‘ಕೆಜಿಎಫ್ 2’ ಚಿತ್ರದ ತಾರಾಬಳಗ ದೊಡ್ಡದಾಗುತ್ತಿದೆ. ರವೀನಾ ಟಂಡನ್ ‘ಕೆಜಿಎಫ್ 2’ ಗೆ ಎಂಟ್ರಿ ಆಗಿದ್ದಾರೆ. ಅಲ್ಲದೇ, ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಬಂದಿರುವ ರವೀನಾ ಟಂಡನ್ ಅವರನ್ನು ನಟ ಯಶ್ ವಿಶೇಷವಾಗಿ ಬರಮಾಡಿಕೊಂಡಿದ್ದಾರೆ.
ರವೀನಾ ಅವರನ್ನು ಸ್ವಾಗತ ಕೋರಿದ ಫೋಟೋವನ್ನು ಯಶ್ ಸೋಷಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ರಾಕಿ ಭಾಯ್ ಟೆರಿಟರಿಯೊಳಗೆ ರಮಿಕಾ ಸೇನ್‌ಗೆ ಸ್ವಾಗತ ಸಿಗದೇ ಇರಬಹುದು. ಆದರೆ ರವೀನಾ ಮೇಡಮ್ ಅವರನ್ನು ಯಶ್ ಹೋಮ್‌ಟೌನ್‌ಗೆ ಸ್ವಾಗತಿಸುತ್ತಿದ್ದೇವೆ. ನೀವು ನಮ್ಮ ಸಿನಿಮಾ ತಂಡದ ಭಾಗವಾಗಿರುವುದಕ್ಕೆ ಖುಷಿ ಆಗುತ್ತಿದೆ. ಲೆಟ್ಸ್ ಹ್ಯಾವ್ ಎ ಬ್ಲಾಸ್ಟ್’ ಎಂದು ಯಶ್ ಬರೆದುಕೊಂಡಿದ್ದಾರೆ.
ರವೀನಾ ಟಂಡನ್ ಪ್ರಧಾನಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಆ ಪಾತ್ರದ ಹೆಸರು ರಮಿಕಾ ಸೇನ್.
"
