Asianet Suvarna News Asianet Suvarna News

ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ನಾನೂ ನೋಡಿದ್ದೇನೆ, ತಾಯಿ ವಯಸ್ಸಿನವರೊಂದಿಗೆ ಅಸಹ್ಯ ನೋಡೋಕಾಗ್ಲಿಲ್ಲ; ಡಿ.ಕೆ. ಸುರೇಶ್

ಸಂಸದ ಪ್ರಜ್ವಲ್ ರೇವಣ್ಣನ ಅಶ್ಲೀಲ್ ವಿಡಿಯೋಗಳಲ್ಲಿ ನಾನು ಒಂದೋ‌ ಎರಡೋ ವೀಡಿಯೋ ವಾಟ್ಸಪ್ ನಲ್ಲಿ ನೋಡಿದ್ದೀನಿ. ಅವರ ತಾಯಿ ವಯಸ್ಸಿನವರನ್ನ ಆ ರೀತಿ ನಡೆಸಿಕೊಂಡೋದನ್ನ ಎರಡು ನಿಮಿಷ ಕೂಡ ನೋಡೋಕೆ ಆಗಲಿಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.

Bengaluru MP DK Suresh says i have also seen Hassan MP Prajwal Revanna obscene video sat
Author
First Published Apr 30, 2024, 3:06 PM IST

ಬೆಂಗಳೂರು (ಏ.30): ಸಂಸದ ಪ್ರಜ್ವಲ್ ರೇವಣ್ಣನ ಅಶ್ಲೀಲ್ ವಿಡಿಯೋಗಳಲ್ಲಿ ನಾನು ಒಂದೋ‌ ಎರಡೋ ವೀಡಿಯೋ ವಾಟ್ಸಪ್ ನಲ್ಲಿ ನೋಡಿದ್ದೀನಿ. ಅವರ ತಾಯಿ ವಯಸ್ಸಿನವರನ್ನ ಆ ರೀತಿ ನಡೆಸಿಕೊಂಡೋದನ್ನ ಎರಡು ನಿಮಿಷ ಕೂಡ ನೋಡೋಕೆ ಆಗಲಿಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.

ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಇಡೀ ದೇಶದಲ್ಲಿನೇ ನಡೆದ ಅತೀ ದೊಡ್ಡ ಹಗರಣವಾಗಿದೆ. ಇದು ನಮ್ಮ ರಾಜ್ಯಕ್ಕೆ ಹಾಗೂ ರಾಜ್ಯದ ಮಹಿಳೆಯರಿಗೆ ಆಗಿರುವ ಅತೀ ದೊಡ್ಡ ಅವಮಾನವಾಗಿದೆ. ಸಂತ್ರಸ್ತರಿಗೆ ನ್ಯಾಯ ರಕ್ಷಣೆ ಕೊಡಿಸಬೇಕಿದೆ. ಇನ್ನು ವಾಟ್ಸಾಪ್‌ನಲ್ಲಿ ಬಂದಿದ್ದ ಒಂದೆರಡು ವಿಡಿಯೋಗಳನ್ನು ನಾನು ನೋಡಿದ್ದೇನೆ. ಸಂಸದನಾಗಿ ತನ್ನ ಕಚೇರಿಯನ್ನೇ ದುರ್ಬಳಕೆ ಮಾಡಿಕೊಂಡಿದ್ದಾರೆ. ಅದರಲ್ಲಿ ತನ್ನ ತಾಯಿಯ ವಯಸ್ಸಿನ ಮಹಿಳೆಯನ್ನು ನಡೆಸಿಕೊಂಡಿರುವುದನ್ನು ನೋಡಿದರೆ ಅಸಹ್ಯವಾಗುತ್ತದೆ ಎಂದು ತಿಳಿಸಿದರು.

ಪ್ರಜ್ವಲ್ ರೇವಣ್ಣನ ಕಾರು ಚಾಲಕ ಕಾರ್ತಿಕ್ ನನಗೆ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಕೊಟ್ಟ; ವಕೀಲ ದೇವರಾಜೇಗೌಡ

