Asianet Suvarna News Asianet Suvarna News

ದೇವೇಗೌಡರು, ಕುಮಾರಸ್ವಾಮಿ ನಿಮ್ಮ ಕಷ್ಟ ಸುಖ ಕೇಳಿದ್ದರಾ? ಡಿ.ಕೆ.ಸುರೇಶ್ ಪ್ರಶ್ನೆ

ಪ್ರತಿಯೊಬ್ಬರ ಅಕೌಂಟಿಗೆ 15 ಲಕ್ಷ ರು. ಹಾಕ್ತೀನಿ ಅಂದು ನಿಮ್ಮಗಳಿಂದ ಬ್ಯಾಂಕ್ ಅಕೌಂಟ್ ಮಾಡಿಸಿದರು. ಅದರ ಹಣ ಬಂತಾ? ಉದ್ಯೋಗ ಕೊಡಿ ಯುವಕರಿಗೆ ಅಂದರೆ ಪಕೋಡ ಮಾರಾಟ ಮಾಡಿ ಎಂದರು. ಕಳಸ ಬಂಡೂರಿ ಮತ್ತು ಎತ್ತಿನಹೊಳೆ ಯೋಜನೆಗೆ ಬಿಜೆಪಿ ಸರ್ಕಾರ ಹಣ ಬಿಡುಗಡೆ ಮಾಡಲಿಲ್ಲ ಎಂದು ಟೀಕಿಸಿದ ಡಿ.ಕೆ. ಸುರೇಶ್‌

Bengaluru Rural Congress Candidate DK Suresh Slams HD Devegowda HD Kumaraswamy grg
Author
First Published Apr 20, 2024, 10:49 AM IST

ಕುದೂರು(ಏ.20):  ದೇವೇಗೌಡರು ಮತ್ತು ಅವರ ಮಗ ಕುಮಾರಸ್ವಾಮಿ ಇಬ್ಬರೂ ಈ ಕ್ಷೇತ್ರದಲ್ಲಿ ಸಂಸದರಾಗಿದ್ದರು. ಅವರು ಯಾವಾಗಲಾದರೂ ಬಂದು ನಿಮ್ಮ ಕಷ್ಟ ಸುಖ ಕೇಳಿದ್ದರಾ? ನಾನು ಕೆಲಸ ಮಾಡಿದ್ದೀನಿ. ಅದಕ್ಕೆ ನಿಮ್ಮ ಹತ್ರ ಬಂದು ಕೂಲಿ ಕೇಳ್ತಾ ಇದ್ದೀನಿ. ನೀವು ನನಗೆ ಆಶೀರ್ವಾದ ಮಾಡಿ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಕೆ.ಸುರೇಶ್ ಮನವಿ ಮಾಡಿದರು. ಕುದೂರು, ತಿಪ್ಪಸಂದ್ರ ಮತ್ತು ಮಾಡಬಾಳ್ ಹೋಬಳಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಮಾಡಿ ತೆರೆದ ವಾಹನದಲ್ಲಿ ಬಹಿರಂಗ ಪ್ರಚಾರ ಮಾಡಿ ಅವರು ಮಾತನಾಡಿದರು.

ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸಿದೆ. ಬಿಜೆಪಿ ಪಕ್ಷ ಸಿಬಿಐ ಹಾಗೀ ಇಡಿ ಇಂತಹವುಗಳನ್ನು ಇಟ್ಟುಕೊಂಡು ಹೆದರಿಸಿಕೊಂಡು ಜನರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಸಂವಿಧಾನಕ್ಕೆ ತೊಂದರೆ ಆಗುತ್ತದೆ. ಜಿಎಸ್ಟಿ ನಮ್ಮ ತೆರಿಗೆಯ ಹಣ ಕೇಳಿದರೂ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಚಿನ್ನದ ಬೆಲೆ ಹೆಚ್ಚಾಯಿತು. ಕಬ್ಬಿಣ ಸಿಮೆಂಟಿನ ಬೆಲೆ ಹೆಚ್ಚಾಯಿತು, ಗೊಬ್ಬರದ ಬೆಲೆ, ಪೆಟ್ರೋಲ್, ಗ್ಯಾಸ್ ಎಲ್ಲದರ ಬೆಲೆಯೂ ಹೆಚ್ಚಾಗಿ ಜನಜೀವನ ಮಾಡುವುದೇ ಕಷ್ಟವಾಗಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಬಿಜೆಪಿಗೆ ಸೋಲಿನ ಭೀತಿಯಿಂದ ಐಟಿ, ಇಡಿ ಅಸ್ತ್ರ ಪ್ರಯೋಗ: ಡಿ.ಕೆ.ಸುರೇಶ್

15 ಲಕ್ಷ ಬಂತಾ? :

