Asianet Suvarna News Asianet Suvarna News

ಕರ್ನಾಟಕ ಲೂಟಿ ಆಗೋದನ್ನು ತಪ್ಪಿಸಲೆಂದೇ ಮೊದಿಯೊಂದಿಗೆ ಹೋಗಲು ಕುಮಾರಸ್ವಾಮಿಗೆ ಹೇಳಿದೆ: ಹೆಚ್.ಡಿ.ದೇವೇಗೌಡ

ರಾಜ್ಯವನ್ನು ಲೂಟಿ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದಲೇ ನೀನು ಮೋದಿ ಅವರೊಂದಿಗೆ ಹೋಗು ಎಂದು ಕುಮಾರಸ್ವಾಮಿಗೆ ಹೇಳಿ ಕಳಿಸಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹೇಳಿದರು.

HD Deve gowda told to Kumaraswamy you go with Modi to avoid Karnataka state loot from Congress sat
Author
First Published Apr 14, 2024, 6:02 PM IST

ಮೈಸೂರು (ಏ.14): ನನ್ನ ತಲೆಯಲ್ಲಿ ಬುದ್ಧಿ ಇಲ್ಲದೇನೇ ಕುಮಾರಸ್ವಾಮಿಯನ್ನು ನೀನು ಮೋದಿ ಜೊತೆಗೆ ಹೋಗು ಅಂತ ಹೇಳಿಲ್ಲ. ಈ ರಾಜ್ಯವನ್ನು ಲೂಟಿ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದಲೇ ನೀನು ಮೋದಿ ಅವರೊಂದಿಗೆ ಹೋಗು ಎಂದು ಹೇಳಿದ್ದೇನೆ ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಹೇಳಿದರು.
ಮೈಸೂರಿನಲ್ಲಿ ಭಾನುವಾರ ನಡೆದ ಬಿಜೆಪಿ-ಜೆಡಿಎಸ್ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ 10 ವರ್ಷ ಪ್ರಧಾನಮಂತ್ರಿಯಾಗಿ ರಾಷ್ಟ್ರಕ್ಕೆ ಗೌರವ ತಂದುಕೊಟ್ಟ ವ್ಯಕ್ತಿ ಯಾರಾದರೂ ಇದ್ದಾರೆಂದರೆ ಅದು ನರೇಂದ್ರ ಮೋದಿ ಅವರು. ಪ್ರಧಾನಿ ಮೋದಿಗೆ ನಾನು ಎದ್ದು ನಿಂತು ಗೌರವ ಕೊಡಬೇಕು ಅಂತ ಇದ್ದೆ. ಮಂಡಿ ನೋವಿದೆ ಹಾಗಾಗಿ ಆಗಿಲ್ಲ. ಕ್ಷಮಿಸಿಬೇಕು ಮೋದಿಯವರು. ಇಡೀ ರಾಜ್ಯದಲ್ಲಿ ಜೆಡಿಎಸ್‌ ಕುಮಾರಸ್ವಾಮಿ ಅವರ ಪಂಚರತ್ನ ಕಾರ್ಯಕ್ರಮವನ್ನು ಯಶಸ್ವಿ ಮಾಡಿದ್ದರು. ಆದರೆ, ಮತದಾನಕ್ಕೂ ಮುನ್ನ ಒಂದೆರಡು ದಿನಗಳ ಮುಂಚೆ ಮಹಿಳೆಯರಿಗೆ 2,000 ರೂ. ಗ್ಯಾರಂಟಿ ಕೊಡ್ತೇವೆ ಎಂದು 5 ಗ್ಯಾರಂಟಿಗಳನ್ನು ಕೊಟ್ಟು ರಾಜ್ಯದಲ್ಲಿ 136 ಸ್ಥಾನಗಳನ್ನು ಗೆದ್ದಂತಹ ಎರಡು ಮಹನೀಯರು ಇದ್ದಾರೆ ಎಂದು ವ್ಯಂಗ್ಯವಾಡಿದರು.

ಮೋದಿ, ಅಮಿತ್ ಶಾ ಅವರೇ ಸಂವಿಧಾನ ಬದಲಾವಣೆ ಮಾತನ್ನು ಅನಂತ್ ಕುಮಾರ್ ಬಾಯಲ್ಲಿ ಹೇಳಿಸಿದ್ದಾರೆ; ಸಿದ್ದರಾಮಯ್ಯ

ನನ್ನ 64 ವರ್ಷದ ರಾಜಕೀಯ ಜೀವನದಲ್ಲಿ ಬೆಂಗಳೂರು ನಗರ, ಬಿಡಿಎ, ಬಿಬಿಎಂಪಿ ಸೇರಿದಂತೆ ನೀರಾವರಿ ಇಲಾಖೆಯನ್ನು ಬಾಚು, ಬಾಚು ಬಾಚಿದ್ದಾರೆ. ರಾಜಸ್ಥಾನ, ಛತ್ತೀಸ್‌ಘಡಕ್ಕೆ ನಮ್ಮ ಸಂಪತ್ತು ಹೋಗುತ್ತಿದೆ. ಕರ್ನಾಟಕದ ಜನತೆಯ ಸಂಪತ್ತನ್ನು ಕೊಳ್ಳೆ ಹೊಡೆಯುವ ಐಎನ್‌ಡಿಐಎ ಅನ್ನು ಸೋಲಿಸಲೇಬೇಕು. ದೇವೇಗೌಡರು ಈ 91ನೇ ವಯಸ್ಸಿನಲ್ಲಿ ಬಿಜೆಪಿಯ ಜೊತೆಗೆ ಹೋಗಿದ್ದಾರೆ ಎಂಥಾ ದುರ್ದೈವ ಎಂದು ಹೇಳಿದ್ದಾರೆ. ಆದರೆ, ಯಾರು ಈ ದೇಶವನ್ನು ನಡೆಸುತ್ತಿದ್ದಾರೋ, ದೇಶಕ್ಕೆ ಕೀರ್ತಿ ತಂದಂತಹ ವ್ಯಕ್ತಿ ನನ್ನ ಪಕ್ಕದಲ್ಲಿ ಕುಳಿತಿರುವ ನರೇಂದ್ರ ಮೋದಿ ಅವರಿದ್ದಾರೆ. ನನ್ನ ತಲೆಯಲ್ಲಿ ಬುದ್ಧಿ ಇಲ್ಲದೇನೇ ಕುಮಾರಸ್ವಾಮಿಯನ್ನು ನೀನು ಮೋದಿ ಜೊತೆಗೆ ಹೋಗು ಅಂತ ಹೇಳಿಲ್ಲ. ಈ ರಾಜ್ಯವನ್ನು ಲೂಟಿ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದಲೇ ನೀನು ಮೋದಿ ಅವರೊಂದಿಗೆ ಹೋಗು ಎಂದು ಹೇಳಿದ್ದೇನೆ ಎಂದು ಹೇಳಿದರು.

ನನ್ನ ಪಕ್ಕದಲ್ಲಿ ಯದುವೀರ್ ಅವರು ಕುಳಿತಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರು ರಾಜಶ್ರೀ ಅವರು ರಾಜ್ಯಕ್ಕಾಗಿ ಏನೆಲ್ಲಾ ಮಾಡುತ್ತಿದ್ದಾರೆ. ಎರಡು ಮಹಾನುಭಾವರು ಈಗ ಇಡೀ ರಾಜ್ಯವನ್ನು ಆಳುತ್ತಿದ್ದಾರೆ. ಆ ಪುಣ್ಯಾತ್ಮರಿಗೆ ನಮೋ ನಮಃ. ಕೇವಲ ಒಬ್ಬ ರಾಜ್ಯದ ಮುಖ್ಯಮಂತ್ರಿ ಕೇವಲ 6 ಕೋಟಿ ಜನರ ಮುಖ್ಯಮಂತ್ರಿಯಾಗಿ, 150 ಕೋಟಿ ಜನರ ಪ್ರಧಾನಮಂತ್ರಿ ಬಗ್ಗೆ ಮಾತನಾಡುತ್ತಾರೆ. ನಾನು 91ನೇ ವಯಸ್ಸಿನಲ್ಲಿ ದಿನಕ್ಕೆ 4 ಸಭೆಯನ್ನು ಮಾಡ್ತೇನೆ. ರಾಜ್ಯದಲ್ಲಿ ಜೆಡಿಎಸ್ 3 ಸೀಟು ಮಾತ್ರವಲ್ಲ, 28 ಸೀಟು ಗೆಲ್ಲುತ್ತೇವೆ. ತುಮಕೂರು, ರಾಯಚೂರು, ಬೀದರ್ ಎಲ್ಲೆಡೆಯೂ ಗೆಲ್ಲಬೇಕು. ಯಡಿಯೂರಪ್ಪನವರೇ ಇಡೀ ರಾಜ್ಯದಲ್ಲಿ ನೀವು ಎಲ್ಲಿ ಕರೆದರೂ ಅಲ್ಲಿಗೆ ಬಮದು ಚುನಾವಣಾ ಪ್ರಚಾರವನ್ನು ಮಾಡುತ್ತೇನೆ. ಇಡೀ ರಾಜ್ಯದಲ್ಲಿ ಎನ್‌ಡಿಎ ಗೆಲ್ಲಬೇಕು ಎಂದು ಹೇಳೀದರು.

ಐದು ವರ್ಷಗಳ ನಂತರದ ಚಿತ್ರಣ ಅದೇ ಊರು, ಅದೇ ಮೈದಾನ, ಸ್ನೇಹಿತರು ಮಾತ್ರ ಬದಲು!

ಇಡೀ ಜಾಗತಿಕ ಮಟ್ಟದಲ್ಲಿ ದೇಶದ ಆರ್ಥಿಕ ಸ್ಥಾನಮಾನವನ್ನು 5ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ತರಲು ನರೇಂದ್ರ ಮೋದಿ ಅವರು ಶಪಥ ಮಾಡಿದ್ದಾರೆ. ಅದಕ್ಕೆ ನಾವೆಲ್ಲರೂ ಸಾಥ್ ನೀಡಬೇಕು. ಈ ಸಮಾವೇಶದಲ್ಲಿ 4 ಲೋಕಸಭಾ ಕ್ಷೇತ್ರಗಳು ಜನರು ಮಾತ್ರ ಬಂದಿದ್ದಾರೆ. ಆದರೆ, ನಾನು ರಾಜ್ಯದ ಜನತೆಗೆ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಈ ದೇಶವನ್ನು ಬಲಯುತವಾಗಿ ಬೆಳೆಸುವ ಶಕ್ತಿ ಎನ್‌ಡಿಎನಲ್ಲಿ ನರೇಂದ್ರ ಮೋದಿಗೆ ಮಾತ್ರವಿದೆ. ಐಎನ್‌ಡಿಐಎ ಅವರು ಯಾರಾರಿದ್ದಾರೆ, ಅವರೆಲ್ಲರೂ ನನಗೆ ಗೊತ್ತಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಕನಸು 400 ಸ್ಥಾನ ಗೆಲ್ಲುವ ಗುರಿ ಏನಿದೆ ಅದಕ್ಕೆ 28 ಸ್ಥಾನಗಳನ್ನು ಕೊಡಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿಳಿಸಿದರು.

Follow Us:
Download App:
  • android
  • ios