ಪ್ರಜ್ವಲ್ ರೇವಣ್ಣರ ಪೈನ್ ಡ್ರೈವ್ ಡಿಕೆ ಬ್ರದರ್ಸ್‌ಗೆ ಮೊದಲೇ ಬಂದಿತ್ತು:  ವಕೀಲ ದೇವರಾಜೇಗೌಡ ನನಗಿಂತ ಮೊಲದೇ ಪ್ರಜ್ವಲ್ ರೇವಣ್ಣನ ವಿಡಿಯೋ ಡಿ.ಕೆ. ಬ್ರದರ್ಸ್‌ಗೆ ತಲುಪಿತ್ತು ಎಂದು ಹೇಳಿಕೊಂಡಿದ್ದಾರೆ. ಆದರೆ, ಇದು ಗಮನಕ್ಕೆ ಬಂದಿದ್ರೆ, ಮುಂಚೆನೆ ಹೊರಗೆ ಬರ್ತಿತ್ತು. ಗುಸುಗುಸು ಸುದ್ದಿ ಹಾಸನ ಜಿಲ್ಲೆಯಲ್ಲಿ ಇತ್ತು. ದೇವರಾಜೇಗೌಡರು  ಬಿಜೆಪಿ ಹೈಕಮಾಂಡ್ ಗೆ ಪತ್ರ ಬರೆದಿದ್ದರು.ಹೆಚ್.ಡಿ.ರೇವಣ್ಣ ಹಳೆಯ ವಿಡಿಯೋ ಎಂದು ಒಪ್ಪಿಕೊಂಡಿದ್ದಾರೆ. ಸಂತ್ರಸ್ತ ಮಹಿಳೆಯರ ರಕ್ಷಣೆ ಮಾಡಬೇಕು . 500ಕ್ಕೂ ಹೆಚ್ಚು ಸಂತ್ರಸ್ತ ಮಹಿಳೆಯರಿದ್ದಾರೆ ಎಂಬ ಮಾಹಿತಿ ಇದೆ. ಇದಕ್ಕೆಲ್ಲ ದೇವೇಗೌಡರ ಕುಟುಂಬ ಇದಕ್ಕೆ ನೇರ ಹೊಣೆಯಾಗಿದೆ ಎಂದರು.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಪ್ರಧಾನಿ ಮೋದಿಯೇ ನೇರ ಕಾರಣ; ಸಂಸದ ಡಿ.ಕೆ. ಸುರೇಶ್ ಆರೋಪ

ರಾಜ್ಯ ಸರ್ಕಾರ ಪ್ರಜ್ವಲ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬ ಅಮಿತ್ ಶಾ ಹೇಳಿಕೆ ಕುರಿತು ಮನಾತನಾಡಿ, ರಾಜ್ಯದಲ್ಲಿ ನಡೆದ ಎಲ್ಲಾ ವಿಚಾರವನ್ನ ಅಮಿತ್ ಶಾ ರಿಗೆ ಪತ್ರದ ಮೂಲಕ ಬರೆದಿದ್ದಾರೆ. ರಾಜ್ಯದ ನಾಯಕರು‌ ಟಿಕೆಟ್ ಕೊಡಬಾರದು ಎಂದು ರಾಜ್ಯ, ರಾಷ್ಟ್ರೀಯ  ನಾಯಕರಿಗೆ ಸ್ಥಳೀಯ ನಾಯಕರು ಪತ್ರ ಬರೆದಿದ್ದಾರೆ. ಹೀಗಿದ್ದರೂ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ಅವರ ಪರ ಪ್ರಚಾರ ಮಾಡಿದ್ದಾರೆ. ಅಮಿತ್ ಶಾ ಅವರ ಈ ಹೇಳಿಕೆ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತದೆ. ದೊಡ್ಡ ಕುಟುಂಬಕ್ಕೆ ಹೆಸರಿಗೆ ಧಕ್ಕೆ ಆಗುತ್ತದೆ. ಮೊದಲು‌ ಪ್ರಜ್ವಲ್ ರೇವಣ್ಣನನ್ನ ವಿದೇಶದಿಂದ ಕರೆ ತರುವ ಕೆಲಸ ಮಾಡಲಿ. ತಾಳಿ ಭಾಗ್ಯವನ್ನ ನೀವು ಯಾವ ರೀತಿ‌ ಕೊಡ್ತಿದ್ದೀರಿ? ಆ ಸಂತ್ರಸ್ತ ಹೆಣ್ಣು ಮಕ್ಕಳ ಕತೆ ಏನು? ಅಮಿತ್ ಶಾ, ಮೋದಿ, ದೇವೇಗೌಡರರು, ಹೆಚ್‌ಡಿಕೆ ಸೆಲೆಕ್ಟ್ ಮಾಡಿದ ಕ್ಯಾಂಡಿಟೇಟ್ ಇದು. ಇದಕ್ಕೆಲ್ಲ ಅವರೇ ಉತ್ತರ ಕೊಡ್ಬೇಕು ಎಂದು ಕೇಂದ್ರ ಸಚಿವ ಅಮಿತ್‌ ಶಾ ಹೇಳಿಕೆಗೆ ಸಂಸದ ಡಿ.ಕೆ‌. ಸುರೇಶ್ ತಿರುಗೇಟು ನೀಡಿದರು.

Follow Us:
Download App:
  • android
  • ios