Asianet Suvarna News Asianet Suvarna News

ಮೆಟ್ರೋ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್

ನೀವು ಮೆಟ್ರೋ ಪ್ರಯಾಣಿಕರೇ ಹಾಗಿದ್ದಲ್ಲಿ ನಿಮಗಿಲ್ಲಿದೆ ಒಂದು ಭರ್ಜರಿ ಗುಡ್ ನ್ಯೂಸ್. ಗುರುವಾರದಿಂದ ಬೆಂಗಳೂರಿನಲ್ಲಿ ಆರು ಬೋಗಿಗಳ ಮೂರನೇ ಮೆಟ್ರೋ ರೈಲು ಸಂಚಾರ ಮಾಡಲಿದೆ.

6 Coach Namma Metro train to run from tomorrow
Author
Bengaluru, First Published Nov 21, 2018, 8:10 AM IST

ಬೆಂಗಳೂರು :  ಆರು ಬೋಗಿಗಳ ಮೂರನೇ ಮೆಟ್ರೋ ರೈಲು ಗುರುವಾರ(ನ.22) ವಾಣಿಜ್ಯ ಸಂಚಾರ ಆರಂಭಿಸಲಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.

ಕಳೆದ ಅ.4ರಂದು ಆರು ಬೋಗಿಗಳ ಎರಡನೇ ಮೆಟ್ರೋ ರೈಲಿಗೆ ಚಾಲನೆ ನೀಡಲಾಗಿತ್ತು. ಇದೀಗ ನ.22ರಂದು ಬೆಳಗ್ಗೆ 11.30ಕ್ಕೆ ವಿಧಾನಸೌಧ ಸಮೀಪದ ಡಾ.ಬಿ.ಆರ್‌.ಅಂಬೇಡ್ಕರ್‌ ಮೆಟ್ರೋ ನಿಲ್ದಾಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರು ಬೋಗಿಗಳ ಮೆಟ್ರೋ ರೈಲಿಗೆ ಚಾಲನೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಉಪಸ್ಥಿತರಿರುವರು. ಈ ರೈಲು ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ಮಾರ್ಗದಲ್ಲಿ (ನೇರಳೆ ಮಾರ್ಗ) ವಾಣಿಜ್ಯ ಸಂಚಾರ ನಡೆಸಲಿದೆ.

ಆರು ಬೋಗಿಯ ರೈಲಿನಲ್ಲಿ ಒಂದೇ ಬಾರಿಗೆ 1950 ಮಂದಿ ಪ್ರಯಾಣಿಸಲು ಅವಕಾಶವಿದೆ. ದಿನೇದಿನೆ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಪ್ರಸ್ತುತ ಹಸಿರು ಮಾರ್ಗ(ನಾಗಸಂದ್ರ- ಯಲಚೇನಹಳ್ಳಿ ಮಾರ್ಗ) ಮತ್ತು ನೇರಳೆ ಮಾರ್ಗದಲ್ಲಿ ದಿನಕ್ಕೆ ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಮೂರು ಬೋಗಿಯ ಮೆಟ್ರೋ ರೈಲನ್ನು ಆರು ಬೋಗಿಯ ರೈಲಾಗಿ ಮೇಲ್ದರ್ಜೆಗೇರಿಸುವ ಅನಿವಾರ್ಯತೆ ಹೆಚ್ಚಿದೆ. ಆರು ಬೋಗಿಯ ಆರು ರೈಲುಗಳು ನೇರಳೆ ಮಾರ್ಗದಲ್ಲಿ ಸಂಚರಿಸಿದ ಬಳಿಕ ಹಸಿರು ಮಾರ್ಗಕ್ಕೆ ಆರು ಬೋಗಿಯ ರೈಲು ಸೇವೆ ಆರಂಭಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios