Asianet Suvarna News Asianet Suvarna News

ಎಲೆಕ್ಷನ್‌ ಬಳಿಕ ಕೂಡ ಗ್ಯಾರಂಟಿ ಇರುತ್ತೆ: ಸಿದ್ದರಾಮಯ್ಯ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 43%ರಷ್ಟು ಮತಗಳಿಸಿ 136 ಸ್ಥಾನ ಗೆದ್ದಿದೆ. ಅಧಿಕಾರದಲ್ಲಿದ್ದ ಬಿಜೆಪಿ 66 ಸ್ಥಾನ, ಜಾತ್ಯತೀತ ಎಂದು ಹೇಳುವ ಜೆಡಿಎಸ್ ನವರು ಕೇವಲ 19 ಸ್ಥಾನಗಳಲ್ಲಿ ಗೆದ್ದಿದ್ದಾರೆ. ತಾವು ಸೋಲುವುದು ಗ್ಯಾರಂಟಿ ಎಂದು ಭಯಗೊಂಡು ಮೈತ್ರಿ ಮೂಲಕ ಒಗ್ಗೂಡಿ, ಕಾಂಗ್ರೆಸ್‌ ನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ 

There will be Guarantee even after the Lok Sabha Election 2024  Says CM Siddaramaiah grg
Author
First Published Apr 13, 2024, 4:33 AM IST

ಕೊಳ್ಳೇಗಾಲ(ಏ.13):  ಜನಸಾಮಾನ್ಯರ ಒಳಿತಿಗಾಗಿ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ಕಂಡು ಸೋಲುವ ಭೀತಿಯಿಂದ ಬಿಜೆಪಿ ಹಾಗೂ ಜೆಡಿಎಸ್‌ನವರು ಮೈತ್ರಿ ಮಾಡಿಕೊಂಡಿದ್ದಾರೆ. ಸೋಲುವ ಭೀತಿಯಿಂದಲೇ ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ಇರಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿಗಳು ಯಾವ ಕಾರಣಕ್ಕೂ ನಿಲ್ಲಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಶುಕ್ರವಾರ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ- ಜೆಡಿಎಸ್‌ಗೆ ಸಿದ್ಧಾಂತವಿಲ್ಲ, ಕಾರ್ಯಕ್ರಮವೂ ಇಲ್ಲ. ಅಧಿಕಾರದಲ್ಲಿದ್ದಾಗ ಜನಪರ ಯೋಜನೆ ಜಾರಿಗೊಳಿಸಲಿಲ್ಲ. ನಾವು ಗ್ಯಾರಂಟಿ ಮೂಲಕ ಬಡವರು, ಜನಸಾಮಾನ್ಯರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಗ್ಯಾರಂಟಿ ಕಾರ್ಡ್‌ ಹರಿದು ಕಾಂಗ್ರೆಸ್ಸಿಗರ ಮುಖಕ್ಕೆಸೆಯಿರಿ: ಬಸವರಾಜ ಬೊಮ್ಮಾಯಿ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 43%ರಷ್ಟು ಮತಗಳಿಸಿ 136 ಸ್ಥಾನ ಗೆದ್ದಿದೆ. ಅಧಿಕಾರದಲ್ಲಿದ್ದ ಬಿಜೆಪಿ 66 ಸ್ಥಾನ, ಜಾತ್ಯತೀತ ಎಂದು ಹೇಳುವ ಜೆಡಿಎಸ್ ನವರು ಕೇವಲ 19 ಸ್ಥಾನಗಳಲ್ಲಿ ಗೆದ್ದಿದ್ದಾರೆ. ತಾವು ಸೋಲುವುದು ಗ್ಯಾರಂಟಿ ಎಂದು ಭಯಗೊಂಡು ಮೈತ್ರಿ ಮೂಲಕ ಒಗ್ಗೂಡಿ, ಕಾಂಗ್ರೆಸ್‌ ನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಿದ್ಧಾಂತವಿಲ್ಲ, ಯಾವುದೇ ಕಾರ್ಯಕ್ರಮವೂ ಇಲ್ಲ, ಕಾಂಗ್ರೆಸ್ ಸೋಲಿಸುವ ಗುರಿ ಮಾತ್ರ ಅವರದ್ದು. ಅವರು ಅಧಿಕಾರದಲ್ಲಿದ್ದಾಗ ಬಡವರು, ರೈತರು, ದಲಿತರು, ಮಹಿಳೆಯರು, ಹಿಂದುಳಿದವರು, ಅಲ್ಪಸಂಖ್ಯಾತರಿಗಾಗಿ ಯಾವುದೇ ಜನಪರ ಯೋಜನೆಗಳನ್ನು ಜಾರಿಗೊಳಿಸಲ್ಲ. ಆದರೆ, ನಾವು ಗ್ಯಾರಂಟಿ ಮೂಲಕ ಬಡವರ, ಜನಸಾಮಾನ್ಯರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದೇವೆ ಎಂದರು.

Follow Us:
Download App:
  • android
  • ios