Asianet Suvarna News Asianet Suvarna News

ಕರ್ನಾಟಕದಲ್ಲಿ 623 ಹೊಸ ಕೇಸ್‌: ಮತ್ತೆ 5,000 ದಾಟಿದ ಸಕ್ರಿಯ ಸೋಂಕಿತರ ಸಂಖ್ಯೆ

*  ಭಾನುವಾರ 623 ಜನರಲ್ಲಿ ಕಾಣಿಸಿಕೊಂಡ ಸೋಂಕು 
*  ಬೆಳಗಾವಿಯಲ್ಲಿ 78 ವರ್ಷದ ವ್ಯಕ್ತಿ ಸೋಂಕಿನಿಂದ ಸಾವು
*  ಪಾಸಿಟಿವಿಟಿ ದರ ಶೇ. 2.6 ರಷ್ಟು ದಾಖಲು 

Again Cross 5000 Active Coronavirus Cases in Karnataka grg
Author
Bengaluru, First Published Jun 20, 2022, 12:00 AM IST

ಬೆಂಗಳೂರು(ಜೂ.20): ರಾಜ್ಯದಲ್ಲಿ ಕೊರೋನಾ ಸೋಂಕು ಹೊಸ ಪ್ರಕರಣಗಳು ಏರಿಳಿಕೆ ಮುಂದುವರೆದಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ ಐದು ಸಾವಿರ ಗಡಿದಾಟಿದೆ.

ಭಾನುವಾರ 623 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 412 ಮಂದಿ ಗುಣಮುಖರಾಗಿದ್ದಾರೆ. ಬೆಳಗಾವಿಯಲ್ಲಿ 78 ವರ್ಷದ ವ್ಯಕ್ತಿ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಸದ್ಯ 5035 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 23 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ. 2.6 ರಷ್ಟು ದಾಖಲಾಗಿದೆ. ಶನಿವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆ ಒಂದು ಸಾವಿರದಷ್ಟುಕಡಿಮೆಯಾಗಿದೆ, ಹೀಗಾಗಿ ಹೊಸ ಪ್ರಕರಣಗಳು 127 ಇಳಿಕೆಯಾಗಿವೆ. (ಶನಿವಾರ 750, ಸಾವು ಶೂನ್ಯ).

ಕೋವಿಡ್‌ ಏರಿಕೆ: 13,216 ಕೇಸು, 113 ದಿನದ ಗರಿಷ್ಠ

ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 588 ಪತ್ತೆಯಾಗಿವೆ. ಉಳಿದಂತೆ ದಕ್ಷಿಣ ಕನ್ನಡ 13, ಮೈಸೂರು 6, ಉತ್ತರ ಕನ್ನಡ ಮತ್ತು ಉಡುಪಿ ತಲಾ 4, ಬೆಂಗಳೂರು ಗ್ರಾಮಾಂತರ 2, ಬೆಳಗಾವಿ, ಬೀದರ್‌, ಧಾರವಾಡ, ಕಲಬುರಗಿ, ಕೋಲಾರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. 12 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.

ಕಳೆದ ಒಂದು ವಾರದಿಂದ ಸೋಂಕು ಪ್ರಕರಣಗಳು 600 ರಿಂದ 800 ಮಧ್ಯೆ ಏರಿಳಿಕೆಯಾಗುತ್ತಿದೆ. ಪಾಸಿಟಿವಿಟಿ ದರವು ಕೂಡಾ ಶೇ.2.5 ರಿಂದ 3 ನಡುವೆ ಇದೆ. ಸಕ್ರಿಯ ಸೋಂಕು ಪ್ರಕರಣಗಳು ಐದು ಸಾವಿರ ಗಡಿದಾಟಿದ್ದು, ಈ ಪೈಕಿ 35 ಮಂದಿ ಮಾತ್ರ ಆಸ್ಪತೆಯಲ್ಲಿದ್ದು, ಉಳಿದ 5,000 ಮಂದಿ ಮನೆಯಲ್ಲಿಯೇ ಆರೈಕೆಯಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಈವರೆಗೆ 39.6 ಲಕ್ಷ ಮಂದಿಗೆ ಸೋಂಕು ತಗುಲಿದೆ. 39.1 ಲಕ್ಷ ಮಂದಿ ಗುಣ ಮುಖರಾಗಿದ್ದು, 40,071 ಮಂದಿ ಸಾವಿಗೀಡಾಗಿದ್ದಾರೆ.
 

Follow Us:
Download App:
  • android
  • ios