Asianet Suvarna News Asianet Suvarna News

ಸೂಪರ್ ಓವರ್'ನಲ್ಲಿ ಎಡವಿಡ ಕರ್ನಾಟಕ; ಮಿಂಚಿದ ಯುವಿ

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 20 ಓವರ್‌'ಗಳಲ್ಲಿ 7 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ 20 ಓವರ್‌'ಗಳ ಮುಕ್ತಾಯಕ್ಕೆ 9 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಪಂದ್ಯ ಟೈ ಆಗಿದ್ದರಿಂದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. ಸೂಪರ್ ಓವರ್‌'ನಲ್ಲಿ ಪಂಜಾಬ್ 15 ರನ್ ಗಳಿಸಿದರೆ, ಕರ್ನಾಟಕಕ್ಕೆ ಗಳಿಸಲು ಸಾಧ್ಯವಾಗಿದ್ದು 11 ರನ್ ಮಾತ್ರ. ರೋಚಕ ಗೆಲುವು ಸಾಧಿಸಿದ ಪಂಜಾಬ್, 4 ಅಂಕಗಳನ್ನು ತನ್ನದಾಗಿಸಿಕೊಂಡಿತು.

Syed Mushtaq Ali Trophy Yuvraj Harbhajan Star in Punjab Win

ಕೊಲ್ಕತ(ಜ.22): ದೇಸಿ ಟಿ20 ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಸೂಪರ್ ಲೀಗ್‌'ನಲ್ಲಿ ಕರ್ನಾಟಕ ಸೋಲಿನ ಆರಂಭ ಪಡೆದುಕೊಂಡಿದೆ. ಇಲ್ಲಿ ಭಾನುವಾರ ಆರಂಭಗೊಂಡ ನಾಕೌಟ್ ಹಂತದ ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಕರ್ನಾಟಕ, ಸೂಪರ್ ಓವರ್‌'ನಲ್ಲಿ 4 ರನ್‌'ಗಳ ಸೋಲೊಪ್ಪಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 20 ಓವರ್‌'ಗಳಲ್ಲಿ 7 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ 20 ಓವರ್‌'ಗಳ ಮುಕ್ತಾಯಕ್ಕೆ 9 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಪಂದ್ಯ ಟೈ ಆಗಿದ್ದರಿಂದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. ಸೂಪರ್ ಓವರ್‌'ನಲ್ಲಿ ಪಂಜಾಬ್ 15 ರನ್ ಗಳಿಸಿದರೆ, ಕರ್ನಾಟಕಕ್ಕೆ ಗಳಿಸಲು ಸಾಧ್ಯವಾಗಿದ್ದು 11 ರನ್ ಮಾತ್ರ. ರೋಚಕ ಗೆಲುವು ಸಾಧಿಸಿದ ಪಂಜಾಬ್, 4 ಅಂಕಗಳನ್ನು ತನ್ನದಾಗಿಸಿಕೊಂಡಿತು.

ಇಲ್ಲಿನ ಜಾದವ್‌ಪುರ್ ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಕರ್ನಾಟಕ ಮೊದಲು ಬ್ಯಾಟಿಂಗ್ ಮಾಡಿ 159 ರನ್‌ಗಳ ಗುರಿ ನಿಗದಿಪಡಿಸಿತು. ಸವಾಲಿನ ಗುರಿ ಬೆನ್ನಟ್ಟಿದ ಪಂಜಾಬ್‌'ಗೆ ಮನ್‌'ದೀಪ್ ಸಿಂಗ್ ಉತ್ತಮ ಆರಂಭ ಒದಗಿಸಿದರು. 29 ಎಸೆತಗಳಲ್ಲಿ 45 ರನ್ (7 ಬೌಂಡರಿ, 1 ಸಿಕ್ಸರ್) ಸಿಡಿಸಿದ ಮನ್‌'ದೀಪ್, ಕರ್ನಾಟಕದ ಬೌಲರ್‌'ಗಳ ಮೇಲೆ ಸವಾರಿ ನಡೆಸಿದರು. 3ನೇ ಕ್ರಮಾಂಕದಲ್ಲಿ ಕ್ರೀಸ್‌'ಗಿಳಿದ ನಾಯಕ ಹರ್ಭಜನ್ ಸಿಂಗ್ 19 ಎಸೆತಗಳಲ್ಲಿ 33 ರನ್ (5 ಬೌಂಡರಿ, 1 ಸಿಕ್ಸರ್) ಬಾರಿಸಿದರು. ಯುವರಾಜ್ ಸಿಂಗ್ 25 ಎಸೆತಗಳಲ್ಲಿ 29 ರನ್‌'ಗಳ ಆಟವಾಡಿ, ತಂಡವನ್ನು ಗೆಲುವಿನತ್ತ ಸಾಗಿಸಿದರು. 12ನೇ ಓವರ್‌ನಲ್ಲಿ 109 ರನ್‌'ಗೆ 2 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಪಂಜಾಬ್ ದಿಢೀರನೆ ಕುಸಿಯಿತು. ಎಸ್.ಅರವಿಂದ್ ಮಾರಕ ದಾಳಿಗೆ ತತ್ತರಿಸಿದ ಪಂಜಾಬ್ 152 ರನ್ ಗಳಿಸುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡಿತು. ಕೊನೆ 3 ಎಸೆತಗಳಲ್ಲಿ ಗೆಲುವಿಗೆ 7 ರನ್‌'ಗಳ ಅಗತ್ಯವಿತ್ತು. 5ನೇ ಎಸೆತವನ್ನು ಬೌಂಡರಿಗಟ್ಟಿದ ಸಂದೀಪ್ ಶರ್ಮಾ, ಕೊನೆ ಎಸೆತದಲ್ಲಿ 2 ರನ್ ಕದ್ದು, ಪಂದ್ಯ ಟೈ ಆಗುವಂತೆ ಮಾಡಿದರು.

