Asianet Suvarna News Asianet Suvarna News

'ಆಫ್ರಿಕಾದಲ್ಲಿ ಶೀಲಾ, ಭಾರತದಲ್ಲಿ ಸಾಲ' ಆಗಿದ್ದೇಕೆ, ವಿಕ್ಟೋರಿಯಾ ಫಾಲ್ಸ್‌ ಮೇಲೆ ಕ್ಯಾಮೆರಾ ಇಟ್ಟಿದ್ರಾ ದ್ವಾರಕೀಶ್!

ದ್ವಾರಕೀಶ್ 27 ಮೇ 1986ರಲ್ಲಿ ಬಿಡುಗಡೆಯಾಗಿದ್ದ 'ಆಫ್ರಿಕಾದಲ್ಲಿ ಶೀಲಾ' ಚಿತ್ರದ ಮೂಲಕ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದರು. ಜಿಂಬಾಬ್ಬೆ ಬಳಿ ಇರುವ ವಿಕ್ಟೋರಿಯಾ ಫಾಲ್ಸ್ ಮೇಲೆ ಕ್ಯಾಮೆರಾವನ್ನಿಟ್ಟು ಶೂಟ್ ಮಾಡಿದ್ದರು ದ್ವಾರ್ಕಿ. ವಿಕ್ಟೋರಿಯಾ ಫಾಲ್ಸ್ ಎಂದರೆ..

Sandalwood producer Dwarakish shoots on Victoria Falls for Africadalli Sheela movie srb
Author
First Published Apr 22, 2024, 4:05 PM IST

ಕನ್ನಡದ ಪ್ರಚಂಡ ಕುಳ್ಳ ದ್ಯಾರಕೀಶ್ (Dwarakish) ಮಾಡಿರುವ ಸಾಹಸಗಳು ಒಂದೆರಡಲ್ಲ. ಹೇಳಲು ಹೊರಟರೆ ಅದೊಂದು ದೊಡ್ಡ ಪಟ್ಟಿಯನ್ನೇ ಬಿಡುಗಡೆ ಮಾಡಬೇಕೇನೋ! ನಟ, ನಿರ್ಮಾಪಕರಾಗಿದ್ದ ದ್ವಾರಕೀಶ್ ಅವರು ನಿರ್ದೇಶಕರಾಗಿಯೂ 20ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದವರು. ತಮ್ಮ 23ನೇ ವಯಸ್ಸಿಗೇ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಲು ತೊಡಗಿದ್ದ ಅವರು ತಮ್ಮ ಪಾಲಿಗೆ ಬಂದ ಯಾವುದೇ ಅವಕಾಶವನ್ನೂ ಮಿಸ್ ಮಾಡಿಕೊಳ್ಳಲಿಲ್ಲ. ನಟರಾಗಿ, ನಿರ್ಮಾಪಕರಾಗಿ ಕೊನೆಗೆ ನಿರ್ದೇಶಕರಾಗಿಯೂ ಚಿತ್ರರಂಗದಲ್ಲಿ ಕೆಲಸ ಮಾಡಿದರು. 

ದ್ವಾರಕೀಶ್ ಅವರು ಬರೋಬ್ಬರಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ನಟನೆಗೆ ಬಹಳಷ್ಟು ಅವಕಾಶಗಳಿದ್ದರೂ ನಿರ್ಮಾಣವನ್ನು ಬಿಡಲಿಲ್ಲ. ಡಾ ರಾಜ್‌ಕುಮಾರ್ ಅವರೊಂದಿಗೆ 20 ಸಿನಿಮಾಗಳಲ್ಲಿ ನಟಿಸಿದ್ದರು ದ್ವಾರಕೀಶ್. ಬರೋಬ್ಬರಿ 50 ಸಿನಿಮಾಗಳನ್ನು ನಿರ್ಮಾಣ ಮಾಡಿ ಕನ್ನಡದ ದೊಡ್ಡ ನಿರ್ಮಾಪಕರು ಎನಿಸಿಕೊಂಡರು ದ್ವಾರಕೀಶ್. ಡಾ ರಾಜ್‌ಕುಮಾರ್ ನಟನೆಯ 'ಮೇಯರ್ ಮುತ್ತಣ್ಣ' ಸಿನಿಮಾ ನಿರ್ಮಿಸಿದಾಗ ದ್ವಾರಕೀಶ್ ಅವರಿಗೆ ಕೇವಲ 27 ವರ್ಷ ವಯಸ್ಸಾಗಿತ್ತು ಎಂದರೆ ಅವರೆಂಥ ಪ್ರಚಂಡ ಕುಳ್ಳರಾಗಿದ್ದರು ಎಂಬುದನ್ನು ಊಹಿಸಬಹುದು. 

ಗೋಕಾಕ್ ಚಳುವಳಿಗೆ ಡಾ ರಾಜ್‌ಕುಮಾರ್ ಧುಮುಕುವಂತೆ ಮಾಡಿದ್ದು ಯಾರೆಂಬ ಗುಟ್ಟು ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್!

