Asianet Suvarna News Asianet Suvarna News

ಲೋಕಲ್‌ ಶಾಪ್‌ನಲ್ಲಿ 25 ಸಾವಿರ ವೇತನ, 'ಟಿಸಿಎಸ್‌ ಕೆಲ್ಸಕ್ಕೆ ರಿಸೈನ್‌ ಮಾಡೋದೇ ಬೆಸ್ಟ್‌' ಎಂದ ನೆಟ್ಟಿಗರು!

ಮೊಮೊಸ್ ಮಾರುವ ಶಾಪ್‌ ಒಂದರಲ್ಲಿ ಹಾಕಿರುವ ಜಾಬ್ ಆಫರ್‌ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್‌ ಆಗಿದೆ.   X ನಲ್ಲಿ ಯುವತಿಯೊಬ್ಬರು ಈ ಫೋಟೋ ಹಾಕಿದ್ದು, ಸಾಮಾಜಿಕ ಜಾಲತಾದಲ್ಲಿ ಬಿರುಗಾಳಿ ಎಬ್ಬಿಸಿದೆ.

Momo eatery offers for helper job internet says  paying better than TCS gow
Author
First Published Apr 10, 2024, 3:51 PM IST

ಮೋಮೋಸ್ ಮಾರುವ ಶಾಪ್‌ ಒಂದರಲ್ಲಿ ಹಾಕಿರುವ ಜಾಬ್ ಆಫರ್‌ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್‌ ಆಗಿದೆ.   ಎಕ್ಸ್ (ಟ್ವಿಟ್ಟರ್) ನಲ್ಲಿ ಯುವತಿಯೊಬ್ಬರು ಈ ಫೋಟೋ ಹಾಕಿದ್ದು, ಸಾಮಾಜಿಕ ಜಾಲತಾದಲ್ಲಿ ಬಿರುಗಾಳಿ ಎಬ್ಬಿಸಿದೆ. ಏಕೆಂದರೆ ಮೋಮೋ ಶಾಪ್‌ ನಲ್ಲಿ ಕೆಲಸಕ್ಕೆ ಸೇರಿದ ವ್ಯಕ್ತಿಗೆ ನೀಡುವ ವೇತನವು  25,000 ರೂ ಆಗಿದೆ. ಇದು ಅನೇಕ ಐಟಿ ಕಂಪನಿಗಳು ಪ್ರೆಶರ್‌ಗಳಿಗೆ ನೀಡುವ  ವೇತನಕ್ಕಿಂತ ಹೆಚ್ಚಿದೆ. 

ಯುವತಿಯೊಬ್ಬರು ಈ ಫೋಸ್ಟರ್ ಹಂಚಿಕೊಂಡಿದ್ದು,  ಈ ದಿನಗಳಲ್ಲಿ ಈ ಸ್ಥಳೀಯ ಮೊಮೊ ಅಂಗಡಿಯು ಭಾರತದಲ್ಲಿನ ಸರಾಸರಿ ಕಾಲೇಜಿಗಿಂತ ಉತ್ತಮವಾದ ಪ್ಯಾಕೇಜ್ ಅನ್ನು ನೀಡುತ್ತಿದೆ ಎಂದು ಬರೆದುಕೊಂಡಿದ್ದಾರೆ

ಉದ್ಯೋಗಾಕಾಂಕ್ಷಿಗಳು ಸಾಮಾನ್ಯವಾಗಿ ಅತ್ಯಲ್ಪ ಸಂಬಳ ಪಡೆದು ಜಟಿಲವಾದ ಮತ್ತು ಭಯದ ಆರ್ಥಿಕ ಹೊರೆಯನ್ನು ಇಟ್ಟುಕೊಂಡಿರುವ ಈ ಕಾಲದಲ್ಲಿ momos ಅಂಗಡಿಯಲ್ಲಿ ರೂ 25,000 ಗಳಿಸುವ ನಿರೀಕ್ಷೆಯು ಸಾಮಾಜಿಕ ಜಾಲತಾಣದ  ಬಳಕೆದಾರರನ್ನು ಆಶ್ಚರ್ಯಗೊಳಿಸಿದೆ. ಅನೇಕ ಮಂದಿ ತಾವು ಅರ್ಜಿ ಸಲ್ಲಿಸುವುದಾಗಿ ತಮಾಷೆಯಾಗಿ ಹೇಳಿದ್ದಾರೆ. ಇನ್ನು ಕೆಲವರು  ವೇತನದ ಹೊರತಾಗಿಯೂ ಕೆಲಸವು ಸುಲಭವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಆನ್‌ಲೈನ್ ಸಮುದಾಯದ ಪ್ರತಿಕ್ರಿಯೆಯು ವಿಭಿನ್ನವಾಗಿದೆ, ಕೆಲವು ಬಳಕೆದಾರರು  ಆಕರ್ಷಕ ವೇತನದ ಹೊರತಾಗಿಯೂ ಕೆಲಸದ ಬೇಡಿಕೆಯ ಸ್ವರೂಪದ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ. ಇಂಜಿನಿಯರ್ ಗಳ ಸಂಬಳವು ವರ್ಷಗಳು ಉರುಳಿದಂತೆ ಹೆಚ್ಚಾಗುತ್ತದೆ, ಇಲ್ಲಿ ಅದು ಆಗುವುದಿಲ್ಲ ಎಂದು ಒಬ್ಬರು ಬರೆದುಕೊಂಡಿದ್ದಾರೆ.

ಇನ್ನೊಬ್ಬ ಬಳಕೆದಾರನು ಕೆಲಸದ ಸವಾಲುಗಳನ್ನು ವಿವರಿಸಿ, ದೀರ್ಘಾವಧಿಯ ಸಮಯ ಮತ್ತು ದೈಹಿಕ ಕಷ್ಟದ ಬಗ್ಗೆ ವಿವರಿಸಿದ್ದಾರೆ. ಕೆಲಸದ ಸಮಯಗಳು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ರವರೆಗೆ + ಕಾಲುಗಳ ಮೇಲೆ ಇಡೀ ದಿನ + ಪಾವತಿಸಿದ ರಜೆಯಿಲ್ಲ + ವಿಮೆ ಇಲ್ಲ. ಸರಾಸರಿ ಕಾಲೇಜು ವಿದ್ಯಾರ್ಥಿಗಳು ಒಂದು ಸ್ಥಳದಲ್ಲಿ ಕುಳಿತು ಕೇವಲ 3 ಗಂಟೆಗಳ ಕಾಲ ಅಧ್ಯಯನ ಮಾಡಬಹುದು. ಅವರು 13 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ.

ಮತ್ತೊಬ್ಬರು TCS ಗಿಂತ ಉತ್ತಮವಾಗಿ ಪಾವತಿಸುತ್ತಿದ್ದಾರೆ ಎಂದು  ವ್ಯಂಗ್ಯವಾಡಿದ್ದರೆ, ಮಗದೊಬ್ಬ ಟ್ವಿಟ್ಟರ್ ಬಳಕೆದಾರರು ಕುತೂಹಲದಿಂದ  ಭಾರತವು ತಿಳಿಯಲು ಬಯಸುತ್ತದೆ. ಅದು ಎಲ್ಲಿದೆ? ಎಂದಿದ್ದಾರೆ.

 

Follow Us:
Download App:
  • android
  • ios