Asianet Suvarna News Asianet Suvarna News

ಐಪಿಎಸ್‌ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಮೇಲೆ ಚುನಾವಣಾ ಆಯೋಗ ಕಣ್ಣಿಡಬೇಕು: ಕಾಗೇರಿ

ಹೇಮಂತ್ ನಿಂಬಾಳ್ಕರ್ ಪೊಲೀಸ್ ಅಧಿಕಾರಿಯಾಗಿದ್ದಾಗ IMA ಕೇಸ್ ಆಗಿದೆ. ಹೇಗೆ ಸರ್ಕಾರದ ಅಧಿಕಾರ ಬಳಸಿ ಹೊರಬಂದ್ರು ಎಂದು ಎಲ್ಲರಿಗೂ ಗೊತ್ತಿದೆ. ಪತ್ನಿಗೆ ಟಿಕೆಟ್ ಕೊಡಿಸಲು ಹಿಂದಿನಿಂದಲೂ ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರೆ. ಗಲಾಟೆಯಲ್ಲಿ ಅವರ ಕಾರನ್ನು ರಕ್ಷಿಸಿಕೊಳ್ಳಲಾಗದ ದುರ್ಬಲ ಐಜಿ ಆಗಿದ್ದರು ಎಂದು ಕಿಡಿ ಕಾರಿದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ 

Election Commission should keep an eye on IPS officer Hemant Nimbalkar Says Vishweshwar Hegde Kageri grg
Author
First Published May 2, 2024, 7:48 PM IST

ಕಾರವಾರ(ಮೇ.02):  ಐಪಿಎಸ್‌ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರು ಚುನಾವಣೆ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಚುನಾವಣಾ ಆಯೋಗದ ಇಂಟರ್‌ವಿಂಗ್‌ನವರು ಅವರ ಚಲನವಲನದ ಮೇಲೆ ನಿಗಾ ಇಡಬೇಕು. ಅವರ ಸ್ಥಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪ ಮಾಡಿದ್ದಾರೆ.

ಇಂದು(ಗುರುವಾರ) ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಹೇಮಂತ್ ನಿಂಬಾಳ್ಕರ್ ಪೊಲೀಸ್ ಅಧಿಕಾರಿಯಾಗಿದ್ದಾಗ IMA ಕೇಸ್ ಆಗಿದೆ. ಹೇಗೆ ಸರ್ಕಾರದ ಅಧಿಕಾರ ಬಳಸಿ ಹೊರಬಂದ್ರು ಎಂದು ಎಲ್ಲರಿಗೂ ಗೊತ್ತಿದೆ. ಪತ್ನಿಗೆ ಟಿಕೆಟ್ ಕೊಡಿಸಲು ಹಿಂದಿನಿಂದಲೂ ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರೆ. ಗಲಾಟೆಯಲ್ಲಿ ಅವರ ಕಾರನ್ನು ರಕ್ಷಿಸಿಕೊಳ್ಳಲಾಗದ ದುರ್ಬಲ ಐಜಿ ಆಗಿದ್ದರು ಎಂದು ಕಿಡಿ ಕಾರಿದ್ದಾರೆ. 

ರಾಮಲಲ್ಲಾನಿಗೆ ಅಪಮಾನ ಮಾಡಿದ ಕಾಂಗ್ರೆಸ್ಸಿಗರಿಗೆ ತಕ್ಕ ಪಾಠ: ನರೇಂದ್ರ ಮೋದಿ ವಿಶ್ವಾಸ

ಪರೇಶ್ ಮೇಸ್ತಾ ಹತ್ಯೆ ಆದಾಗ ಕ್ಷೇತ್ರದಲ್ಲೇ ಇದ್ದರೂ ಅವರ ಮನೆಗೆ ಸಿದ್ದರಾಮಯ್ಯ ಯಾಕೆ  ಹೋಗಲಿಲ್ಲ. ಹೇಮಂತ್ ನಿಂಬಾಳ್ಕರ್ ಇರುವ ಸಾಕ್ಷವನ್ನು ನಾಶ ಮಾಡಿದ್ದರು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದ್ದಾರೆ. 

Follow Us:
Download App:
  • android
  • ios