ಪ್ರತಿಯೊಬ್ಬರ ಅಕೌಂಟಿಗೆ 15 ಲಕ್ಷ ರು. ಹಾಕ್ತೀನಿ ಅಂದು ನಿಮ್ಮಗಳಿಂದ ಬ್ಯಾಂಕ್ ಅಕೌಂಟ್ ಮಾಡಿಸಿದರು. ಅದರ ಹಣ ಬಂತಾ? ಉದ್ಯೋಗ ಕೊಡಿ ಯುವಕರಿಗೆ ಅಂದರೆ ಪಕೋಡ ಮಾರಾಟ ಮಾಡಿ ಎಂದರು. ಕಳಸ ಬಂಡೂರಿ ಮತ್ತು ಎತ್ತಿನಹೊಳೆ ಯೋಜನೆಗೆ ಬಿಜೆಪಿ ಸರ್ಕಾರ ಹಣ ಬಿಡುಗಡೆ ಮಾಡಲಿಲ್ಲ ಎಂದು ಟೀಕಿಸಿದರು.

ಚೆಂಬು ಕೊಟ್ಟಿದ್ದಾರೆ:

ಶಾಸಕ ಎಚ್.ಸಿ.ಬಾಲಕೃಷ್ಣ ಗ್ರಾಮದ ಆರಂಭದಿಂದಲೇ ತೆರೆದ ವಾಹನದಲ್ಲಿ ಮೈಕ್ ಹಿಡಿದು ರಸ್ತೆಯ ಅಕ್ಕಪಕ್ಕ ನಿಂತಿದ್ದ ಮಹಿಳೆಯರಿಗೆ ತಾಯಿ ನಿಮಗೆ ನಮ್ಮ ಸರ್ಕಾರ ಕೊಡುತ್ತಿರುವ ಎರಡು ಸಾವಿರ ಬರ್ತಾ ಇದೆಯಾ? ಹಾಗಿದ್ರೆ ನಮಗೆ ವೋಟ್ ಹಾಕಿ. ಅಣ್ಣಯ್ಯ ತಮ್ಮಯ್ಯ ನಿಮಗೆ ಕೈಮುಗಿದು ಕೇಳ್ತಾ ಇದೀನಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ. ಬಿಜೆಪಿ ಪಕ್ಷ ನಿಮಗೆ ಏನು ಕೊಟ್ಟಿದೆ ಅಂದರೆ ಇಂದಿನ ಪತ್ರಿಕೆಯ ಜಾಹಿರಾಜು ತೋರಿಸಿ ಚೆಂಬು ಕೊಟ್ಟಿದ್ದಾರೆ. ಅಂತ ಒಂದು ಕಿಮೀ ದೂರದವರೆಗೂ ಮತಯಾಚಿಸಿದರು.

ಡಾ। ಮಂಜುನಾಥ್‌ರಿಗೆ ಜಯದೇವ ಆಸ್ಪತ್ರೆಗೆ ಆಯ್ಕೆ ಮಾಡದಂತೆ ಡಿಕೆಶಿ ತಡೆಯೊಡ್ಡಿದ್ದರು: ದೇವೇಗೌಡ

ನೇಕಾರರಿಗೆ 10 ಹೆಚ್ಪಿ ಉಚಿತ ವಿದ್ಯುತ್ ಕೊಡುತ್ತಿದ್ದೇವೆ. ಕುದೂರಲ್ಲಿ ವ್ಯವಸ್ಥಿತ ಬಸ್ ನಿಲ್ದಾಣ ಹಾಗೂ ಕೆಎಸ್ಆರ್‌ಟಿಸಿ ಬಸ್ ಡಿಪೋವನ್ನು ಇನ್ನು ಆರು ತಿಂಗಳಲ್ಲಿ ನಿರ್ಮಾಣ ಮಾಡಲಾಗುವುದು. ಸಿದ್ದಗಂಗಾ ಶ್ರೀಗಳ ಜನ್ಮಸ್ಥಳ ವೀರಾಪುರ ಗ್ರಾಮಾಭಿವೃದ್ಧಿ ಮಾಡಿ ಪುತ್ಥಳಿ ಕಾರ್ಯವನ್ನು ಪೂರ್ಣಗೊಳಿಸಲಾಗುವುದು, ರಾಮಲೀಲಾ ಮೈದಾನಕ್ಕೆ ಹೈಟೆಕ್ ಸ್ಪರ್ಶ ನೀಡಲಾಗುವುದು, ಕುದೂರು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗುವುದು ಎಂದರು.

ದೇವೇಗೌಡರಿಂದ ಉಂಡಮನೆಗೆ ದ್ರೋಹ:

ಉಚಿತ ಯೋಜನೆಗಳ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಅಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿದರು. ಕಾಂಗ್ರೆಸ್ ಮುಖಂಡ ಜಯಶಂಕರ್, ಶ್ರೀಗಿರಿಪುರ ಪ್ರಕಾಶ್, ಶಿವಪ್ರಸಾದ್, ಹೊನ್ನಪ್ಪ, ದೀಪು, ಹನುಮಂತಪ್ಪ, ಬಾಲರಾಜ್, ಯತೀಶ್, ಮಂಜೇಶ್ ಕುಮಾರ್ ಹಾಜರಿದ್ದರು. 

Follow Us:
Download App:
  • android
  • ios