ರೈಲು ಸಂಚಾರ ಇದ್ದಿದ್ರೆ ದೆಹಲಿಗೆ ಹೋಗಿ ಪ್ರತಿಭಟಿಸ್ತಿದ್ದೆ ಎಂದು ದೇವೇಗೌಡ

ಲಾಕ್‌ಡೌನ್ ಮಧ್ಯೆ ಕೇಂದ್ರ ಸರ್ಕಾರ ನಡೆಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಗರಂ ಆಗಿದ್ದಾರೆ.

JDS Supremo HD Devegowda expresses disappointment On Narendra Modi Govt

ಹಾಸನ, (ಏ.21): ಈ ಸಂದರ್ಭದಲ್ಲಿ ರೈತರ ಕುರಿತು ಕೇಂದ್ರ ಸರ್ಕಾರದ ಕೆಲವು ನೀತಿಗಳ ಬಗ್ಗೆ ಹೋರಾಟ ಅವಶ್ಯಕ. ರೈಲಿನ ಸಂಚಾರ ಇದ್ದಿದ್ದರೆ ನಾನೇ ರೈತರನ್ನು ದೆಹಲಿಗೆ ಕರೆದುಕೊಂಡು ಹೋಗಿ ಹೋರಾಟ ಮಾಡುತ್ತಿದ್ದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಗುಡುಗಿದ್ದಾರೆ.

ಇಂದು (ಸೋಮವಾರ) ಹಾಸನದಲ್ಲಿ ಮಾತನಾಡಿದ ದೇವೇಗೌಡರು, ಈ ಲಾಕ್‌ಡೌನ್ ಮಧ್ಯೆ ರೈತರು ಬೆಳೆದ ಬೆಳೆ ಕೊಳ್ಳುವವರಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಮತ್ತೊಮ್ಮೆ ಸರ್ಕಾರದೊಂದಿಗೆ ಚರ್ಚಿಸುತ್ತೇನೆ. ಈಗಾಗಲೇ ಅನೇಕ‌ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದರು.

ಪ್ರಧಾನಿಗಳಿಗೆ ನಮ್ಮ ಬೆಂಬಲ ಎಂದ ದೇವೇಗೌಡ್ರು, ಆದ್ರೂ ಮೋದಿ ಮೇಲೆ ಮುನಿಸಿಕೊಂಡ್ರು..!

ಈ ಸಂದರ್ಭದಲ್ಲಿ ಬಡವರು ಹಾಗೂ ರೈತರನ್ನ ಉಳಿಸಬೇಕಾದದ್ದು ಸರ್ಕಾರದ ಜವಾಬ್ದಾರಿ. ರೈತರು ಬೆಳೆದ ತರಕಾರಿಗಳನ್ನು ಬೇಡಿಕೆ ಇದ್ದಲ್ಲಿಗೆ ಕಳಿಸುವ ಪ್ರಯತ್ನ ಮಾಡಬೇಕು. ಅನೇಕ ರಾಜಕೀಯ ಮುಖಂಡರು, ಸ್ವಯಂ ಸೇವಾ ಸಂಸ್ಥೆಗಳು ಈ ಕೆಲಸ ಮಾಡುತ್ತಿದ್ದಾರೆ. ಆದ್ರೆ ಈ ಬಗ್ಗೆ ಸರ್ಕಾರವೂ ಗಮನಹರಿಸಬೇಕಿದೆ ಎಂದು ಆಗ್ರಹಿಸಿದರು. 

ರೈತರ ಕುರಿತು ಕೇಂದ್ರ ಸರ್ಕಾರದ ಕೆಲವು ನೀತಿಗಳ ಬಗ್ಗೆ ಹೋರಾಟ ಅವಶ್ಯಕ. ರೈಲಿನ ಸಂಚಾರ ಇದ್ದಿದ್ದರೆ ನಾನೇ ರೈತರನ್ನು ದೆಹಲಿಗೆ ಕರೆದುಕೊಂಡು ಹೋಗಿ ಹೋರಾಟ ಮಾಡುತ್ತಿದ್ದೆ. ಈ ಹಿಂದೆಯೂ ಇದೇ ರೀತಿ ಹೋರಾಟ ಮಾಡಿದ್ದೇನೆ. ಈಗಲೂ ಮಾಡಲು ತೊಂದರೆ ಇಲ್ಲ. ರೈಲು ಸಂಚಾರ ಪ್ರಾರಂಭವಾದರೆ ಹೋರಾಟ ಮಾಡುತ್ತೇನೆ ಎಂದರು.

Latest Videos
Follow Us:
Download App:
  • android
  • ios