Asianet Suvarna News Asianet Suvarna News

ಎರಡೂ ಕೈಯಿಂದ ಬೌಲಿಂಗ್ ಮಾಡಿ ಸೋಲಿನಲ್ಲೂ ಗಮನ ಸೆಳೆದ ವಿಧರ್ಭ ಸ್ಪಿನ್ನರ್

ಆಸ್ಟ್ರೇಲಿಯಾ ತಂಡ ಅಭ್ಯಾಸ ಪಂದ್ಯದಲ್ಲಿ ಪ್ರೆಸಿಡೆಂಟ್​​​ ಇಲೆವನ್​​​ ವಿರುದ್ಧದ ಭರ್ಜರಿ ಜಯ ದಾಖಲಿಸಿ ಇಂಡಿಯಾ ಟೂರ್​​ ಅನ್ನ ಜಯದಿಂದ ಆರಂಭಿಸಿದೆ. ಆದರೆ ನಿನ್ನೆಯ ನೀರಸ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು ಪ್ರೆಸಿಡೆಂಟ್​​​ ಇಲೆವನ್​​ ತಂಡದ ಬೌಲರ್​​​ ಅಕ್ಷಯ್​​ ಕಾರ್ನೆವಾರ್​​​. ಎರಡೂ ಕೈಗಳಿಂದ ಬೌಲಿಂಗ್​​ ಮಾಡಿದ ಈತ ವಿಶ್ವ ಕ್ರಿಕೆಟ್​​ ಅನ್ನೇ ದಂಗು ಬಡಿಸಿದ್ದ. ಅದೇಗಪ್ಪಾ ಎರಡೂ ಕೈಯಲ್ಲಿ ಬೌಲ್​​ ಮಾಡಿದ ಅಂದುಕೊಳ್ತಿದ್ದೀರಾ.? ಈ ಸ್ಟೋರಿ ನೋಡಿ.

Ambidextrous Akshay Karnewar bowls with both hands against Australia

ಅಭ್ಯಾಸ ಪಂದ್ಯದಲ್ಲಿ ಪ್ರೆಸಿಡೆಂಟ್​​​​ ಇಲೆವನ್​​​​ ವಿರುದ್ಧ ಆಸ್ಟ್ರೇಲಿಯಾ 103 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಯುವ ಬೌಲರ್​​ಗಳನ್ನ ಇನ್ನಿಲ್ಲದಂತೆ ದಂಡಿಸಿದ ಸ್ಮಿತ್​​ ಪಡೆ 347 ರನ್​ಗಳ ಬೃಹತ್​ ಮತ್ತ ಪೇರಿಸಿತು. ನಂತರ ಬೌಲರ್​'ಗಳ ಮ್ಯಾಜಿಕ್​​ ಸ್ಪೆಲ್​'ನಿಂದ ಪ್ರೆಸಿಡೆಂಟ್​​​​​ ಇಲೆವನ್​​​ ಅನ್ನ 244 ರನ್​ಗಳಿಗೆ ಆಲೌಟ್​​ ಮಾಡಿ ಜಯ ಸಾಧಿಸ್ತು.

ಎರಡೂ ಕೈಯಿಂದ ಬೌಲಿಂಗ್​​ ಮಾಡ್ತಾನೆ ವಿದರ್ಭ ಸ್ಪಿನ್ನರ್​​​

ನಿನ್ನೆ ಪ್ರೆಸಿಡೆಂಟ್​​​ ಇಲೆವನ್​ ತಂಡದ ಯುವ ಸ್ಪಿನ್ನರ್​​​ ಅಕ್ಷಯ್​​ ಕಾರ್ನೆವಾರ್​​​ ಆಸೀಸ್​​​ ಬ್ಯಾಟ್ಸ್​​​ಮನ್​ಗಳನ್ನ ಕನ್​ಫ್ಯೂಸ್​​​ ಮಾಡಿಬಿಟ್ಟ. ತನ್ನ ವಿಚಿತ್ರ ಬೌಲಿಂಗ್​​ನಿಂದ ಇಡೀ ವಿಶ್ವದ ಗಮನ ಸೆಳೆದುಬಿಟ್ಟ. ಲೆಷ್ಟ್​​​ ಆರ್ಮ್​ ಮತ್ತು ರೈಟ್​​​ ಆರ್ಮ್​ ಎರಡೂ ಕೈಗಳಿಂದ ಬೌಲಿಂಗ್​ ಮಾಡುವ ಮೂಲಕ ಕ್ರಿಕೆಟ್​​​ ಲೋಕಕ್ಕೆ ಆಶ್ಚರ್ಯ ಪಡಿಸಿದ್ದ.

ವಿದರ್ಭ ತಂಡದ ಆಲ್​ರೌಂಡರ್​​​​ ಅಕ್ಷಯ್​​ ಕಾರ್ನೆವಾರ್​​​ ಎಡಗೈ ಬ್ಯಾಟ್ಸ್​​ಮನ್​ಗೆ ಬೌಲ್​​ ಮಾಡುವಾಗ ಬಲಗೈನಲ್ಲಿ ಬೌಲ್​​ ಮಾಡಿದ್ರೆ, ಬಲಗೈ ಬ್ಯಾಟ್ಸ್​​ಮನ್​'ಗೆ ಎಡಗೈನಲ್ಲಿ ಬೌಲ್​ ಮಾಡ್ತಾನೆ. ಇದರ ಮೂಲಕ ಎದುರಾಳಿ ಬ್ಯಾಟ್ಸ್​​​ಮನ್​​ಗಳಿಗೆ ಕನ್​ಫ್ಯೂಸ್​​ ಮಾಡಿ ವಿಕೆಟ್​​​ಗಳನ್ನ ಪಡಿತಾನೆ.