ಕರ್ನಾಟಕಕ್ಕೆ ಜೋಶಿ ಆಸರೆ: ಇದಕ್ಕೂ ಮುನ್ನ ಕರ್ನಾಟಕ ಸಾಧಾರಣ ಆರಂಭ ಪಡೆದುಕೊಂಡಿತು. 35 ರನ್ ಗಳಿಸುವಷ್ಟರಲ್ಲಿ ಮಯಾಂಕ್ ಅಗರ್‌ವಾಲ್, ಕರುಣ್ ನಾಯರ್ ಹಾಗೂ ಕೆ.ಗೌತಮ್ ಪೆವಿಲಿಯನ್ ಸೇರಿಕೊಂಡರು. ರವಿಕುಮಾರ್ ಸಮರ್ಥ್(31) ಹಾಗೂ ಸಿ.ಎಂ.ಗೌತಮ್(36) 4ನೇ ವಿಕೆಟ್‌'ಗೆ ಆಕರ್ಷಕ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಅನಿರುದ್ಧ ಜೋಶಿ ಕ್ರೀಸ್‌'ಗಿಳಿದ ಮೇಲೆಯೇ ಕರ್ನಾಟಕಕ್ಕೆ ಸವಾಲಿನ ಮೊತ್ತ ದಾಖಲಿಸುವ ವಿಶ್ವಾಸ ಹುಟ್ಟಿಕೊಂಡಿದ್ದು. ಪಂಜಾಬ್

ಬೌಲರ್‌'ಗಳನ್ನು ಮನಬಂದಂತೆ ದಂಡಿಸಿದ ಅನಿರುದ್ಧ ಜೋಶಿ, ಕೇವಲ 19 ಎಸೆತಗಳಲ್ಲಿ (6 ಬೌಂಡರಿ, 1 ಸಿಕ್ಸರ್) 40 ರನ್ ಸಿಡಿಸಿದರು. ಅವರ ಆಕರ್ಷಕ ಆಟ ತಂಡ 150 ರನ್ ಗಡಿ ದಾಟಲು ನೆರವಾಯಿತು. ಇನ್ನಿಂಗ್ಸ್‌ನ ಅಂತಿಮ ಎಸೆತದಲ್ಲಿ ನಾಯಕ ವಿನಯ್ ಕುಮಾರ್ ಸಿಕ್ಸರ್ ಬಾರಿಸಿದ್ದರಿಂದ ಕರ್ನಾಟಕ 158 ರನ್ ಕಲೆಹಾಕಲು ಸಾಧ್ಯವಾಯಿತು. ಕೊನೆ 10 ಓವರ್ ಗಳಲ್ಲಿ ರಾಜ್ಯ ತಂಡ 96 ರನ್ ಗಳಿಸಿ, ಪಂಜಾಬ್‌'ಗೆ ಕಠಿಣ ಗುರಿ ನಿಗದಿ ಪಡಿಸಿತು.

ಹೇಗಿತ್ತು ಸೂಪರ್ ಓವರ್?

ಸೂಪರ್ ಓವರ್‌'ನ ಮೊದಲ 3 ಎಸೆತಗಳಲ್ಲಿ ಮನ್‌'ದೀಪ್ 1 ಸಿಕ್ಸರ್ ಸಮೇತ 9 ರನ್ ಗಳಿಸಿದರು. 4ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಯುವರಾಜ್, 5ನೇ ಎಸೆತದಲ್ಲಿ 1 ರನ್ ಪಡೆದರು. ಅಂತಿಮ ಎಸೆತದಲ್ಲಿ ಮನ್‌'ದೀಪ್ 1 ರನ್ ಗಳಿಸಿ, ಕರ್ನಾಟಕಕ್ಕೆ 16 ರನ್ ಗುರಿ ನೀಡಿದರು. ಇದೇ ವೇಳೆ ಸೂಪರ್ ಓವರ್‌'ನ ಮೊದಲ ಎಸೆತವನ್ನು ಬೌಂಡರಿಗಟ್ಟಿದ ಕರುಣ್, 2ನೇ ಎಸೆತದಲ್ಲಿ 1 ರನ್ ಗಳಿಸಿದರು. 3ನೇ ಎಸೆತದಲ್ಲಿ ಜೋಶಿ 1 ರನ್ ಪಡೆದರೆ, ನೋಬಾಲ್ ಆಗಿದ್ದ 4ನೇ ಎಸೆತದಲ್ಲಿ 2 ರನ್ ಜತೆಗೆ ಹೆಚ್ಚುವರಿ ರನ್‌'ವೊಂದು ದೊರೆಯಿತು. 4,5 ನೇ ಎಸೆತಗಳಲ್ಲಿ ತಲಾ ಒಂದು ರನ್ ಪಡೆದ ಕರ್ನಾಟಕ, ಕೊನೆ ಎಸೆತದಲ್ಲಿ ಕರುಣ್‌'ರ ವಿಕೆಟ್ ಕಳೆದುಕೊಂಡಿತು.

Follow Us:
Download App:
  • android
  • ios