷಿಸಿದ ಫಡ್ನವೀಸ್! ಆದಷ್ಟು ಬೇಗ ಗಡಿ ವಿವಾದ ಇತ್ಯರ್ಥ ಪಡಿಸಬೇಕು!ಸುಪ್ರೀಂ ಕೋರ್ಟ್ ಮುಖ್ಯ ನಾಯಾಧೀಶರು ಬದಲಾಗಿದ್ದಾರೆ! ಶೀಘ್ರವೇ ಗಡಿ ವಿಚಾರವಾಗಿ ಚರ್ಚಿಸಲು ಸಭೆ ಕರೆಯುವಂತೆ ಮಹಾ ಸಿಎಂಗೆ ಮನವಿ! ಹೂಗುಚ್ಛ ಸ್ವೀಕರಿಸಿ ಎಂಇಎಸ ನಾಯಕರ ದೂರು ನಿರ್ಲಕ್ಷಿಸಿದ ಮಹಾರಾಷ್ಟ್ರ ಸಿಎಂ

Maharashtra Chief Minister Insults MES Leaders at Airport
Author
Bengaluru, First Published Oct 25, 2018, 12:34 PM IST

ಬೆಳಗಾವಿ(ಅ.25): ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಎಂಇಎಸ್ ಮುಖಂಡರನ್ನು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ನಿರ್ಲಕ್ಷಿಸಿದ ಘಟನೆ ನಡೆದಿದೆ.

ಗಡಿ ವಿವಾದ ಸಂಬಂಧ ಮಹಾ ಸಿಎಂ ಮುಂದೆ ಬೇಡಿಕೆ ಮಂಡಿಸಲು ಎಂಇಎಸ್ ಮುಖಂಡರಾದ ದೀಪಕ್ ದಳವಿ, ಮಾಜಿ ಶಾಸಕ ಅರವಿಂದ್ ಪಾಟೀಲ್ ಸೇರಿ ಹಲವು ಮುಖಂಡರು ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

ಈ ವೇಳೆ ಕರ್ನಾಟಕ ಸರ್ಕಾರ, ಕರ್ನಾಟಕ ಪೊಲೀಸರ ವಿರುದ್ಧ ಎಂಇಎಸ್ ಮುಖಂಡರು ಫಡ್ನವೀಸ್ ಬಳಿ ದೂರು ನೀಡಿದರು. ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಬದಲಾಗಿದ್ದು, ಆದಷ್ಟು ಬೇಗ ಗಡಿ ವಿವಾದ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳುವಂತೆ ಫಡ್ವೀಸ್ ಅವರನ್ನು ಒತ್ತಾಯಿಸಿದರು.

ತಮ್ಮನ್ನು ಭೇಟಿಯಾಗುವುದೇ ದೊಡ್ಡ ಸಮಸ್ಯೆ ಎಂದು ಮಹಾ ಸಿಎಂ ಫಡ್ನವೀಸ್ ಮುಂದೆ ಅಳಲು ತೋಡಿಕೊಂಡ ಎಂಇಎಸ್ ಮುಖಂಡರು, ಶೀಘ್ರವೇ ಗಡಿ ವಿಚಾರವಾಗಿ ಚರ್ಚಿಸಲು ಸಭೆ ಕರೆಯುವಂತೆ ಒತ್ತಾಯಿಸಿದರು.

ಆದರೆ ಎಂಇಎಸ್ ಮುಖಂಡರಿಂದ ಕೇವಲ ಹೂಗುಚ್ಛ ಸ್ವೀಕರಿಸಿ ಅವರ ದೂರನ್ನು ನಿರ್ಲಕ್ಷಿಸಿದ ದೇವೇಂದ್ರ ಫಡ್ನವೀಸ್, ಎಂಇಎಸ್ ಮುಖಂಡರಿಗೆ ಮುಜುಗರ ಉಂಟು ಮಾಡಿದರು.

Follow Us:
Download App:
  • android
  • ios