Asianet Suvarna News Asianet Suvarna News

ಮೋದಿ ಸರ್ಕಾರದ ವಿರುದ್ಧ ಪಾಕ್ ಪ್ರಧಾನಿ ಇಮ್ರಾನ್ ಅಸಮಾಧಾನ!

ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ಪುನರ್ ಆರಂಭಕ್ಕೆ ಸಜ್ಜಾಗಿದ್ದ ಇಮ್ರಾನ್ ಖಾನ್‌ಗೆ ಹಿನ್ನಡೆಯಾಗಿದೆ. ಭಾರತ ನಿರ್ಧಾರಕ್ಕೆ ಪಾಕ್ ಪ್ರಧಾನಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಪಾಕಿಸ್ತಾನ ಮನವಿಯನ್ನ ಭಾರತ ತಿರಸ್ಕರಿಸಿದ್ದೇಕೆ? ಇಲ್ಲಿದೆ

Indias response arrogant and negative says Imran Khan
Author
Bengaluru, First Published Sep 22, 2018, 4:07 PM IST

ಲಾಹೋರ್(ಸೆ.22): ಪಾಕಿಸ್ತಾನ ನೂತನ ಪ್ರಧಾನಿಯಾಗಿ ಇಮ್ರಾನ್ ಖಾನ್ ಇದೀಗ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಪ್ರಧಾನಿಯಾದ  ಬಳಿಕ ಇದೇ ಮೊದಲ ಬಾರಿಗೆ ಇಮ್ರಾನ್, ಭಾರತದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಭಾರತ  ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ಹಾಗೂ ಉಭಯ ದೇಶಗಳ ನಡುವಿನ ಉತ್ತಮ ಬಾಂಧ್ಯವಕ್ಕೆ ಪಾಕ್ ಪ್ರಧಾನಿ, ಭಾರತ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಕೇಂದ್ರ ಸರ್ಕಾರ ಪಾಕ್ ವಿರುದ್ಧ ಮಾತುಕತೆಯನ್ನ ಸದ್ಯಕ್ಕೆ ತಿರಸ್ಕರಿಸಿದೆ.

ಭಾರತದ ನಿರ್ಧಾರಕ್ಕೆ ಪಾಕ್ ಪ್ರಧಾನಿ ಅಸಮಾಧಾನಗೊಂಡಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಭಾರತದ ಜೊತೆಗಿನ ಉತ್ತಮ ಸಂಬಂಧಕ್ಕೆ ಮಾಕುತಕೆಗೆ ಪತ್ರ ಬರೆದಿದ್ದೆ. ಆದರೆ ಭಾರತದ ನಿರ್ಧಾರ ನಿಜಕ್ಕೂ ಬೇಸರ ತಂದಿದೆ ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

 

 

ಗಡಿಯಲ್ಲಿ ಭಾರತೀಯ ಯೋಧರು ಹಾಗೂ ಪೊಲೀಸರ ಹತ್ಯೆ, ಪಾಕಿಸ್ತಾನ ಪ್ರಾಯೋಜಿತ ಉಗ್ರರ ದಾಳಿಗೆ ತಿರುಗೇಟು ನೀಡಲು ಪಾಕಿಸ್ತಾನ ಜೊತೆಗಿನ ಎಲ್ಲಾ ಮಾತುಕತೆಯನ್ನೂ ಭಾರತ ರದ್ದುಗೊಳಿಸಿದೆ. ಹೀಗಾಗಿ ಇಮ್ರಾನ್ ಖಾನ್ ಮನವಿಯನ್ನ ಭಾರತ ಸರ್ಕಾರ ತಿರಸ್ಕರಿಸಿದೆ.
 

Follow Us:
Download App:
  • android
  • ios