Asianet Suvarna News Asianet Suvarna News

ವಿಂಡೀಸ್ ಸರಣಿಗೆ ಧವನ್‌ಗೆ ಕೊಕ್-ಕನ್ನಡಿಗ ಮಯಾಂಕ್‌ಗೆ ಸ್ಥಾನ?

ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ನಡೆಯಲಿದೆ. ಸೆ.29ರೊಳಗೆ ಟೆಸ್ಟ್ ಸರಣಿಗೆ ತಂಡ ಪ್ರಕಟಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ. ವಿಂಡೀಸ್ ಸರಣಿಗೆ ಕೆಲ ಬದಲಾವಣೆ ಮಾಡಲು ನಿರ್ಧರಿಸಿದೆ.

Mayank Agarwal might get chance Dhawan to be dropped for west indies test reports
Author
Bengaluru, First Published Sep 27, 2018, 4:28 PM IST

ಮುಂಬೈ(ಸೆ.27): ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ಕಸರತ್ತು ನಡೆಯುತ್ತಿದೆ. ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯ ಪ್ರದರ್ಶನ ಆಧರಿಸಿ ತಂಡದ ಆಯ್ಕೆ ನಡೆಯಲಿದೆ. ಸೆ.26 ರಂದು ನಡೆಯಬೇಕಿದ್ದ ಟೀಂ ಸೆಲೆಕ್ಷನ್ ಇದೀಗ ಸೆ.29 ರೊಳಗೆ ನಡೆಸಲು ನಿರ್ಧರಿಸಲಾಗಿದೆ.

ಏಷ್ಯಾಕಪ್ ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ಶಿಖರ್ ಧವನ್,  ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು. ಹೀಗಾಗಿ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಧವನ್ ಬದಲು ಆರಂಭಿಕನಾಗಿ ಪೃಥ್ವಿ ಶಾ ಕಣಕ್ಕಿಳಿಯೋದು ಸಾಧ್ಯತೆ ಹೆಚ್ಚಿದೆ.

ಪೃಥ್ವಿ ಶಾ ಜೊತೆಗೆ ದೇಸಿ ಟೂರ್ನಿಗಳಲ್ಲಿ ಅಬ್ಬರಿಸುತ್ತಿರುವ ಕನ್ನಡಿಗ ಮಯಾಂಕ್ ಅಗರ್ವಾಲ್‌ಗೂ ಆಯ್ಕೆ ಸಮಿತಿ ಅವಕಾಶ ನೀಡೋ ಸಾಧ್ಯತೆ ಇದೆ. ಈಗಾಗಲೇ ಮಯಾಂಕ್ ಅಗರ್ವಾಲ್ ಹಾಗೂ ಪೃಥ್ವಿ ಶಾ ಭಾರತ ಪ್ರಸಿಡೆಂಟ್ ಇಲೆವೆನ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಸೆ.29 ರಿಂದ ಪ್ರಸಿಡೆಂಟ್ 11 ಹಾಗೂ ವೆಸ್ಟ್ಇಂಡೀಸ್ ತಂಡ 2 ದಿನದ ಅಭ್ಯಾಸ ಪಂದ್ಯ ಆಡಲಿದೆ.
 

Follow Us:
Download App:
  • android
  • ios