ಇಂಥ ದ್ವಾರಕೀಶ್ 27 ಮೇ 1986ರಲ್ಲಿ ಬಿಡುಗಡೆಯಾಗಿದ್ದ 'ಆಫ್ರಿಕಾದಲ್ಲಿ ಶೀಲಾ (Africadalli Sheela) ಚಿತ್ರದ ಮೂಲಕ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದರು. ಜಿಂಬಾಬ್ಬೆ ಬಳಿ ಇರುವ ವಿಕ್ಟೋರಿಯಾ ಫಾಲ್ಸ್ ಮೇಲೆ ಕ್ಯಾಮೆರಾವನ್ನಿಟ್ಟು ಶೂಟ್ ಮಾಡಿದ್ದರು ದ್ವಾರ್ಕಿ. ವಿಕ್ಟೋರಿಯಾ ಫಾಲ್ಸ್ ಎಂದರೆ ಅದು ಅಂತಿಂಥ ಪಾಲ್ಸ್ ಅಲ್ಲ. ನಯಾಗರ ಫಾಲ್ಸ್‌ಗಿಂತ ವಿಶಾಲವಾಗಿರುವಂಥ ಜಲಪಾತ ಅದು.. ಫಾಲ್ಸ್ ಮೇಲೆ ನಿಂತು ಆ ಥರದ ರಿಸ್ಕಿ ಶಾಟ್ ತೆಗೆದುಕೊಳ್ಳೋದಕ್ಕೆ ಯಾರಿಗಾದರೂ ಭಯವಾಗುತ್ತೆ.. ಆದ್ರೆ, ಆಗಿನ ಕಾಲಕ್ಕೆ ಇಂಪೋರ್ಟೆಡ್ ಕ್ಯಾಮೆರಾ ಮೂಲಕವೇ ಆ ಸೀನ್ ಶೂಟ್ ಮಾಡಲಾಗಿತ್ತು. 

ಅಯ್ಯೋ, ಸ್ಟಾರ್ ಹೀರೋಯಿನ್ ಆದ್ರೂ ರಶ್ಮಿಕಾ ಮಂದಣ್ಣ ಅಮ್ಮನ ಬಳಿ ಇದನ್ನು ಕೇಳೋದು ಮಾತ್ರ ಬಿಟ್ಟಿಲ್ವಂತೆ!

ಆದರೆ, ದ್ವಾರಕೀಶ್ ಕನಸಿನ ಕೂಸು 'ಆಫ್ರಿಕಾದಲ್ಲಿ ಶೀಲಾ ಚಿತ್ರವು ಅಂದುಕೊಂಡಷ್ಟು ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. ಆಫ್ರಿಕಾ, ಕೀನ್ಯಾ ಹಾಗೂ ಕೆಲವು ಸೀನ್‌ಗಳನ್ನು ಕರ್ನಾಟಕದ ಬಂಡೀಪುರ ಹಾಗೂ ತಿರುಪತಿಗಳಲ್ಲಿ ಶೂಟ್ ಮಾಡಲಾಗಿದ್ದ 'ಆಫ್ರಿಕಾದಲ್ಲಿ ಶೀಲಾ' ಚಿತ್ರವು ಕಥೆಯ ಕಾರಣಕ್ಕೆ ಸೋತುಹೋಯಿತು ಎನ್ನಲಾಗುತ್ತದೆ.

ವಿಷ್ಣು ಸೇನೆ ಬಗ್ಗೆ ಅಂದು ಹರಡಿತ್ತು ಕುಹಕದ ಮಾತು, ನಟ ವಿಷ್ಣುವರ್ಧನ್ ಏನಂದಿದ್ರು?

ಒಟ್ಟಿನಲ್ಲಿ ಅಂದಿನ ಕಾಲದಲ್ಲಿ ಬಿಗ್ ಬಜೆಟ್ ಚಿತ್ರವಾಗಿದ್ದ ಆಫ್ರಿಕಾದಲ್ಲಿ ಶೀಲ, ದ್ವಾರಕೀಶ್ ಅವರನ್ನು ಅಕ್ಷರಶಃ ಸಾಲದಲ್ಲಿ ಮುಳುಗಿಸಿಬಿಟ್ಟಿತು ಎನ್ನಲಾಗಿದೆ. ಅಂದು ಎದುರಿಗೆ ಸಿಕ್ಕವರಿಗೆ ಸ್ವತಃ ದ್ವಾರಕೀಶ್ ಅವರೇ 'ಆಫ್ರಿಕಾದಲ್ಲಿ ಶೀಲಾ, ಭಾರತದಲ್ಲಿ ಸಾಲ' ಎಂದು ಹೇಳಿಕೊಂಡು ನಗುತ್ತಿದ್ದರಂತೆ!

Follow Us:
Download App:
  • android
  • ios