Asianet Suvarna News Asianet Suvarna News

ಕಚೇರಿಯಲ್ಲಿ ಲೈಂಗಿಕ ದೌರ್ಜನ್ಯ: ದೂರು ನೀಡಲು ‘ಶೀ ಬಾಕ್ಸ್’

ಲೈಂಗಿಕ ದೌರ್ಜನ್ಯ ಎಲೆಕ್ಟ್ರಾನಿಕ್ ಬಾಕ್ಸ್ (ಸೆಕ್ಷುಯಲ್ ಹೆರಾಸ್‌'ಮೆಂಟ್ ಎಲೆಕ್ಟ್ರಾನಿಕ್ ಬಾಕ್ಸ್) ‘ಶೀ ಬಾಕ್ಸ್-(SHE ಬಾಕ್ಸ್)’ ಅನ್ನು ಸಾಧ್ಯವಾದಷ್ಟು ಸಂವಾದಾತ್ಮಕಗೊಳಿಸುವಂತೆ ಸಚಿವೆ ಮನೇಕಾ ಗಾಂಧಿ ಸಿಬ್ಬಂದಿಗೆ ನಿರ್ದೇಶಿಸಿದ್ದಾರೆ. ಆರಂಭದಲ್ಲಿ ಕೇಂದ್ರ ಸರ್ಕಾರಿ ನೌಕರರು ಇಲ್ಲಿ ದೂರು ದಾಖಲಿಸಬಹುದು, ಖಾಸಗಿ ವಲಯದ ನೌಕರರೂ ದೂರು ದಾಖಲಿಸುವಂತಾಗಲು ವ್ಯಾಪ್ತಿ ವಿಸ್ತರಿಸಲಾಗುತ್ತದೆ.

women can use she box to file online complaint against sexual harassment at workplace

ನವದೆಹಲಿ(ಜು.25): ಕಚೇರಿಗಳಲ್ಲಿ ಲೈಂಗಿಕ ದೌರ್ಜನ್ಯ ಸಂಬಂಧಿ ದೂರುಗಳನ್ನು ದಾಖಲಿಸಲು ಮಹಿಳಾ ಸಿಬ್ಬಂದಿಗೆ ಕೇಂದ್ರ ಸರ್ಕಾರ ಆನ್‌'ಲೈನ್ ವೇದಿಕೆಯೊಂದನ್ನು ಲೋಕಾರ್ಪಣೆ ಮಾಡಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಈ ವೆಬ್‌'ಸೈಟ್ ಸಿದ್ಧವಾಗಿದೆ. ಲೈಂಗಿಕ ದೌರ್ಜನ್ಯ ಎಲೆಕ್ಟ್ರಾನಿಕ್ ಬಾಕ್ಸ್ (ಸೆಕ್ಷುಯಲ್ ಹೆರಾಸ್‌'ಮೆಂಟ್ ಎಲೆಕ್ಟ್ರಾನಿಕ್ ಬಾಕ್ಸ್) ‘ಶೀ ಬಾಕ್ಸ್-(SHE ಬಾಕ್ಸ್)’ ಅನ್ನು ಸಾಧ್ಯವಾದಷ್ಟು ಸಂವಾದಾತ್ಮಕಗೊಳಿಸುವಂತೆ ಸಚಿವೆ ಮನೇಕಾ ಗಾಂಧಿ ಸಿಬ್ಬಂದಿಗೆ ನಿರ್ದೇಶಿಸಿದ್ದಾರೆ. ಆರಂಭದಲ್ಲಿ ಕೇಂದ್ರ ಸರ್ಕಾರಿ ನೌಕರರು ಇಲ್ಲಿ ದೂರು ದಾಖಲಿಸಬಹುದು, ಖಾಸಗಿ ವಲಯದ ನೌಕರರೂ ದೂರು ದಾಖಲಿಸುವಂತಾಗಲು ವ್ಯಾಪ್ತಿ ವಿಸ್ತರಿಸಲಾಗುತ್ತದೆ.

epaperkannadaprabha.com

Follow Us:
Download App:
  • android
  • ios