ಎರಡೂ ಕೈಯಲ್ಲಿ ಬೌಲ್​​ ಮಾಡುವುದು ಅಕ್ಷಯ್​​ ಒಬ್ಬನೇ ಅಲ್ಲ

ಸದ್ಯ ಅಕ್ಷಯ್​​ ಕಾರ್ನೆವಾರ್​​ ಎರಡೂ ಕೈಯಲ್ಲಿ ಬೌಲ್​​​ ಮಾಡಿ ಇಡೀ ಜಗತ್ತನ್ನೇ ಚಕಿತಗೊಳಿಸಿದ್ದಾನೆ. ಆದ್ರೆ ಅಕ್ಷಯ್​​ನಂತೆ ಎರಡೂ ಕೈಯಲ್ಲಿ ಬೌಲ್​​ ಮಾಡೋ ಇಬ್ಬರು ಬೌಲರ್​​ಗಳು ನಮ್ಮ ನೆರೆ ರಾಷ್ಟ್ರವಾದ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿದ್ದಾರೆ.

​ಲಂಕಾ ನಾಡಿದ ಎಡಗೈ ಕಮ್​ ಬಲಗೈ ಬೌಲರ್​​ ಕಮಿಂಡು ಮೆಂಡಿಸ್​​​

ಭಾರತದಲ್ಲಿ ಎರಡೂ ಕೈನಲ್ಲಿ ಬೌಲ್​​ ಮಾಡಿ ಕಮಾಲ್​ ಮಾಡುತ್ತಿರುವಂತೆ ಶ್ರೀಲಂಕಾದಲ್ಲಿ ಕಮಿಂಡು ಮೆಂಡಿಸ್​​​ ಎಲ್ಲರನ್ನ ಆಶ್ಚರ್ಯಚಕಿತಗೊಳಿಸಿದ್ದಾನೆ. ಈಗಾಗಲೇ ಲಂಕಾ ಪರ ಅಂಡರ್​​ 19 ಕ್ರಿಕೆಟ್​​ನಲ್ಲಿ ಕಮಾಲ್​ ಮಾಡುತ್ತಿರುವ ಈತ ಎದುರಾಳಿ ಬ್ಯಾಟ್ಸ್​​ಮನ್​ಗಳನ್ನ ಕಾಡ್ತಿದ್ದಾನೆ.

​ವಿಶ್ವದ ಮೊದಲ ಲೆಫ್ಟ್​​​ ಕಮ್​​ ರೈಟ್​​​ ಆರ್ಮ್​ ಬೌಲರ್​​​ ಯಾಸೀರ್​​ ಜಾನ್​​

ವಿಶ್ವದ ಮೊದಲ ಲೆಫ್ಟ್​​​ ಕಮ್​​ ರೈಟ್​​​ ಆರ್ಮ್​ ಬೌಲರ್​​​ ಕಂಡುಬಂದಿದ್ದೇ ಪಾಕಿಸ್ತಾನದಲ್ಲಿ. ಯಾಸೀರ್​​ ಜಾನ್ ಯಂಬ ಯುವ ಪ್ರತಿಭೆ ಎರಡೂ ಕೈನಲ್ಲಿ ಬೌಲ್​ ಮಾಡಿ ಫುಲ್​​ ಫೇಮಸ್​​ ಆಗಿದ್ದ. ಬಲಗೈನಲ್ಲಿ ಎಷ್ಟು ವೇಗವಾಗಿ ಬೌಲ್​ ಮಾಡ್ತಿದ್ದನೋ ಅಷ್ಟೇ ವೇಗವಾಗಿ ಎಡಗೈನಲ್ಲೂ ಬೌಲಿಂಗ್​ ಮಾಡಿ ಗಮನ ಸೆಳೆದಿದ್ದ.

​​ ಒಟ್ಟಿನಲ್ಲಿ ಕ್ರಿಕೆಟ್​​ ಜಗತ್ತಿನಲ್ಲಿ ವಿಚಿತ್ರ ಬೌಲರ್​'ಗಳು ಹುಟ್ಟಿಕೊಂಡಿದ್ದಾರೆ. ರಾಷ್ಟ್ರೀಯ ತಂಡಕ್ಕೆ ಎಂಟ್ರಿ ಕೊಡಲು ಆತೊರೆಯುತ್ತಿದ್ದಾರೆ. ಈಗಲೇ ಎಷ್ಟೋ ಮಿಸ್ಟರಿ ಬೌಲರ್​ಗಳು ಲೆಜಂಡರಿ  ಬ್ಯಾಟ್ಸ್​ಮನ್​​ಗಳನ್ನ ಇನ್ನಿಲ್ಲದಂತೆ ಕಾಡ್ತಿದ್ದಾರೆ. ಇನ್ನೂ ಇವರುಗಳೂ ಬಂದು ಬಿಟ್ರೆ ಮುಗಿದೇ ಹೊಯ್ತು. ಬ್ಯಾಟ್ಸ್​​ಮನ್​ಗಳ ಆಟ ಅನ್ನೋ ಅಪವಾದ ಹೊತ್ತಿದ್ದ ಕ್ರಿಕೆಟ್​​​ ಮುಂದೊಂದು ದಿನ ಬೌಲರ್​​ಗಳ ಆಟವಾಗಿಬಿಡುತ್ತೆ.

Follow Us:
Download App:
  • android
  • ios