Asianet Suvarna News Asianet Suvarna News

ಅಭಿವೃದ್ಧಿ ಕುರಿತು ಮೋದಿ ಮತ ಕೇಳಲಿ: ಪ್ರಿಯಾಂಕಾ ಗಾಂಧಿ

ಶಿಕ್ಷಣ, ನಿರುದ್ಯೋಗ, ಬೆಲೆ ಏರಿಕೆ, ಹೆಣ್ಣುಮಕ್ಕಳ ಸಬಲೀಕರಣ ವಿಚಾರವಾಗಿ ಮೋದಿ ಮಾತನಾಡಲಿ. ದೇಶದಲ್ಲಿ ದೊಡ್ಡ ಸಮಸ್ಯೆಗಳಿವೆ. ಅದನ್ನು ಬಿಟ್ಟು ಸಣ್ಣ ಮಟ್ಟದ ಮಾತನಾಡುತ್ತಾ, ದಿನವಿಡೀ ಸುಳು ಹೇಳುತ್ತಾ ಚುನಾವಣೆ ಎದುರಿಸುತ್ತಿದ್ದಾರೆ. ಅವರು ದೇಶದ, ಜನರ ಸಮಸ್ಯೆಯನ್ನು ಮುಂದಿಟ್ಟು ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದ ಪ್ರಿಯಾಂಕಾ ಗಾಂಧಿ 

Let PM Narendra Modi Asked Vote on Development Says Priyanka Gandhi grg
Author
First Published Apr 24, 2024, 10:36 AM IST

ಬೆಂಗಳೂರು(ಏ.24):  ನರೇಂದ್ರ ಮೋದಿ ಅವರು ಚುನಾವಣೆ ಬಂದಾಗಲೆಲ್ಲ ಧರ್ಮ ಸೇರಿದಂತೆ ಜನರ ಭಾವನಾತ್ಮಕ ವಿಚಾರಗಳ ಬಗೆ ಮಾತನಾಡುತ್ತಾರೆ. ಆದರೆ, ಜನರ ಮೂಲ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದರು.

ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಶಿಕ್ಷಣ, ನಿರುದ್ಯೋಗ, ಬೆಲೆ ಏರಿಕೆ, ಹೆಣ್ಣುಮಕ್ಕಳ ಸಬಲೀಕರಣ ವಿಚಾರವಾಗಿ ಮೋದಿ ಮಾತನಾಡಲಿ. ದೇಶದಲ್ಲಿ ದೊಡ್ಡ ಸಮಸ್ಯೆಗಳಿವೆ. ಅದನ್ನು ಬಿಟ್ಟು ಸಣ್ಣ ಮಟ್ಟದ ಮಾತನಾಡುತ್ತಾ, ದಿನವಿಡೀ ಸುಳು ಹೇಳುತ್ತಾ ಚುನಾವಣೆ ಎದುರಿಸುತ್ತಿದ್ದಾರೆ. ಅವರು ದೇಶದ, ಜನರ ಸಮಸ್ಯೆಯನ್ನು ಮುಂದಿಟ್ಟು ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು.

ಅಮೇಠಿಯಲ್ಲಿ ರಾಹುಲ್‌ ಗಾಂಧಿ ಮನೆ ನವೀಕರಣ: ಸ್ಪರ್ಧೆ ಖಚಿತ?

ಚುನಾವಣಾ ಬಾಂಡ್ ವಸೂಲಿ ಸ್ಕೀಂ:

ಖಾಸಗಿ ಸಂಸ್ಥೆ, ವ್ಯಕ್ತಿಗಳಿಂದ ರಾಜಕೀಯ ಪಕ್ಷಗಳು ಪಡೆಯುವ ನಿಧಿಯನ್ನು ಚುನಾವಣಾ ಮೂಲಕ ಪಡೆಯುವ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಆದರೆ, ಸುಪ್ರೀಂಕೊರ್ಟ್ ಅದನ್ನು ಸ್ಥಗಿತಗೊಳಿಸಿತು. ಬಿಜೆಪಿ ಸರ್ಕಾರ ಜಾರಿಗೆ ತಂದ ಈ ಚುನಾವಣಾ ಬಾಂಡ್ ಚಂದಾ ಸ್ವೀಕರಿಸುವ ಯೋಜನೆಯಲ್ಲ. ಬದಲಿಗೆ

ಕಾಂಗ್ರೆಸ್ ಸಮಾವೇಶದಲ್ಲಿ ಪ್ರಿಯಾಂಕಾ

ಕಪ್ಪು ಹಣವನ್ನು ಸಕ್ರಮಗೊಳಿಸುವುದಕ್ಕೆ, ಅಕ್ರಮ ಸಂಸ್ಥೆ, ವ್ಯಕ್ತಿಗಳಿಂದ ವಸೂಲಿ ಮಾಡುವ ಯೋಜನೆಯಾಗಿದೆ. ಬಿಜೆಪಿ ಮಾಡಿದ ಭ್ರಷ್ಟಾಚಾರದಲ್ಲಿ ಇದೂ ಒಂದು ಎಂದು ಪ್ರಿಯಾಂಕಾ ಗಾಂಧಿ ಕಿಡಿಕಾರಿದರು. 
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ಕೇಂದ್ರದ ಮಾಜಿ ಸಚಿವ ರೆಹಮಾನ್ ಖಾನ್, ಡಿಸಿಎಂ ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಜಮೀರ್ ಅಹಮದ್ ಖಾನ್, ಕೆ.ಜೆ. ಜಾರ್ಜ್, ಶಾಸಕರಾದ ಪ್ರಿಯಕೃಷ್ಣ, ಎ.ಸಿ. ಶ್ರೀನಿವಾಸ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಪ್ರಮುಖರಾದ ಉಗ್ರಪ್ಪ, ಉಮಾಪತಿ ಗೌಡ, ವಿ.ಆರ್. ಸುದರ್ಶನ್, ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್, ತಮಿಳುನಾಡು ಶಾಸಕ ರಾಮಚಂದ್ರ ಇತರರಿದ್ದರು.

Follow Us:
Download App:
  • android
  • ios