Asianet Suvarna News Asianet Suvarna News

ಬಳ್ಳಾರಿ ಶಾಸಕರ ಮನೆ ಸೇರಿದಂತೆ 4 ಕಡೆ ಬೆಳ್ಳಂಬೆಳಗ್ಗೆ ಇಡಿ ದಾಳಿ!

ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಬಳ್ಳಾರಿ ಶಾಸಕರ ಮನೆ ಸೇರಿದಂತೆ 4 ಕಡೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಬೆಳಿಗ್ಗೆ 6.30ಯಿಂದ ನಾಲ್ಕು ಕಡೆ ಏಕಾಏಕಿ ದಾಳಿ ಮಾಡಿ ಪರಿಶೀಲನೆ ನಡೆಸಿದ್ದು,  ಬೆಂಗಳೂರಿನಿಂದ  ಹತ್ತಾರು ಅಧಿಕಾರಿಗಳು, ಸಿಬ್ಬಂದಿ ತಂಡ, ಆಗಮಿಸಿದ್ದಾರೆ.

early morning ed raid on ballari mla residence gvd
Author
First Published Feb 10, 2024, 9:15 AM IST

ಬಳ್ಳಾರಿ (ಫೆ.10): ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಬಳ್ಳಾರಿ ಶಾಸಕರ ಮನೆ ಸೇರಿದಂತೆ 4 ಕಡೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಬೆಳಿಗ್ಗೆ 6.30ಯಿಂದ ನಾಲ್ಕು ಕಡೆ ಏಕಾಏಕಿ ದಾಳಿ ಮಾಡಿ ಪರಿಶೀಲನೆ ನಡೆಸಿದ್ದು,  ಬೆಂಗಳೂರಿನಿಂದ  ಹತ್ತಾರು ಅಧಿಕಾರಿಗಳು, ಸಿಬ್ಬಂದಿ ತಂಡ, ಆಗಮಿಸಿದ್ದಾರೆ. ಬೆಂಗಳೂರಿನ ಪಾಸಿಂಗ್ ವಾಹನಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಹಿಂದೆ ಹುಟ್ಟು ಹಬ್ಬದ ದಿನದಂದು ಇಡೀ ಬಳ್ಳಾರಿ ನಗರದ ಮನೆ ಮನೆಗೆ ಕುಕ್ಕರ್ ಶಾಸಕ ಭರತ ರೆಡ್ಡಿ ನೀಡಿದ್ದರು. ಚುನಾವಣೆಗೂ‌ ಮುನ್ನ ನೀಡಿದ ಕುಕ್ಕರ್ ಸಾಕಷ್ಟು ಸದ್ದು ಮಾಡಿತ್ತು.

ಭ್ರಷ್ಟ ಅಧಿಕಾರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ತಾಲ್ಲೂಕಿನ ತಳಕು ಹೋಬಳಿಯ ಓಳಾಪುರ ಗ್ರಾಮದ ಕೆ.ಜಿ.ಜಯಣ್ಣ ಮತ್ತು ಸಹೋದರರು ತಮ್ಮ ಜಮೀನಿನ ಪಹಣ ಮತ್ತು ಇತರೆ ದಾಖಲಾತಿಗಳನ್ನು ಸಿದ್ಧ ಪಡಿಸಿಕೊಡುವಂತೆ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಗಂಗಯ್ಯ ಹದಿನೈದು ಸಾವಿರ ಲಂಚ ಕೇಳಿದ್ದು, ಆಪೈಕಿ ಹತ್ತು ಸಾವಿರವನ್ನು ಕಾರಿನ ಚಾಲಕ ಕಿರಣ್ ಮೂಲಕ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದಾರೆ.

ಜಿಲ್ಲಾ ಲೋಕಾಯುಕ್ತ ಎಸ್ಪಿ ವಾಸುದೇವ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮೃತ್ಯುಂಜಯ, ವೃತ್ತ ನಿರೀಕ್ಷಕ, ಪಿಎಸ್‌ಐ ಮತ್ತು ಸಿಬ್ಬಂದಿ ವರ್ಗದೊಂದಿಗೆ ಕಚೇರಿ ಮುಂದೆಯೇ ದಾಳಿ ನಡೆಸಿದ್ದು, ಕೆ.ಜೆ.ಜಯಣ್ಣರಿಂದ ಹಣ ಪಡೆದ ಚಾಲಕ ಕಿರಣ್‌ನನ್ನು ಪ್ರಶ್ನಿಸಿದಾಗ ಅಧಿಕಾರಿ ಗಂಗಯ್ಯನವರ ಸೂಚನೆಯಂತೆ ಹಣ ಪಡೆದಿರು ವುದಾಗಿ ಲೋಕಾಯುಕ್ತ ಅಧಿಕಾರಿಗಳಿಗೆ ತನಿಖಾ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ್ದಾನೆ.

ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವುದೇ ಸರ್ಕಾರದ ಗುರಿ: ಸಚಿವ ಡಾ.ಜಿ.ಪರಮೇಶ್ವರ್

ಗಂಗಯ್ಯ ಮತ್ತು ಚಾಲಕ ಕಿರಣ್ ತನಿಖೆ ಮುಂದುವರೆದಿದೆ. ಕಳೆದ ಆಗಸ್ಟ್ ೩ರಂದು ಇಲ್ಲಿನ ನಗರಸಭೆ ಪೌರಾಯುಕ್ತೆಯಾಗಿದ್ದ ಕೆ.ಲೀಲಾವತಿ, ಪ್ರಥಮ ದರ್ಜೆ ಸಹಾಯಕ ಕಾಂತರಾಜ್ ಮೂಲಕ ಮೂರು ಲಕ್ಷ ಹಣ ಪಡೆಯುವಾಗ ಸಿಕ್ಕಿ ಬಿದಿದ್ದರು. ಈ ಪ್ರಕರಣ ನಡೆದು ಐದು ತಿಂಗಳ ನಂತರ ಈಗ ಭೂದಾಖಲೆ ಇಲಾಖೆ ಕಚೇರಿಯಲ್ಲಿ ಲೋಕಾಯುಕ್ತದಾಳಿ ಪ್ರಕರಣ ನಡೆದಿದೆ.

Follow Us:
Download App:
  • android
  • ios