Asianet Suvarna News Asianet Suvarna News

ಮತದಾರರಿಗೆ ಉಚಿತ ಕೊಡುಗೆ ನೀಡಲು ಯೋಜನೆ: ಡಿಕೆಸು ವಿರುದ್ಧ ಗೌಡ ದೂರು, ಕ್ರಮಕ್ಕೆ ಆಯೋಗ ಸೂಚನೆ

ಕರ್ನಾಟಕ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದಿರುವ ಆಯೋಗ, ‘ಚುನಾವಣಾ ನೀತಿ ಸಂಹಿತೆ ನಿಯಮಗಳು ಮತ್ತು ಇತರೆ ಸೂಕ್ತ ಕಾನೂನುಗಳನ್ನು ಗಮನದಲ್ಲಿಟ್ಟುಕೊಂಡು ದೂರಿನ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಂಡ ಬಗ್ಗೆ ಶೀಘ್ರ ಮಾಹಿತಿ ರವಾನಿಸಬೇಕು’ ಎಂದು ಸೂಚಿಸಿದೆ. ದೇವೇಗೌಡ ಅವರು ಸಲ್ಲಿಸಿದ ದೂರು ಆಧರಿಸಿ ಚುನಾವಣಾ ಆಯೋಗ ಮಾ.21ರಂದೇ ಈ ಆದೇಶ ಹೊರಡಿಸಿದೆ.

HD Devegowda Complaint to Central Election Commission against Congress MP DK Suresh grg
Author
First Published Mar 27, 2024, 10:32 AM IST

ನವದೆಹಲಿ(ಮಾ.27):  ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್‌ ಅವರು ಮತದಾರರಿಗೆ ಕುಕ್ಕರ್‌ ಸೇರಿದಂತೆ ಉಚಿತ ಕೊಡುಗೆ ನೀಡಲು ಯೋಜಿಸಿದ್ದಾರೆ ಮತ್ತು ಈ ಬಗ್ಗೆ ದೂರು ನೀಡಿದರೂ ಚುನಾವಣಾ ಅಧಿಕಾರಿಗಳು ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂಬ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ದೂರಿನ ಕುರಿತು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ.

ಈ ಕುರಿತು ಕರ್ನಾಟಕ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದಿರುವ ಆಯೋಗ, ‘ಚುನಾವಣಾ ನೀತಿ ಸಂಹಿತೆ ನಿಯಮಗಳು ಮತ್ತು ಇತರೆ ಸೂಕ್ತ ಕಾನೂನುಗಳನ್ನು ಗಮನದಲ್ಲಿಟ್ಟುಕೊಂಡು ದೂರಿನ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಂಡ ಬಗ್ಗೆ ಶೀಘ್ರ ಮಾಹಿತಿ ರವಾನಿಸಬೇಕು’ ಎಂದು ಸೂಚಿಸಿದೆ. ದೇವೇಗೌಡ ಅವರು ಸಲ್ಲಿಸಿದ ದೂರು ಆಧರಿಸಿ ಚುನಾವಣಾ ಆಯೋಗ ಮಾ.21ರಂದೇ ಈ ಆದೇಶ ಹೊರಡಿಸಿದೆ.

ಕಾಂಗ್ರೆಸ್‌ ಇಲ್ಲದಿದ್ದರೆ ದೇವೇಗೌಡರನ್ನು ದೇಶ ನೆನೆಸಿಕೊಳ್ತಿರಲಿಲ್ಲ: ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಸುರೇಶ್‌ ಅವರು ಮತದಾರರಿಗೆ ಉಚಿತ ಕೊಡುಗೆಗಳನ್ನು ಹಂಚಲು ಸಿದ್ದರಾಗಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಚುನಾವಣಾ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಅವರು ಅಕ್ರಮ ಚಟುವಟಿಕೆ ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ. ವಿಷಯ ಬೆಳಕಿಗೆ ಬಂದ ಬಳಿಕ ಉಚಿತ ಕೊಡುಗೆಗಳನ್ನು ಗೋಡೌನ್‌ಗಳಿಂದ ಬೇರೆ ಕಡೆಗೆ ಸಾಗಿಸಲಾಗಿದೆ. ಈ ವಿಷಯದಲ್ಲಿ ಕರ್ತವ್ಯಲೋಪ ಆಗಿರುವುದು ಮಾತ್ರವಲ್ಲದೇ ಅಧಿಕಾರಿಗಳು, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸೋದರರೂ ಆಗಿರುವ ಸಂಸದರ ವಿರುದ್ಧ ಕ್ರಮ ಕೈಗೊಳ್ಳಲು ಅಂಜುತ್ತಿದ್ದಾರೆ’ ಎಂದು ದೇವೇಗೌಡರು ದೂರು ಸಲ್ಲಿಸಿದ್ದರು.

Follow Us:
Download App:
  • android
  • ios